ರಾಷ್ಟ್ರೀಯ ಏಕತಾ ದಿನ ಹಾಗೂ ಸಂಕಲ್ಪ ದಿನ ಆಚರಣೆ

0
45
loading...

ಬೆಳಗಾವಿ 2:ಸರದಾರ ವಲ್ಲಭಬಾಯಿ ಪಟೇಲರು ತಮ್ಮ ಬದುಕಿನ ಉದ್ದಕ್ಕೂ ದೇಶವನ್ನು ಕಟ್ಟುವ ಕಾರ್ಯಮಾಡಿದರು. ಸ್ವತಂತ್ರ ಭಾರತದಲ್ಲಿ ದೇಶಿಯ ಸಂಸ್ಥಾನಗಳನ್ನು ವಿಲೀನಗೊಳಿಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವವಾಗಿತ್ತೆಂದು ಲಿಂಗರಾಜ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್.ಎಸ್.ಮಸಳಿಯವರು ನುಡಿದರು.
ಅವರು ಮಹಾವಿದ್ಯಾಲಯದಲ್ಲಿ ಸರದಾರ ವಲ್ಲಭಬಾಯಿ ಪಟೇಲ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಏಕತಾ ದಿನ ಹಾಗೂ ಇಂದಿರಾಗಾಂಧಿಯವರ ಸಂಕಲ್ಪದಿನದ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದರು. ವಲ್ಲಭಬಾಯಿ ಪಟೇಲರು ಸ್ವಾತಂತ್ರ್ಯ ಹೋರಾಟಗಾರರಾಗಿ ಗಾಂಧೀಜಿಯವರ ತತ್ತ್ವಾದರ್ಶಗಳಲ್ಲಿ ನಡೆಯುತ್ತಾ ದೇಶದ ಐಕ್ಯತೆಗೆ ಶ್ರಮಿಸಿದರು. ಅಖಂಡ ಭಾರತವನ್ನು ಕಟ್ಟುವ ಅವರ ಸಂಕಲ್ಪವು ಯಶ್ವಸಿಯಾಯಿತು.
ಅಂತೆಯೇ ಸ್ವತಂತ್ರ ಭಾರತದಲ್ಲಿ ಪ್ರಥಮ ಮಹಿಳಾ ಪ್ರಧಾನಮಂತ್ರಿಗಳಾದ ಶ್ರೀಮತಿ ಇಂದಿರಾಗಾಂಧಿಯವರು ತಮ್ಮ ದಿಟ್ಟ ವ್ಯಕ್ತಿತ್ವದಿಂದ ಜಗತ್ತಿನ ಗಮನವನ್ನು ಸೆಳೆದರು. ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಕಾರ್ಯನಿರ್ವಹಿಸಿದರೆಂದು ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಏಕತಾ ಓಟವನ್ನು ಏರ್ಪಡಿಸಲಾಗಿತ್ತು ಮಹಾವಿದ್ಯಾಲಯದ ಎಲ್ಲ ಪ್ರಾಧ್ಯಾಪಕರು ಹಾಗು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಹಾಗೂ ಸ್ನಾತಕೋತ್ತರ ಮತ್ತು ಪದವಿ ವಿದ್ಯಾರ್ಥಿಗಳಿಗಾಗಿ ಸರದಾರ ವಲ್ಲಭಯಾಯಿ ಪಟೇಲ ಅವರ ಜೀವನ ಮತ್ತು ಸಾಧನೆ ಕುರಿತಾಗಿ ಏರ್ಪಡಿಸಲಾಗಿದ್ದ ಭಾಷಣ, ನಿಬಂಧ ಸ್ಪರ್ಧೆಗಳಲ್ಲಿ ನಾಗರಾಜ ಬಾಗೇವಾಡಿ, ರೂಪಾಲಿ ಸಬ್ರಿನ್ ತಾಜ್, ವರ್ಷಾ ಸೋಲ್ಲಾಪೂರೆ, ಪುನೀತ ಮುಂತಾದ ವಿಜೇತರಿಗೆ ಪ್ರಾಚಾರ್ಯರು ಬಹುಮಾನಗಳನ್ನು ವಿತರಿಸಿದರು. ಡಾ. ಗುರುದೇವಿ ಹುಲೆಪ್ಪನವರಮಠ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಮಹಾವಿದ್ಯಾಲಯದ ಎನ್.ಎಸ್.ಎಸ್. ಅಧಿಕಾರಿಗಳಾದ ಪ್ರೊ.ಎಸ್.ಎನ್.ಮೂಲಿಮನಿಯವರು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here