ಅಧಿವೇಶನದಲ್ಲಿ ಹೆಚ್ಚು ಸುದ್ದಿ ಮಾಡಿದವರು ಹೆಡ್ ಮಾಸ್ಟರ್

0
16
loading...

ಬೆಳಗಾವಿ, ಡಿ.20- ಕುಂದಾನಗರಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳಿಗಿಂತ ಹೆಚ್ಚು ಸುದ್ದಿ ಮಾಡಿದ್ದು ಹೆಡ್ ಮಾಸ್ಟರ್ ಎಂದೇ ಎಲ್ಲರಿದಂದಲೂ ಕರೆಸಿಕೊಳ್ಳುವ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಕಾರ್ಯವೈಖರಿ.
ಅವರ ನೇರ, ನಿಷ್ಟುರ ಮತ್ತು ಕಠೋರವಾದ ನಡವಳಿಕೆ ಪ್ರತಿಯೊಬ್ಬರ ಮೆಚ್ಚುಗೆಗೆ ಪಾತ್ರವಾಗಿದೆ. ಆಡಳಿತ ಮತ್ತು ಪ್ರತಿಪಕ್ಷ ಎನ್ನದೆ ಯಾರೇ ತಪ್ಪು ಮಾಡಿದರೂ ಬೀಸುತ್ತಿದ್ದ ಚಾಟಿ ಏಟಿಗೆ ಪ್ರತಿಯೊಬ್ಬರು ತತ್ತರಿಸುತ್ತಿದ್ದರು.
ಶಾಲೆಯಲ್ಲಿ ಮಕ್ಕಳನ್ನು ಗದರಿಸಿದಂತೆ , ಸದನದಲ್ಲಿ ಶಾಸಕರನ್ನು ನಿಯಂತ್ರಣ ಮಾಡುತ್ತಿದ್ದರು. ಸಂದರ್ಭ ಬಂದಾಗ ಸರ್ಕಾರಕ್ಕೂ ಬೀಸಿ ಮುಟ್ಟುಸುತ್ತಿದ್ದರು. ಜೊತೆಗೆ ಪ್ರತಿಪಕ್ಷಗಳು ಅಡ್ಡದಾರಿಹಿಡಿದರೆ ಅವರನ್ನು ಸರಿದಾರಿಗೆ ತಂದು ಸುಗಕ ಕಲಾಪಕ್ಕೆ ಅನುವು ಮಾಡಿಕೊಡುತ್ತಿದ್ದರು.
ಕಾಗೋಡು ಅವರು ಸದನವನ್ನು ನಿರ್ವಾಹಿಸುತ್ತಿದ್ದನ್ನು ನೋಡಿದರೆ ಈ ಹಿಂದೆ ಲೋಕಸಭೆಯಲ್ಲಿ ಸ್ಪೀಕರ್ ಸೋಮನಾಥ್ ಚಟರ್ಜಿ ಅವರಂತೆ ಸದನವನ್ನು ನಿರ್ವಾಹಣೆ ಮಾಡುತ್ತಿದ್ದದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಈ ಬಾರಿಯ ಅಧಿವೇಶನದಲ್ಲಿ ಸ್ಪಷ್ಟವಾಗಿ ಗೋಚರಿಸಿದ್ದನೆಂದರೆ ಪ್ರಶ್ನೆ ಕೇಳುವವರು ಮತ್ತು ಉತ್ತರಿಸುವವರು ಸರಿಯಾಗಿ ತಯಾರಿ ನಡೆಸಿಕೊಂಡು ಬರಬೇಕಿತ್ತು.ಇಲ್ಲದಿದ್ದರೆ ಮುಖ ಮೂತಿ ನೋಡದೆ ಎಲ್ಲರನ್ನು ಹಿಗ್ಗಾ ಮುಗ್ಗಾ ತರಾಟೆಗೆತೆಗೆದುಕೊಳ್ಳುತ್ತಿದ್ದರು.ಆಡಳಿತ ಇಲ್ಲವೇ ಪ್ರತಿಪಕ್ಷದ ಸದಸ್ಯರು ಎನ್ನದೆ ತಪ್ಪು ಉತ್ತರ ಬಂದರೆ ಅವರ ಕೆಂಗಣ್ಣಿಗೆ ಗುರಿಯಾಗಬೇಕಿತ್ತು.
ಮತ್ತೊಂದು ವಿಶೇಷವೆಂದರೆ ಚಳಿಗಾಲದ ಅಧುವೇಶನದಲ್ಲಿ ಚಳಿಬಿಡಿಸಿಕೊಂಡ ಸಚಿವರೆಂದರೆ ಯೂ.ಟಿ. ಖಾದರ್, ರಮಾನಾಥ್ ರೈ, ಟಿ.ಬಿ. ಜಯಚಂದ್ರ, ಸೇರಿದಂತೆ ಮತ್ತಿತರರು ಕಾಗೋಡು ಅವರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.
ಅದರಲ್ಲೂ ವೈದ್ಯರ ನೇಮಕಾತಿಯ ಬಗ್ಗೆ ಗುರುವಾರ ಯು.ಟಿ. ಖಾದರ್ ಅವರನ್ನು ಬೆದರಿಸಿದ ರೀತಿ ಎಂತಹವರಿಗೂ ಚಳಿ ಬರುವಂತಿತ್ತು. ಅವರು ಹಾಕಿದ ಆವಾಜ್‍ಗೆ ಸದನದಲ್ಲಿ ಸೂಜಿ ಬಿದ್ದರೂ ಕೇಳುವಂತಿತ್ತು.
84 ರ ವಯಸ್ಸಿನಲ್ಲೂ ಪಾದರಸಂತೆ ಓಡಾಡಿಕೊಂಡು ಸದನವನ್ನು ಅಚ್ಚುಕಟ್ಟಾಗಿ ನಿರ್ವಾಹಣೆ ಮಾಡುತ್ತಿದ್ದರು. ಹರಳು ಹುರಿದಂತೆ ಮಾತನಾಡುವುದು, ವಿಷಯ ಪಾಂಡಿತ್ಯ, ಸರ್ಕಾರದ ಮೇಲೆ ಮುಗಿಬೀಳುತ್ತಿದ್ದ ದೃಶ್ಯ ಇವರು ಸ್ಪೀಕರೋ ಇಲ್ಲವೇ ಪ್ರತಿಪಕ್ಷದ ನಾಯಕರೇ ಎಂಬ ಸಹಜ ಪ್ರಶ್ನೆ ಮೂಡುತ್ತಿತ್ತು.
ಇಡೀ ಅಧಿವೇಶನದಲ್ಲಿ ಕಾಗೋಡು ಅವರ ಕಾರ್ಯಶೈಲಿ ನಿಜಕ್ಕೂ ಮುಂದಿನ ಜನಾಂಗಕ್ಕೂ ಮಾದರಿ ಎಂದರೆ ಅತಿಶಯೋಕ್ತಿಯಾಗಲಾರದು.

loading...

LEAVE A REPLY

Please enter your comment!
Please enter your name here