ಇನ್ನೂ ಮುಂದೆ ನೇರ ಚರ್ಚೆ : ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ರೂಲಿಂಗ್

0
15
loading...

ಬೆಳಗಾವಿ, ಡಿ.12- ಇನ್ನೂ ಮುಂದೆ ಯಾವುದೇ ನಿಲುವಳಿ ಸೂಚನೆಗಳನ್ನು ಪೂರ್ವ ಭಾವಿ ಪ್ರಸ್ತಾಪಕ್ಕೆ ಅವಕಾಶ ನೀಡದೆ ನೇರವಾಗಿ ಸಾರ್ವಜನಿಕ ಮಹತ್ವದ ಚರ್ಚೆಯ ವಿಷಯವಾಗಿ ಪರಿವರ್ತಿಸಿ ನಿಯಮ 69ರಡಿ ನೇರವಾಗಿ ಚರ್ಚೆಗೆ ಅವಕಾಶ ನೀಡುವುದಾಗಿ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ರೂಲಿಂಗ್ ನೀಡಿದ್ದಾರೆ.
ಇಂದು ಕಲಾಪ ಆರಂಭವಾಗುತ್ತಿದ್ದಂತೆ ವೈ.ಎಸ್.ವಿ.ದತ್ತಾ ಮರಳಿನ ಕೊರತೆಯನ್ನು ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ನೇರವಾಗಿ ನಿಯಮಾವಳಿ 69ರಡಿ ಚರ್ಚೆಗೆ ಅವಕಾಶ ನೀಡುವುದಾಗಿ ಪ್ರಕಟಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ದತ್ತಾ ಹಾಗೂ ಜೆಡಿಎಸ್ ಸದಸ್ಯರ,ು ಮರಳಿನ ಕೊರತೆಯ ಕುರಿತು ನಿಲುವಳಿ ಸೂಚನೆಯನ್ನು ನಿನ್ನೆಯೂ ನೀಡಲಾಗಿತ್ತು. ಪೂರ್ವ ಭಾವಿ ವಿಷಯ ಪ್ರಸ್ತಾಪಕ್ಕೆ ಅವಕಾಶ ನೀಡಿಲ್ಲ ಎಂದರು. ಪೂರ್ವಭಾವಿ ವಿಷಯ ಮಂಡನೆಯಿಂದ ಕಾಲ ವ್ಯಯವಾಗುತ್ತದೆ. ನೇರವಾಗಿ ಚರ್ಚೆ ಮಾಡಿ ಅವಕಾಶ ನೀಡುತ್ತೇನೆ ಎಂದರು. ಹಾಗಿದ್ದರೆ ಇನ್ನು ಮುಂದೆ ಯಾವ ನಿಲುವಳಿ ಸೂಚನೆಗಳನ್ನು ಪೂರ್ವಭಾವಿ ವಿಷಯ ಮಂಡನೆಗೆ ಅವಕಾಶ ನೀಡುವುದಿಲ್ಲವೆ ಎಂದು ದತ್ತ ಪ್ರಶ್ನಿಸಿದರು. ಬೇಡ ನೇರವಾಗಿ ಚರ್ಚೆ ಮಾಡಿ ಅವಕಾಶ ನೀಡುತ್ತೇನೆ ಎಂದು ಸಭಾಧ್ಯಕ್ಷರು ಭರವಸೆ ನೀಡಿದರು.
ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ಕೂಡ ಅಕ್ರಮ ಮರಳುಗಣಿಗಾರಿಕೆ ಕುರಿತಂತೆ ನೋಟಿಸ್ ನೀಡಿ ಪೂರ್ವಭಾವಿ ವಿಷಯ ಮಂಡನೆಗೆ ಅವಕಾಶ ಕೋರಿತ್ತು.

loading...

LEAVE A REPLY

Please enter your comment!
Please enter your name here