ಉಗ್ರರ ದಾಳಿ ಖಂಡನೀಯ : ಅಮೇರಿಕಾ

0
15
loading...

ವಾಷಿಂಗ್ಟನ್, ಡಿ 07- ಜಮ್ಮು ಮತ್ತು ಕಾಶ್ಮೀರದ ಮೇಲೆ ಉಗ್ರ ಸಂಘಟನೆಗಳು ನಡೆಸುತ್ತಿರುವ ದಾಳಿ ಕುರಿತಂತೆ ಶನಿವಾರ ಪ್ರತಿಕ್ರಿಯೆ ನೀಡಿರುವ ಅಮೆರಿಕಾ ಇಂದೊಂದು ಖಂಡನೀಯ ಕೃತ್ಯ ಎಂದು ಹೇಳಿದೆ.
ಉಗ್ರರ ದಾಳಿ ಕುರಿತಂತೆ ಇಂದು ಪ್ರತಿಕ್ರಿಯೆ ನೀಡಿರುವ ಅಮೆರಿಕಾ ಉಗ್ರರ ಈ ಕೃತ್ಯವನ್ನು ಖಂಡಿಸಿದ್ದು, ಗುಂಡಿನ ದಾಳಿಯಿಂದಾಗಿ ಅಮಾಯಕ ನಾಗರೀಕರು, ಸೈನಿಕರು, ಪೆÇಲೀಸರು ಸಾವನ್ನಪ್ಪಿದ್ದಾರೆ. ಇಂತಹ ಕೃತ್ಯವನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದ್ದು, ಉಗ್ರರನ್ನು ಹತ್ತಿಕ್ಕುವ ಸಲುವಾಗಿ ಭಾರತ ಕೈಗೊಳ್ಳುವ ಕಾರ್ಯಾಚರಣೆಗಳಲ್ಲಿ ಸಹಭಾಗಿತ್ವವಹಿಸಿಕೊಂಡು ಭಾರತದೊಂದಿಗೆ ಕೆಲಸ ಮಾಡಲಿದೆ ಎಂದು ಅಮೆರಿಕಾದ ಅಧಿಕಾರಯೊಬ್ಬರು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ ಪ್ರಯುಕ್ತ ಸೋಮವಾರ ಶ್ರೀನಗರದಲ್ಲಿ ನರೇಂದ್ರ ಮೋದಿ ಕೈಗೊಳ್ಳಲಿರುವ ರ್ಯಾಲಿಯ ಮೇಲೆ ಉಗ್ರರ ಕರಿನೆರಳು ಬಿದ್ದಿದ್ದು. ನಿನ್ನೆ ಕಾಶ್ಮೀರದ ಹಲವೆಡೆ ಗುಂಡಿನ ದಾಳಿ ಹಾಗೂ ಆತ್ಮಾಹುತಿ ದಾಳಿ ನಡೆಸಿತ್ತು. ದಾಳಿಯಿಂದಾಗಿ ಸುಮಾರು 20 ಯೋಧರು ಸಾವನ್ನಪ್ಪಿದ್ದರಲ್ಲದೇ 11 ಮಂದಿ ಗಂಭೀರ ಗಾಯಗೊಂಡಿದ್ದರು.

loading...

LEAVE A REPLY

Please enter your comment!
Please enter your name here