ನಿವೇಶನ ರಹಿತರಿಗೆ ನಿವೇಶನ ಕೊಡಲು ಒತ್ತಾಯ

0
18
loading...

ಬೆಳಗಾವಿ1 : ರಾಜ್ಯದ ಕಡು ಬಡವರು ಮತ್ತು ಆರ್ಥಿಕವಾಗಿ ಹಿಂದುಳಿದ ನಿವೇಶನ ರಹಿತರನ್ನು ಪ್ರಾಮಾಣಿಕವಾಗಿ ಗುರುತಿಸಿ ಅಂತವರಿಗೆ ಸರಕಾರಿ ಜಮೀನಿನಲ್ಲಿ ನಿವೇಶನಗಳನ್ನು ಹಂಚಲು ಸರಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ನಿವೇಶನ ರಹಿತರ ಹೋರಾಟ ಸಮಿತಿಯ ಸಲಹೆಗಾರ ರಾಮಾಂಜನಪ್ಪ ಆಲ್ದಳ್ಳಿ ಇಂದಿಲ್ಲಿ ಹೇಳಿದರು.

ಅವರು ರವಿವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ರಾಜ್ಯದಲ್ಲಿ ಇತ್ತೀಚಿನ ಅಂಕಿ ಅಂಶಗಳ ಆಧಾರದಲ್ಲಿ ಸುಮಾರು 14.35 ಲಕ್ಷದಷ್ಟು ವಸತಿಹೀನ ಕುಟುಂಬಗಳು ಮತ್ತು 14.34 ಲಕ್ಷ ನಿವೇಶನ ರಹಿತ ಕುಟುಂಬಗಳು ಕಂಡು ಬಂದಿವೆ ಎಂದು ಅಂದಾಜಿಸಲಾಗಿದೆ. ಕಾರಣ ನಮ್ಮ ಸಮಿತಿಯಿಂದ ಪ್ರತಿ ಬಡಕುಟುಂಬಗಳಿಗೆ ನಿವೇಶನಗಳನ್ನು ನೀಡುವುದಾಗಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ಗೃಹ ನಿರ್ಮಾಣ ಮಂಡಳಿಗಳು ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ನಿವೇಶನ ರಹಿತರ ಅವಶ್ಯಕತೆಯನ್ನು ಆಧರಿಸಿ ಅನಿವಾರ್ಯವಾದರೆ ಸರಕಾರವೇ ಹೆಚ್ಚುವರಿ ಜಮೀನನ್ನು ಖರೀದಿಸಿ ವಿತರಿಸುವ ಸೂಕ್ತವಾದ ವೈಜ್ಞಾನಿಕ ನೀತಿಯನ್ನು ರೂಪಿಸಿ. ಅಭಾವ ಸೃಷ್ಟಿಸಿ ಹಣ ಗಳಿಸುವ ಕೇಲವು ಖಾಸಗಿ ಬಿಲ್ಡರ ಮತ್ತು ಭೂ ಮಾಫಿಯಾಗಳನ್ನು ದೂರವಿಡಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ಅವರ ಹೇಳಿದರು.
ಕೊಳಚೆ ಪ್ರದೇಶದಲ್ಲಿ ವಾಸಿಸುವವರಿಗೆ ಭೂಮಿ ಹಕ್ಕು ಒದಗಿಸುವುದರ ಮೂಲಕ ಎಲ್ಲ ಮೂಲ ಭೂತ ಸೌಕರ್ಯವನ್ನು ವದಗಿಸಿಕೊಡಬೇಕೆಂದು ಆಲ್ದಳ್ಳಿ ಹೇಳಿದರು.
ಬರುವ ಚಳಿಗಾಳದ ಅಧಿವೇಶನದಲ್ಲಿ ಸರಕಾರದ ಕಣ್ತೆರೆಸಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಕೇಲವು ಬಿಲ್ಡರಗಳ ವಿರುದ್ಧ ಕಠೋರ ಕ್ರಮ ಕೈಗೊಳ್ಳದಿದ್ದರೆ ಆಯಾ ಜಿಲ್ಲೆಯ ಶಾಸಕ ಸಚಿವರ ಮನೆಯ ಮುಂದೆ ಹೋರಾಟ ಮಾಡಲಾಗುವದು ಎಂದು ಅವರು ಎಚ್ಚರಿಸಿದರು.
ಡಿ ನೋಟಿಫಿಕೇಶನ್ ಎಂಬ ಹೆಸರಿನಲ್ಲಿ ಭೂಮಿ ಅತಿಕ್ರಮಣ ಮಾಡಿಕೊಂಡ ಹೋರಟಿರುವ ರಾಜಕಾರಣಿಗಳನ್ನು ಬದಿಗೊತ್ತಿ, ಕಡು ಬಡವರನ್ನು ನಮ್ಮ ಸಮಿತಿ ತಾರತಮ್ಯ ಮಾಡದೆ ಎಲ್ಲ ಕಡು ಬಡವರಿಗೆ ನಿವೇಶನ ನೀಡಲು ಶ್ರಮಿಸುತ್ತಿದ್ದೇವೆ ಎಂದು ಆಲ್ದಳ್ಳಿ ನುಡಿದರು.
ಸುದ್ದಿಗೋಷ್ಠಿಯಲ್ಲಿ ನಾಗರಾಜ ಗುರಿಕಾರ, ರಾಜು ಹಿರೇವಡೆಯರ, ಕಿರಣಸಿಂಗ್ ರಜಪೂತ, ಲಕ್ಷ್ಮಣ ಮೊದಲಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here