ಪ.ಪಂ ಮುಖ್ಯಾಧಿಕಾರಿ ಸದಸ್ಯರಿಗೆ ಏಕವಚನದಿಂದ ಮತನಾಡಿದ ಮಾತಿಗೆ ಸದಸ್ಯ ಎಚ್.ಡಿ.ಮಾಗಡಿ ಕೆಂಡಾಮಂಡಲ

0
23
loading...

ಶಿರಹಟ್ಟಿ,ಡಿ,25: ಸಾರ್ವಜನಿಕರ ಸಮಸ್ಯೆ ಅರಿತು ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಉತಾರ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವ
ಮುಖ್ಯಾಧಿಕಾರಿ ಕಾರ್ಯವೈಖರಿ ಸರಿ ಇಲ್ಲ ಮತ್ತು ಸದಸ್ಯೆರೆ ಬಂದು ಸಹಿ ಮಾಡಿ ಉತಾರ ನೀಡಿ ಎಂದು ಹೇಳಿದರು ಮುಖ್ಯಾಧಿಕಾರಿ ನಿಷ್ಕಾಳಜಿ ವಹಿಸಿ ಹಾರಿಕೆ ಉತ್ತರ ನೀಡುತ್ತಿದ್ದಾರೆಂದು ಸದಸ್ಯ ಮಾಬುಸಾಬ ಮುಳಗುಂದ ಸಭೆಯ ಗಮನ ಸೆಳೆಯುತ್ತಿದ್ದಂತೆ ಮುಖ್ಯಾಧಿಕಾರಿ ರಾಮಕೃಷ್ಣ ಸಿದ್ದನಕೊಳ್ಳ ಉತ್ತರ ನೀಡುವಲ್ಲಿ ಸದಸ್ಯನಿಗೆ ಏಕವಚನದಿಂದ ಮಾತನಾಡಿದ್ದಕ್ಕೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಚ್.ಡಿ.ಮಾಗಡಿ ವಿರೋಧ ವ್ಯಕ್ತಪಡಿಸಿ ಸದಸ್ಯರಿಗೆ ಏಕವಚನದಿಂದ ಮಾತನಾಡಿದರೆ ಪರಿಣಾಮ ಸರಿ ಇರಲ್ಲ ಎಂದು ಎಚ್ಚರಿಕೆ ನೀಡುತ್ತಿದ್ದಂತೆ ಕೆಂಡಾಮಂಡಲರಾದ ಸದಸ್ಯರೆಲ್ಲರು ಒಮ್ಮತ ವ್ಯಕ್ತಪಡಿಸಿ ಸಭೆ ನಡೆಯದಂತೆ ಒತ್ತಾಯಿಸಿದರು.
ಪ.ಪಂ. ಸಭಾಭವನದಲ್ಲಿ ಬುಧವಾರ ಅಧ್ಯಕ್ಷ ನಾಗರಾಜ ಲಕ್ಕುಂಡಿ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಜರುಗಿತು.
ಸದಸ್ಯ ಮಾಬುಸಾಬ ಮುಳಗುಂದ ಮತನಡಿ, ಸಾಹೇಬ್ರ, ನಾನೇ ಸ್ವತಹ ಬಂದು ಉತಾರ ಕೇಳಿದರೆ ಹಾರಿಕೆ ಉತ್ತರ ನೀಡುತ್ತೀರಿ ಇನ್ನು ಸಾಮಾನ್ಯ ಜನರ ಗತಿ ಏನು?ಎಂದು ಪ್ರಶ್ನಿಸಿದರು.
ಅದಕ್ಕೆ ಮುಖ್ಯಾಧಿಕಾರಿ ರಾಮಕೃಷ್ಣ ಸಿದ್ದನಕೊಳ್ಳ ಉತ್ತರಿಸುವಾಗ ಸದಸ್ಯನಿಗೆ ಏಕವಚನದಿಂದ ಮಾತನಾಡಿದ ತಕ್ಷಣ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಚ್.ಡಿ.ಮಾಗಡಿ ಸಭೆಯಿಂದ ಎದ್ದು ಮುಂದೆ ಬಂದು ಅಧ್ಯಕ್ಷರ ಟೇಬಲ್ ಗುದ್ದಿ, ಯಾವ ಕಾರಣಕ್ಕೆ ಸದಸ್ಯರನ್ನು ಅಗೌರವದಿಂದ ಕಾಣುತ್ತೀರಿ? ಹಾಗೂ ಏಕವಚನದಿಂದ ಮಾತನಾಡಿದೀರಿ ಮುಖ್ಯಾಧಿಕಾರಿಗೆ ಧಿಕ್ಕಾರ ಎಂದು ಆಕ್ರೋಶ ವ್ಯಕ್ತ ಪಡಿಸಿದಾಗ ಉಳಿದೆಲ್ಲ ಸದಸ್ಯರು ಸಭಾ ವೇದಿಕೆ ಮುಂದೆ ಬಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಮಧ್ಯಪ್ರವೇಶಿಸಿದ ಅಧ್ಯಕ್ಷ ನಾಗರಾಜ ಲಕ್ಕುಂಡಿ ಮುಖ್ಯಾಧಿಕಾರಿ ವರ್ತನೆಯನ್ನು ತಿದ್ದುಕೊಳ್ಳುವಂತೆ ಹೇಳಿದಾಗ, ನನ್ನ ಜತೆ ಅನಗತ್ಯ ಮಾತು ಬೇಡ ಸದಸ್ಯೆರೆ ಆಯ್ತು ಬಾಯಿ ತಪ್ಪಿ ಏಕವಚನದಿಂದ ಮಾತನಾಡಿದ್ದಕ್ಕೆ ಕ್ಷಮಿಸಿ ಎಂದು ಕೇಳಿದಾಗ ಸದಸ್ಯರೆಲ್ಲ ತಮ್ಮ ಸ್ಥಾನದಲ್ಲಿ ಕುಳಿತುಕೊಂಡರು.
ಸದಸ್ಯ ಗೂಳಪ್ಪ ಕರಿಗಾರ ಮಾತನಾಡಿ, ಪ್ರತಿಯೊಂದು ಸಭೆಯಲ್ಲಿ ಶೌಚಾಲಯಗಳನ್ನು ಸ್ವಚ್ಚತೆ ಗೊಳಿಸಿ ಎಂದು ಎಷ್ಟು ಸಾರಿ ಹೇಳಿದರು ಶೌಚಾಲಯಗಳನ್ನು ಸ್ವಚ್ಚತೆಗೊಳಿಸಿಲ್ಲ. ಸ್ಥಳಿಯ ಆಡಳಿತ ಇದ್ದು ಇಲ್ಲದಂತಾಗಿದೆ. ಶೌಚಾಲಯದ ಸಮಸ್ಯೆಯನ್ನು ಬಗೆಹರಿಸುವುದಾದರು ಯಾವಾಗ? ಪಟ್ಟಣದಲ್ಲಿನ ಎಲ್ಲಾ ಶೌಚಾಲಯಗಳು ಬಹಳಷ್ಟು ಹದಗೆಟ್ಟು ಹೋಗಿದ್ದು, ಅವುಗಳನ್ನು ಶೀಘ್ರದಲ್ಲಿ ಸ್ವಚ್ಚತೆಗೊಳಿಸಿ ಹಾಗೂ ಸದಸ್ಯರಾದ ನಾವು ಜಮಾ ಖರ್ಚಿನ ಬಗ್ಗೆ ಮಾಹಿತಿ ಕೇಳಿದರೆ ಅಧಿಕಾರಿಗಳು ಮಾಹಿತಿಯನ್ನು ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ಯಾಕೆ? ಇದೇ ತರಹ ಪರಿಸ್ಥಿತಿ ಮುಂದುವರೆದರೆ ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಕೆ ನೀಡಿದರು.
ಸ್ಥಾಯಿ ಸಮಿತಿ ಚೇರಮನ್‍ರ ಆಯ್ಕೆ ಮುಂದೊಡಿಕೆ
ಸ್ಥಾಯಿ ಸಮಿತಿ ಕಮೀಟಿ ಚೇರಮನ್‍ರ ಆಯ್ಕೆಯ ಬಗ್ಗೆ ಚರ್ಚಿಸುತ್ತಿದ್ದಂತೆ,ಸದಸ್ಯ ಚಾಂದಸಾಬ ಮುಳಗುಂದ ಅಧಿಕಾರಕ್ಕೆ ಬಂದು ಹದಿನೆಂಟು ತಿಂಗಳು ಕಳೆದಿದೆ. ಈ ಹಿಂದಿನ ಸಭೆಯಲ್ಲಿ 7 ಜನ ಸದಸ್ಯರನ್ನು ಸ್ಥಾಯಿ ಸಮಿತಿಗೆ ಆಯ್ಕೆ ಮಾಡಿ ವರ್ಷ ಗತಿಸಿಹೋಗಿದ್ದರು. ಈವರೆಗೂ ಚೇರಮನ್‍ರನ್ನುಆಯ್ಕೆ ಮಾಡಿಲ್ಲ. ಈಗ ಕಮೀಟಿಗೆ 9 ಸದಸ್ಯರ ಹೆಸರನ್ನು ಹೇಳುತಿದ್ದೀರಿ.ಇದಕ್ಕೆ ನನ್ನ ಒಮ್ಮತವಿಲ್ಲ ಎಂದು ವಿರೋಧ ವ್ಯಕ್ತಪಡಿಸಿದಾಗ ಕೆಲ ಸದಸ್ಯರು ಅವರ ಮಾತಿಗೆ ಬೆಂಬಲಿಸಿದಾಗ, ಅಧ್ಯಕ್ಷ ನಾಗರಾಜ ಲಕ್ಕುಂಡಿ ಆಯ್ತು,ಇನ್ನೊಂದು ಸಾರಿ ಸಭೆಯನ್ನು ಕರೆದು ಹೊಸ ಸದಸ್ಯರನ್ನು ನೇಮಿಸಿ ಕಮೀಟಿಗೆ ಚೇರಮನ್‍ರ ಆಯ್ಕೆ ಮಾಡೋಣ ಎಂದು ಭರವಸೆ ನೀಡುತ್ತಿದ್ದಂತೆ ಸ್ಥಾಯಿ ಸಮಿತಿ ಚೇರಮನ್‍ರ ಆಯ್ಕೆಯನ್ನು ಮುಂದೊಡಲಾಯಿತು.
ಮೊದಲು ಗುತ್ತಿಗೆದಾರರ ವೇತನ ನೀಡಿ,
ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರ ವೇತನವನ್ನು ಮೊದಲು ಕೊಡಿ, ಅವರ ವೇತನವನ್ನು ಕೊಡದೇ ಇರುವುದರಿಂದ ಸದಸ್ಯರ ಮನೆಗೆ ಬಂದು ಕೇಳುತ್ತಿದ್ದಾರೆ. ಹಾಗೂ ಪ.ಪಂ.ಕಾರ್ಯಾಲಯದಲ್ಲಿ ಇಂಜಿನಿಯರ್ ಇಲ್ಲ ಹೀಗಿರುವಾಗ ಕ್ರೀಯಾ ಯೋಜನೆ ಮಡಿ ಊರಿನ ಅಭಿವೃದ್ಧಿ ಮಾಡುವುದು ಯಾವಾಗ?ಇದಕ್ಕೆ ಉತ್ತರ ನೀಡಿ ಎಂದು ಸದಸ್ಯೆ ರೇಖಾ ಅಕ್ಕಿ ಕೇಳಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಶೀಘ್ರದಲ್ಲಿ ಅವರ ವೇತನವನ್ನು ನೀಡುವುದಾಗಿ ತಿಳಿಸಿದರು.
ಅಕ್ರಮವಾಗಿ ನಳ ಹೊಂದಿದಂತಹ ಸಾರ್ವಜನಿಕರಿಗೆ 5000 ರೂ ದಂಡ
ಪಟ್ಟಣದಲ್ಲಿ ಬಹಳಷ್ಟು ಸಾರ್ವಜನಿಕರು ಅಕ್ರಮವಾಗಿ ನಳಗಳನ್ನು ಹೊಂದಿದ್ದು, ಅವುಗಳ ಬಗ್ಗೆ ಕ್ರಮ ಏನು?ಎಂದು ಸದಸ್ಯರಾದ ಸಿ.ಕೆ.ಮುಳಗುಂದ, ಗೂಳಪ್ಪ ಕರಿಗಾರ, ಬುಡನಶಾ ಮಕಾನದಾರ ಕೇಳಿದಾಗ.ಅದಕ್ಕೆ ತಾವು ಹೇಳಿದಂತೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ಹೇಳುತ್ತಿದ್ದಂತೆ ಸದಸ್ಯ ಎಚ್.ಡಿ.ಮಾಗಡಿ ನೀವು ಒಬ್ಬ ಮುಖ್ಯಾಧಿಕಾರಿಯಾಗಿ ಸರ್ಕಾರದ ಆದೇಶ ಹೇಗಿದೆ ಅದರಂತೆ ಪಾಲನೆ ಮಾಡಿ ಎಂದರು.
ಅದಕ್ಕೆ ಪರವಾನಿಗೆ ಇಲ್ಲದೇ ಪಟ್ಟಣದಲ್ಲಿನ ಅಕ್ರಮ ನಳ ಹೊಂದಿದವರನ್ನು ಗುರುತಿಸಿ ಅವರಿಗೆ 5000 ರೂ.ದಂಢ ವಿಧಿಸುವುದು ಸೂಕ್ತ ಎಂದ ತಕ್ಷಣ
ಅಧ್ಯಕ್ಷ ನಾಗರಾಜ ಲಕ್ಕುಂಡಿ ಮತ್ತು ಉಳಿದ ಸದಸ್ಯರೆಲ್ಲರು ಧ್ವನಿಗೂಡಿಸಿದರು.
ಉಪಾಧ್ಯಕ್ಷ ಸಂತೋಷ ಕುರಿ,ಸದಸ್ಯರಾದ ಬಾಲಚಂದ್ರ ಇಟಗಿ, ಮೀನಾಕ್ಷಿ ತಳವಾರ, ವಿಮಲಕ್ಕ ಕಪ್ಪತ್ತನವರ, ಲಲಿತಾ ಕಲ್ಲಪ್ಪನವರ, ಕಾಶವ್ವ ಹುಲಕಡ್ಡಿ, ರೇಖಾ ಅಕ್ಕಿ, ಸುಜಾತ ಗೋಡೆಣ್ಣವರ, ಸಾವಿತ್ರವ್ವ ಬಡಿಗೇರ, ನಾಮನಿರ್ದೇಶಿತ ಸದಸ್ಯರಾದ ಪರಮೇಶ ಪರಬ, ಬಡ್ಡೆಪ್ಪ ಬಟ್ಟೂರ, ಜ್ಯೋತಿ ಪಾಟೀಲ, ಮುಖ್ಯಾಧಿಕಾರಿ ರಾಮಕೃಷ್ಣ ಸಿದ್ದನಕೊಳ್ಳ, ಮಂಜುಳಾ ಹೂಗಾರ,ಸಿದ್ದಪ್ಪ ಅಮರಾಪೂರ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here