ರೈತರ ಹಿತ ಕಾಯದ ಸಿದ್ದು ಸರಕಾರ ಇದ್ದರೆಷ್ಟು, ಬಿಟ್ಟರೆಷ್ಟು !

0
20
loading...

ಮತ್ತೆ ಅಧಿವೇಶನ ಬಂದರೂ ಕಬ್ಬಿಗೆ ಸೂಕ್ತ ಬೆಲೆ ಸಿಕ್ಕಿಲ್ಲ
ರಾಜಶೇಖರಯ್ಯಾ ಹಿರೇಮಠ
ಬೆಳಗಾವಿ:3 ಕಳೆದ ಅಧಿವೇಶನದಲ್ಲಿ ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನೀಡುವಂತೆ ಪ್ರತಿಭಟನೆಯಲ್ಲಿ ರೈತ ಆತ್ಮ ಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿಗೆ ಪ್ರತಿ ಟನ್‍ಗೆ 2500 ರೂ. ಬೆಂಬಲ ಕೊಡಿಸುವುದಾಗಿ ಭರವಸೆ ನೀಡಿದ್ದರು ಆದರೆ ಅಧಿವೇಶನ ಹತ್ತಿರ ಬರುತ್ತಿದ್ದಂತೆ ಏಕಾಏಕಿ 2300 ರೂ.ಗಳನ್ನು ನಿಗದಿ ಮಾಡುವಂತೆ ತಿಳಿಸಿ ನೀಡಿದ ಭರವಸೆಯ ಮಾತನ್ನು ಹುಸಿಗೊಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಹೇಳಿದ ಮಾತನ್ನು ಅಧಿವೇಶನ ಸಮೀಪಿಸುತ್ತಿದ್ದಂತೆ ಪ್ರತಿ ಟನ್ ಕಬ್ಬಿಗೆ 2300 ರೂ ಎಂದು ಘೋಷಿಸಿ ರೈತರ ಅಪೇಕ್ಷೆಗೆ ಬರೆ ಎಳೆದಿದೆ. ಈಗಾಗಲೇ ರೈತರು ಬೆಳೆದ ಕಬ್ಬನ್ನು ನುರಿಸುವ ಕಾರ್ಯ ಆರಂಭವಾಗಬೇಕಿತ್ತು. ಸಕ್ಕರೆ ಮಾಲಿಕರು ಹಾಗೂ ಸರಕಾರದವರು ರೈತರೊಂದಿಗೆ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾರೆ.
ಹಲವು ದಿನಗಳ ಹಿಂದೆ ಸಕ್ಕರೆ ಸಚಿವರು ಜಿಲ್ಲೆಗೆ ಆಗಮಿಸಿದಾಗ ಸಕ್ಕರೆ ಕಾರ್ಖಾನೆಯ ಮಾಲಿಕರು ಹಾಗೂ ರೈತರ ನಡುವೆ ಸಭೆ ನಡೆದ ಸಂದರ್ಭದಲ್ಲಿ ಸಕ್ಕರೆ ಮಾಲಿಕರು ರಾಜಾರೋಷವಾಗಿ ಸಚಿವರ ಮುಂದೆ ಸರಕಾರ ಹಾಗೂ ರೈತರು ಒಂದು ನಿರ್ಣಯ ಕೈಗೊಂಡರೆ ಮಾತ್ರ ಕಬ್ಬು ನುರಿಸುವುದಾಗಿ ಹೇಳಿಕೆ ನೀಡಿದರೂ ಸರಕಾರ ಮಾತ್ರ ಸಕ್ಕರೆ ಮಾಲಿಕರ ಪರವಾಗಿ ಲಾಬಿ ನಡೆಸುತ್ತಿದೆ.
ಉತ್ತರ ಕರ್ನಾಟದಲ್ಲಿ ಅತೀ ಹೆಚ್ಚು ಸಕ್ಕರೆ ಕಾರ್ಖಾನೆ ಹೊಂದಿದ ಜಿಲ್ಲೆ ಎಂದರೆ ಬೆಳಗಾವಿ ಇಲ್ಲಿನ ಶಾಸಕ,ಸಚಿವರು ಹೆಸರಿನಲ್ಲಿರುವ ಸಕ್ಕರೆ ಕಾರ್ಖಾನೆಯ ಮಾಲಿಕರೆ ರೈತರಿಗೆ ಮೊದಲಿನ ಕಬ್ಬಿನ ಬಾಕಿ ಮೊತ್ತವನ್ನು ನೀಡದೆ ರೈತರೊಡನೆ ಚೆಲ್ಲಾಟವಾಡುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಕಳೆದ ಅಧಿವೇಶನದಲ್ಲಿ ಹೇಳಿದ ಮಾತನ್ನು ಮರೆತು ಪ್ರತಿ ಟನ್‍ಗೆ 2300 ರೂ. ನೀಡುವುದಾಗಿ ಘೋಷಣೆ ಮಾಡಿರುವುದು ರೈತರನ್ನು ವಂಚಿಸಿದ ಕ್ರಮವಾಗಿದೆ.
ಅಲ್ಲದೆ ಈಗಾಗಲೇ ಅಧಿವೇಶನ ಹತ್ತಿರ ಬರುತ್ತಿದ್ದಂತೆ ಕಬ್ಬಿನ ಹೆಸರಿನಲ್ಲಿ ಈ ಭಾಗದ ರೈತರ ಸಮಸ್ಯೆ ಅರಿಯದ ಕೆಲವು ರೈತ ಮುಖಂಡರುಗಳು ಚಳಿಗಾಲ ಅಧಿವೇಶನದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ರಾಜಕಾರಣ ಮಾಡಿ ಇಲ್ಲಿನ ರೈತರು ಹಾಗೂ ಸರಕಾರದ ದಿಕ್ಕು ತಪ್ಪಿಸುವ ಹುನ್ನಾರ ನಡೆಸಲು ಹೊಂಚು ಹಾಕುತ್ತಿದ್ದಾರೆ. ಆದರೆ ಪ್ರಾಮಾಣಿಕವಾದ ರೈತರ ಕಷ್ಟವನ್ನು ಸರಕಾರ ಆಲಿಸುವುದೆ ಎಂಬುದು ರೈತರ ಪ್ರಶ್ನೆಯಾಗಿದೆ.
ಕಾಂಗ್ರೆಸ್ ಸರಕಾರ ರೈತರ ಸರಕಾರ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದು ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ರೈತ ವಿರೋಧಿ ಸರಕಾರ ಎನ್ನಿಸಿಕೊಳ್ಳುತ್ತಿದೆ. ಬರುವ ಅಧಿವೇಶನದಲ್ಲಿ ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನೀಡುವಲ್ಲಿ ಸರಕಾರ ಯಶಸ್ವಿಯಾಗುತ್ತದೆಯೋ ಅಥವಾ ಮತ್ತೆ ಸಕ್ಕರೆ ಕಾರ್ಖಾನೆಯ ಮಾಲಿಕರ ಲಾಬಿಗೆ ಮಣಿಯುತ್ತದೆಯೋ ಕಾದು ನೋಡಬೇಕಿದೆ.

ಬುಲೇಟ್
ರೈತರ ಹಿತ ಕಾಯುವಲ್ಲಿ ವಿಫಲವಾದ ಕೈ ಸರಕಾರ
ಮಾತು ತಪ್ಪಿದ ಕಾಂಗ್ರೆಸ್ ಸರಕಾರ
ಕಾರ್ಖಾನೆಯ ಮಾಲಿಕರ ಲಾಬಿಗೆ ಮಣಿದ ಸರಕಾರ
ರಾಜಾರೋಷವಾಗಿ ಸವಾಲು ಹಾಕುತ್ತಿರುವ ಕಾರ್ಖಾನೆ ಮಾಲಿಕರು
ಈ ಅಧಿವೇಶನದಲ್ಲಿ ರೈತರಿಗೆ ಸೂಕ್ತ ಬೆಲೆ ಸಿಗುವುದೇ

loading...

LEAVE A REPLY

Please enter your comment!
Please enter your name here