ಸದನದ ಒಳಗೆ ಮೊಬೈಲ್ ನಿರ್ಬಂಧಿಸಲು ಸಭಾಪತಿಯವರಿಗೆ ಮುಖ್ಯಮಂತ್ರಿ ಮನವಿ

0
16
loading...

ಬೆಳಗಾವಿ:12 : ಇನ್ನು ಮುಂದೆ ಸದನ ಒಳಗೆ ಮೊಬೈಲ್ ತರುವುದನ್ನು ನಿsರ್ಬಂಧಿಸಲು ನಿರ್ಣಯವನ್ನು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಪರಿಷತ್ ಸಭಾಪತಿಯವರಿಗೆ ಮನವಿ ಮಾಡಿದರು.
ಇಂದು ಪರಿಷತ್ ಪ್ರಾರಂಭದಲ್ಲಿ ನೊಬೆಲ್ ಪುರಸ್ಕ್ರತರಿಗೆ ಅಭಿನಂದನಾ ಪ್ರಸ್ತಾಪವನ್ನು ಮಂಡಿಸಿದ ನಂತರ ಆಡಳಿತ ಪಕ್ಷದ ಸಭಾನಾಯಕರಾದ ಎಸ್.ಆರ್.ಪಾಟೀಲ್ ಅವರು ಕೆಳಮನೆಯಲ್ಲಿ ಶಾಸಕರು ಮೊಬೈಲ್‍ನಲ್ಲಿ ಸ್ತ್ರೀಯರ ಭಾವಚಿತ್ರವನ್ನು ಝೂಮ್ ಮಾಡಿ ನೋಡುವುದು ಹಾಗೂ ಗೇಮ್ಸ್ ಆಡಿರುವುದು ಸದನದ ಪವಿತ್ರಕ್ಕೆ ಅವಮಾನ ಮಾಡಿದಂತೆ ಹಾಗೂ ಇದು ಇಡೀ ರಾಷ್ಟ್ರದ ಸಾರ್ಮಜನಿಕ ಪ್ರತಿನಿಧಿಗಳು ತೆಲೆತಗ್ಗಿಸುವಂತ ಘಟನೆ. ಇದರಿಂದ ತಮಗೆ ಬಹಳ ನೋವಾಗಿದ್ದು, ಇಂತಹ ಘಟನೆಗೆ ಕಾರಣಕರ್ತರಾದವರ ಮೇಲೆ ಕ್ರಮಕೈಗೊಳ್ಳಬೇಕೆಂದು ಹೇಳುತ್ತಿದ್ದಂತೆ ಸದನದಲ್ಲಿ ಕೋಲಾಹಲ ಏರ್ಪಟ್ಟಿತು.
ಪ್ರತಿಪಕ್ಷದ ಸದಸ್ಯರು ಬಾವಿಗಿಳಿದು ಈ ಘಟನೆಯನ್ನು ಖಂಡಿಸಲು ಮುಂದಾದಾಗ ವಿರೋಧ ಪಕ್ಷದ ನಾಯಕರು ಪ್ರತಿಪಕ್ಷದ ಸದಸ್ಯರೇ ಮುಖ್ಯಮಂತ್ರಿಯವರು ಸದನದಲ್ಲಿ ಕುಳಿತಿದ್ದರೂ ಬಾವಿಗಳಿದಿದ್ದಾರೆಂದು ಸಭಾಪತಿಯವರನ್ನು ಪ್ರಶ್ನಿಸಿದರು. ಸದನದ ಹಿರಿಯ ಸದಸ್ಯರಾದ ಬಸವರಾಜ್ ಹೊರಟ್ಟಿ ಅವರು ಆಡಳಿತ ಪಕ್ಷದ ಸದಸ್ಯರ ಮನ ಒಲಿಸಲು ಪ್ರಯತ್ನಿಸಿದರು.
ಆದಾಗ್ಯೂ ಸದಸ್ಯರು ಬಾವಿಯಿಂದ ಕದಲದ ಕಾರಣ ಮುಖ್ಯಮಂತ್ರಿ ಅವರು ಸದನದ ಗೌರವವನ್ನು ಕಾಪಾಡುವ ದೃಷ್ಟಿಯಿಂದ ಸದಸ್ಯರು ತಮ್ಮ ಸ್ಥಾನಕ್ಕೆ ಹಿಂದಿರುಗುವಂತೆ ಕೋರಿದರು.
ನಮ್ಮ ಸದಸ್ಯರು ಮನನೊಂದು ಸದನದ ಬಾವಿಗೆ ಬಂದಿದ್ದಾರೆ. ಎರಡೂ ಸದನದಲ್ಲಿರುವ ಜನ ಪ್ರತಿನಿಧಿಗಳು 6 ಕೋಟಿ ಜನರನ್ನು ಪ್ರತಿನಿಧಿಸುತ್ತಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸದನವನ್ನು ದೇಗುಲ ಎಂದು ಭಾವಿಸಲಾಗುತ್ತದೆ. ಎರಡೂ ಸದನಕ್ಕೂ ಇತಿಹಾಸವಿದೆ, ಎಲ್ಲಾ ಸದಸ್ಯರು ಸದನದ ಗೌರವವನ್ನು ಕಾಪಾಡಬೇಕು . ಆದ್ದರಿಂದ ನಮಗೆ ನಾವೇ ಕೆಲವು ಕಡಿವಾಣ ಮತ್ತು ನಿಭಂದನೆಯನ್ನು ಹಾಕಿಕೊಳ್ಳಬೇಕು ಎಂದರು.

ಸದನದಲ್ಲಿ ರಾಜ್ಯದ ಜನತೆಯ ಸಮಸ್ಯೆ, ಅದರಲ್ಲೂ ಉತ್ತರ ಕರ್ನಾಟಕದ ಜನರ ಸಮಸ್ಯೆಯ ಬಗ್ಗೆ ಚರ್ಚಿಸಬೇಕಿದೆ. ಎಲ್ಲಾ ಸದಸ್ಯರು ಲವಲವಿಕೆಯಿಂದ ಸದನದ ಚರ್ಚೆಯಲ್ಲಿ ಭಾಗವಹಿಸಬೇಕು. ಆದ್ದರಿಂದ ಇನ್ನೂ ಮುಂದೆ ಸದನದ ಒಳಗೆ ಮೊಬೈಲ್ ತರದಿರುವಂತೆ ನಿರ್ಣಯವನ್ನು ಮಾಡುವಂತೆ ಮುಖ್ಯಮಂತ್ರಿಯವರು ಸಭಾಪತಿಗೆ ಮನವಿ ಮಾಡಿದರು.
ಕೆಳಮನೆಯಲ್ಲಿ ನಿನ್ನೆ ನಡೆದ ಘಟನೆ ಅತ್ಯಂತ ಖಂಡನೀಯವಾದುದು. ಬಿ.ಜೆ.ಪಿ. ಮುಖಂಡರು ಕೂಡ ಇದನ್ನು ಖಂಡಿಸಿದ್ದಾರೆ. ಆದ್ದರಿಂದ ಈ ವಿಷಯವನ್ನು ಇಲ್ಲಿಗೆ ಬಿಟ್ಟು ಚರ್ಚೆಗೆ ಅವಕಾಶ ಮಾಡಿಕೊಡುವಂತೆ ಅವರು ಆಡಳಿತ ಹಾಗೂ ವಿರೋಧ ಪಕ್ಷದ ಎಲ್ಲಾ ಸದಸ್ಯರಿಗೆ ಮನವಿ ಮಾಡಿದರು.
ನೈತಿಕತೆಯನ್ನು ಮರೆಯುತ್ತಿರುವ ಸದಸ್ಯರಿಗೆ ನೈತಿಕ ಸಮಿತಿ ಸಭೆಯನ್ನು ನಡೆಸುವಂತೆಯೂ ಅವರು ಸಭಾಪತಿಯವರಿಗೆ ವಿನಂತಿಸಿದರು.

loading...

LEAVE A REPLY

Please enter your comment!
Please enter your name here