ಸರಕಾರಿ ಆಸ್ಪತ್ರೆಗಳಲ್ಲಿ 24 ಗಂಟೆ ಔಷಧಿ ಕೇಂದ್ರ : ಯು ಟಿ ಖಾದರ್

0
26
loading...

ಬೆಂಗಳೂರು, ಡಿ.07- ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಔಷಧಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.
ಮುಂದಿನ ಮೂರು ತಿಂಗಳಲ್ಲಿ 24×7ರ ಸಮಯದಲ್ಲಿ ಕಾರ್ಯನಿರ್ವಹಿಸುವ ಔಷಧಿ ಕೇಂದ್ರಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ತೆರೆಯಲಿದ್ದು, ಇದರೊಂದಿಗೆ ಫಾರ್ಮಸಿಯನ್ನು ಆರಂಭಿಸುವುದಾಗಿ ಅವರು ಹೇಳಿದರು.
ಇದರಿಂದ ಜನರಿಗೆ ಎಲ್ಲ ಸಮಯದಲ್ಲಿ ಎಲ್ಲ ಬ್ರಾಂಡ್‍ನ ಔಷಧಿಗಳು ಒಂದೇ ಸ್ಥಳದಲ್ಲೇ ದೊರೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಒಮೆಗಾ ಪುನರ್ವಸತಿ ಟ್ರಸ್ಟ್ ಹೊರತಂದಿರುವ ಮೂತ್ರಪಿಂಡದ ಮಾಹಿತಿ ಒಳಗೊಂಡ ಕಿರುಪುಸ್ತಕವನ್ನು ಪ್ರೆಸ್‍ಕ್ಲಬ್‍ನಲ್ಲಿಂದು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ರಾಜ್ಯದ ಎಲ್ಲ ಜಿಲ್ಲೆ ತಾಲೂಕು ಕೇಂದ್ರಗಳಲ್ಲಿ ಸ್ಥಾಪನೆಯಾಗಿರುವ ಡಯಾಲಿಸಿಸ್ ಕೇಂದ್ರಗಳು ಇಂದಿನಿಂದ ಕಾರ್ಯಾರಂಭ ಮಾಡಲಿದ್ದು, ಅದರ ಪ್ರಯೋಜನ ಪಡೆಯುವಂತೆ ತಿಳಿಸಿದರು.
ಆರಂಭಿಕವಾಗಿ 30 ಜಿಲ್ಲಾ ತಾಲೂಕುಗಳಂತೆ, 30 ಡಯಾಲಿಸಿಸ್ ಕೇಂದ್ರ ಆರಂಭಿಸಿದ್ದು, ಇದಕ್ಕಾಗಿ ಫಿಸಿಷಿಯನ್ ಮತ್ತು ತಾಂತ್ರಿಕ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ. ಮುಂದಿನ ವರ್ಷಕ್ಕೆ ಡಯಾಲಿಸಿಸ್ ಕೇಂದ್ರದ ಸಂಖ್ಯೆಗಳನ್ನು ಹೆಚ್ಚಿಸಲಾಗುವುದು ಎಂದರು.
ಒಂದೇ ಬಾರಿ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲು ತಾಂತ್ರಿಕ ಸಿಬ್ಬಂದಿಯ ಕೊರತೆ ಇದೆ. ಹಾಗಾಗಿ ಹಂತ ಹಂತವಾಗಿ ಪ್ರಾರಂಭಿಸುವುದಾಗಿ ತಿಳಿಸಿದರು.
ಒಮೆಗಾ ಪುನರ್ವಸತಿ ಸಂಸ್ಥಾಪಕ ಡಾ.ಎಂ.ಆನಂದ್‍ಕುಮಾರ್, ಕೇಂದ್ರ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಡಾ.ಎಚ್.ಪಿ.ಸಾಂಗ್ಲಿಯಾನ, ಹಿರಿಯ ನಟ ರಮೇಶ್‍ಭಟ್, ಡಾ.ಸುಂದರ್ ಮತ್ತಿತರರಿದ್ದರು.

loading...

LEAVE A REPLY

Please enter your comment!
Please enter your name here