2014 ಅತ್ಯಂತ ಬಿಸಿ ವರ್ಷ

0
23
loading...

ನವದೆಹಲಿ, ಡಿ.02 : ಕಳೆದ 135 ವರ್ಷಗಳಲ್ಲೇ 2014 ಅತ್ಯಂತ ಬಿಸಿ ವರ್ಷವಾಗಿದ್ದು , ಇದು ಜಾಗತಿಕ ತಾಪಮಾನದಿಂದ ಇಡೀ ವಿಶ್ವವೇ ಅಪಾಯದ ಅಂಚಿಗೆ ಬಂದು ನಿಂತಿರುವ ಧ್ಯೋತಕವಾಗಿದೆ.
ಅಮೆರಿಕದ ಸಂಸ್ಥೆಯೊಂದು ನಡೆಸಿರುವ ವರದಿಯಲ್ಲಿ 2014 ವರ್ಷ ಅತ್ಯಂತ ಬಿಸಿ ವರ್ಷ ಎಂಬುದು ಸಾಬೀತಾಗಿದೆ.
1880ನೆ ಇಸವಿಯಲ್ಲಿ ಈ ಪರಿಯ ತಾಪಮಾನ ದಾಖಲಾಗಿತ್ತು. ಇದೀಗ 135 ವರ್ಷ ಕಳೆದ ನಂತರ ಮತ್ತದೇ ತಾಪಮಾನ ದಾಖಲಾಗಿದ್ದು , ಇದು ಇಡೀ ವಿಶ್ವದ ತಾಪಮಾನ ಹೆಚ್ಚಳದ ಮುನ್ಸೂಚನೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
2014ರ ಜನವರಿಯಿಂದ ಅಕ್ಟೋಬರ್ ತಿಂಗಳವರೆಗೆ 0.68 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿತ್ತು. ಇದು ಇಡೀ ಭೂಮಂಡಲ ಹಾಗೂ ಸಮುದ್ರದ ಮೇಲ್ಮಟ್ಟದಲ್ಲೂ ಅಷ್ಟೇ ಪ್ರಮಾಣದ ಬಿಸಿ ಮೂಡಿಸಿತ್ತು.
ನವೆಂಬರ್ 2013ರಿಂದ ಅಕ್ಟೋಬರ್ 2014ರವರೆಗಿನ 12 ತಿಂಗಳ ಅವಧಿಯಲ್ಲಿ 135 ವರ್ಷಗಳ ಇತಿಹಾಸದಲ್ಲೇ 0.68 ಡಿಗ್ರಿ ಸೆಲ್ಷಿಯಸ್‍ನಷ್ಟು ತಾಪಮಾನ ದಾಖಲಾಗಿರುವುದು ವಿಶೇಷ.
ಅಕ್ಟೋಬರ್ ತಿಂಗಳಿನಲ್ಲಿ ದಾಖಲಾಗಿದ್ದ ತಾಪಮಾನದ ತೀವ್ರತೆ ಇತಿಹಾಸದಲ್ಲೇ ಭೂ ಮಂಡಲದ ಮೇಲಿನ ಅತ್ಯಂತ ಹೆಚ್ಚು ಬಿಸಿ ಹೊಂದಿತ್ತು. ಇದು ವಿಶ್ವದ 5ನೆ ಅತ್ಯಧಿಕ ಉಷ್ಣತೆಯ ಪ್ರತೀಕವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

loading...

LEAVE A REPLY

Please enter your comment!
Please enter your name here