2015ರೊಳಗೆ ತಿದ್ದುಪಡಿಗೆ ಬಾಕಿಯಿರುವ ಪಹಣಿಗಳ ವಿಲೇ : ಶ್ರೀನಿವಾಸಪ್ರಸಾದ್

0
126

ಬೆಳಾಗಾವಿ, ಡಿ.11- ತಿದ್ದುಪಡಿಗೆ ಬಾಕಿಯಿರುವ ಪಹಣಿಗಳನ್ನು 2015ರೊಳಗೆ ವಿಲೇ ಮಾಡಲಾಗುವುದು ಎಂದು ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಬುಧವಾರ ವಿಧಾನಪರಿಷತ್‍ನಲ್ಲಿ ಹೇಳಿದರು.
ಜೆಡಿಎಸ್‍ನ ಮರಿತಿಬ್ಬೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯಾದ್ಯಂತ 11ಇ ಸ್ಕೆಚ್‍ಗಾಗಿ ದಿನಾಂಕ 3-12-2014ರವರೆಗೆ 277896 ಭೂ ಮಾಲೀಕರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 127978 ಅರ್ಜಿಗಳು ವಿಲೇಯಾಗಿದ್ದು, 149918 ಅರ್ಜಿಗಳು ಬಾಕಿಯಿವೆ. ಬಾಕಿ ಉಳಿದವುಗಳ ಪೈಕಿ 50967 ಅರ್ಜಿಗಳು ಸರ್ವೆ ದಾಖಲೆ ಮತ್ತು ಪಹಣಿ ತಿದ್ದುಪಡಿಗಾಗಿ ಬಾಕಿಯಿವೆ ಎಂದು ಹೇಳಿದರು.
ರಾಜ್ಯದಲ್ಲಿ 5775 ಭೂಮಾಪಕರಿದ್ದು, ಯಾವುದೇ ಕೊರತೆಯಿಲ್ಲ. ಪ್ರತಿ ಭೂಮಾಪಕರು ಪ್ರತಿ ತಿಂಗಳು ಕನಿಷ್ಟ 23 ಪೋಡಿ ಪ್ರಕರಣಗಳನ್ನು ಇತ್ಯರ್ಥಗೊಳಿಸುವಂತೆ ಸೂಚಿಸಲಾಗಿದೆ. ಪಹಣಿಯಲ್ಲಿರುವ ತಿದ್ದುಪಡಿಗಳನ್ನು ಸರಿಪಡಿಸುವ ಕಾರ್ಯವನ್ನು ಉಪವಿಭಾಗಾಧಿಕಾರಿಯವರಿಂದ ತಹಸೀಲ್ದಾರ್ ಅವರಿಗೆ ವಹಿಸಲಾಗಿದ್ದು, ಅದರಂತೆ ಕೆಲಸ ಆರಂಭಗೊಂಡಿದೆ ಎಂದು ಸಚಿವರು ಹೇಳಿದರು.

loading...

LEAVE A REPLY

Please enter your comment!
Please enter your name here