ಕನ್ನಡಮ್ಮ ಕಾರ್ಯಾಲಯಕ್ಕೆ ಮಹಾಲಿಂಗಪುರ ಪತ್ರಿಕೋದ್ಯಮ ವಿದ್ಯಾರ್ಥಿಗಳ ಭೇಟಿ

0
30

ಪತ್ರಿಕೋದ್ಯಮದಲ್ಲಿ ಪರಿಶ್ರಮ ಅಗತ್ಯ : ರಾಜಕುಮಾರ

loading...

ಮಹಾಲಿಂಗಪುರನ ಕೆಎಲ್‍ಇ ಸಂಸ್ಥೆಯ ಎಸ್.ಸಿ.ಪಿ. ಕಲಾ ಮತ್ತು ಡಿಡಿಎಸ್ ವಾಣಿಜ್ಯ ಮಹಾವಿದ್ಯಾಲಯದ ಬಿ.ಎ.ಪತ್ರಿಕೋದ್ಯಮ ವಿದ್ಯಾರ್ಥಿಗಳು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ. ಸತೀಶ ಇಟಗಿ ನೇತೃತ್ವದಲ್ಲಿ ಸೋಮವಾರ ಗಡಿನಾಡ ಬೆಳಗಾವಿಯ ಕನ್ನಡಮ್ಮ ದಿನಪತ್ರಿಕೆಯ ಕಾರ್ಯಲಯಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡಮ್ಮ ದಿನ ಪತ್ರಿಕೆಯ ಸಂಪಾದಕ ರಾಜಕುಮಾರ ಟೋಪಣ್ಣವರ ಮಾತನಾಡಿ, ಪತ್ರಿಕೋದ್ಯಮದ ಕ್ಷೇತ್ರಕ್ಕೆ ಬರುವ ಅಭ್ಯರ್ಥಿಗಳು ಇಂದಿನಿಂದಲೇ ಪರಿಶ್ರಮ ಪಟ್ಟು ಕಾರ್ಯ ಮಾಡಿದರೆ ಮುಂದೆ ನಿಮಗೆ ಲಾಭದಾಯಕವಾಗುತ್ತದೆ ಎಂದು ಹೇಳಿದರು.
ಕೆಎಲ್‍ಇ ಸಂಸ್ಥೆಯ ಎಸ್.ಸಿ.ಪಿ. ಕಲಾ ಮತ್ತು ಡಿಡಿಎಸ್ ವಾಣಿಜ್ಯ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಕಾರ್ಯಾಲಯದ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಕನ್ನಡಮ್ಮ ಕಾರ್ಯಾಲಯದ ಸಿಬ್ಬಂದಿಗಳಾದ ಪ್ರವೀಣ ಕಲಬಾವಿ, ಸಿದ್ದೇಶ ಪುಠಾಣಿ, ವಿಜಯ ಜೈನ್, ರಾಜು ಚೌಡಕಿ, ರಫೀಕ ದೇಸಾಯಿ, ವಿಶ್ವನಾಥ ದೇಸಾಯಿ, ಉಳವೇಶ ಗಲಬಿ, ಪ್ರಶಾಂತ ಬಡಿಗೇರ, ಗಿರೀಶ ಕಮ್ಮಾರ, ರಾಜಶೇಖರಯ್ಯಾ ಹಿರೇಮಠ ಮೊದಲಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here