ಯಲಬುರ್ಗಾ ತಾಲೂಕ 10ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಈರಪ್ಪ ಕಂಬಳಿ ಅವರಿಗೆ ಅಧೀಕೃತ ಆಹ್ವಾನ

0
39
loading...

ಕೊಪ್ಪಳ, ಜ. 12 : ಜಿಲ್ಲೆಯ ಯಲಬುರ್ಗಾ ತಾಲೂಕಿನ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಈರಪ್ಪ ಎಂ. ಕಂಬಳಿ ಅವರಿಗೆ ಯಲಬುರ್ಗಾ ತಾಲೂಕಾ ಕಸಾಪ ದಿಂದ ಅಧಿಕ್ಷøತ ಆಹ್ವಾನ ನೀಡಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ ಸರಳ ಸಮಾರಂಭದಲ್ಲಿ ಫೆ. 22 ರಂದು ಯಲಬುರ್ಗಾ ತಾಲೂಕಿನ ಕುದರಿ ಮೋತಿ ಗ್ರಾಮದಲ್ಲಿ ಜರುಗಲಿರುವ ಸಮ್ಮೇಳನಕ್ಕೆ ಈರಪ್ಪ ಕಂಬಳಿ ಅವರಿಗೆ ಆಮಂತ್ರಣ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ನಿಯೋಜಿತ ಸಮ್ಮೇಳನಾಧ್ಯಕ್ಷರಾಗಿ ಈರಪ್ಪ ಎಂ. ಕಂಬಳಿ ಸನ್ಮಾನ ಸ್ವೀಕರಿಸಿ ಮಾತನಾಡಿ, ತವರು ತಾಲೂಕಿನಿಂದ ನನ್ನನ್ನು ಗುರುತಿಸಿರುವುದು ಬಹಳಷ್ಟು ಸಂತಸ ತಂದಿದೆ. ಯಾವುದೇ ದೊಡ್ಡ ಸ್ಥಾನ ಬಯಸದಿದ್ದರೂ ತಾಲೂಕ ಕಸಾಪದವರು ನನ್ನನ್ನು ಗುರುತಿಸಿ ಸಮ್ಮೇನಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವುದು ನಾನು ಹೃದಯಪೂರ್ವಕವಾಗಿ ಸ್ವೀಕರಿಸಿ ಸಮ್ಮೇಳನ ಯಶಸ್ವಿಗೆ ಸಹಕರಿಸುವುದಾಗಿ ತಿಳಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವೀರಣ್ಣ ನಿಂಗೋಜಿ, ತಾಲೂಕ ಕಸಾಪ ಅಧ್ಯಕ್ಷ ಶಿವಮೂರ್ತಿ ಇಟಗಿ, ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಮುನಿಯಪ್ಪ ಹುಬ್ಬಳ್ಳಿ, ಸಾಹಿತಿಗಳಾದ ಎಚ್.ಎಸ್. ಪಾಟೀಲ, ಅಲ್ಲಮ ಪ್ರಭು ಬೆಟ್ಟದೂರು, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಆರ್. ಎಸ್. ಸರಗಣಾಚಾರ್, ಡಿ.ಎಂ. ಬಡಿಗೇರ, ಎನ್. ಎ. ಕೆಂಚರಡ್ಡಿ, ಶಿವಾನಂದ ಹುದ್ಲೂರ, ಶಿವಕುಮಾರ ಕುಕನೂರು, ಮಹಾಂತೇಶ ಚಲವಾದಿ, ಶ್ರೀಮತಿ ಕೋಮಲಾ ಕುದರಿಮೋತಿ ಇನ್ನಿತರರ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here