ವ್ಯಸನಮುಕ್ತ ಪರಿಸರ ನಿರ್ಮಾಣಕ್ಕೆ ಜಾಗೃತಿ

0
43
loading...

 

ಬೆಳಗಾವಿ:30 ಡ್ರಗ್ಸ್, ಮದ್ಯಪಾನ, ಧೂಮಪಾನ ಮುಂತಾದ ವ್ಯಸನಗಳಿಂದಾಗುವ ಮಾಲಿನ್ಯ ಮುಕ್ತ ಪರಿಸರ ನಿರ್ಮಾಣಕ್ಕಾಗಿ ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ ಹಾಗೂ ಕೆಎಲ್‍ಇ ವೈದ್ಯಕೀಯ ವಿದ್ಯಾರ್ಥಿಗಳಿಂದ ಜನಜಾಗೃತಿ ಅಭಿಯಾನ ಶುಕ್ರವಾರ ನಗರದ ಚನ್ನಮ್ಮ ವೃತ್ತದಲ್ಲಿ ಹಮ್ಮಿಕೊಳ್ಳಲಾಯಿತು.
ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಪೃಥ್ವಿ ಕುಮಾರ ಮಾತನಾಡಿ, ಭಾರತದಲ್ಲಿ ಸುಮಾರು 10 ಲಕ್ಷ ಜನ ಹಾಗೂ ಕರ್ನಾಟದಲ್ಲಿ 1.5 ಕೋಟಿ ಜನರು ತಂಬಾಕು ವ್ಯಸನದಿಂದ ಮರಣ ಹೊಂದುತ್ತಿದ್ದಾರೆ. ತಂಬಾಕು ಉತ್ಪನ್ನಗಳ ಮಾರಾಟದಿಂದ ಹಾಗೂ ರಫ್ತಿನಿಂದ ವರ್ಷಕ್ಕೆ 9000 ಕೋಟಿ ಭಾರತಕ್ಕೆ ಆದಾಯ ಇದೆ. ಆದರೆ ತಂಬಾಕಿನಿಂದ ಬರುವ ಕ್ಯಾನ್ಸರ್, ಹೃದಯ, ಶ್ವಾಸಕೋಶದ ರೋಗಗಳಿಗೆ ವರ್ಷಕ್ಕೆ 30 ಸಾವಿರ ಕೋಟಿ ರೂ.ಗಳು ಖರ್ಚಾಗುತ್ತಿದೆ. ಅಲ್ಲದೇ ತಂಬಾಕು ಸೇವನೆಯಿಂದ 15-20 ವರ್ಷ ಆಯಸ್ಸನ್ನು ಕಡಿಮೆಯಾಗುತ್ತಿದೆ. ಆದರೂ ತಂಬಾಕು ಉತ್ಪನ್ನಗಳನ್ನು ಉಪಯೋಗಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಭಯಾನಕ ವಿಚಾರವಾಗಿದೆ ಎಂದು ತಿಳಿಸಿದರು.
ಶೇ.45 ರಷ್ಟು ಹೈಸ್ಕೂಲ್ ಮಕ್ಕಳು ಮದ್ಯಪಾನ ವ್ಯಸನದಲ್ಲಿ ತೊಡಗಿದರೇ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಶೇ. 50 ರಷ್ಟು ವಿದ್ಯಾರ್ಥಿಗಳು ಮದ್ಯಪಾನ ಮಾಡುತ್ತಿದ್ದಾರೆ. ಕುಡಿತದಿಂದ ಕುಟುಂಬದ ಗೌರವ ಬೀದಿ ಪಾಲಾಗುವುದಲ್ಲದೇ ಜೀವನ ಸಾವು ಬದುಕಿನ ನಡುವೆ ಬದುಕುಂತ್ತಾಗಿದೆ. ಆದರೆ ನಮ್ಮ ದೇಶದಲ್ಲಿ ಬಡತನವಿದ್ದರೂ ಕುಡಿದು ತೂರಾಡುವ ಸಂಖ್ಯೆ ಹೆಚ್ಚುತ್ತಿದ್ದು, ಇದರಿಂದಾಗಿ ಬಡತನವೂ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕುಡಿತ, ತಂಬಾಕುಗಳಂತೆ ಡ್ರಗ್ಸ್ ಒಂದು ಸಾವು ತರುವ ವಿಷದ ಚೈನ್‍ಆಗಿದೆ. ಪ್ರತಿವರ್ಷ ಭಾರತದಲ್ಲಿ ಶೇ.15ರಷ್ಟು ಮಾದಕ ದ್ರವ್ಯದ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದೆ.
ನಾಗರಿಕರಣ, ಕೈಗಾರಿಕೀಕರಣ, ರಸ್ತೆಗಳ ಅಗಲಿಕರಣ, ವಾಹನಗಳ ಹೆಚ್ಚಳ ಅರಣ್ಯಗಳು ನಾಶವಾಗಿ ತಾಪಮಾನ ಬಿಸಿಯಾಗಿ ಜೀವರಾಶಿಗಳ ಬದುಕು ಕಠಿಣವಾಗುತ್ತಿದೆ. ಕುಡಿಯಲು ನೀರು ಸಿಗದಂತಹ ಸ್ಥಿತಿನಿರ್ಮಾಣವಾಗಿದೆ. ಮಳೆ ಕಡಿಮೆಯಾಗಿವೆ. ಒಟ್ಟಾರೆಯಾಗಿ ಜೀವರಾಶಿಗಳ ಬದುಕೇ ಕಠಿಣವಾಗುತ್ತಿದೆ. ಆದ್ದರಿಂದ ಒಳ್ಳೆ ಸಮಾಜ ನಿರ್ಮಾಣ ಮಾಡಲು ಸರ್ವಾಜನಿಕರು ಕೈ ಜೋಡಿಸಬೇಕು ಎಂದರು.
ಅಭಿಯಾನ ಕಾರ್ಯಕ್ರಮದಲ್ಲಿ ಸೋಮು ದೊಡವಾಡೆ, ಅಕ್ಷಯ ವಾಲಿ, ಶಿವಲಿಂಗ ಪೂಜೇರಿ, ಕರುನಾಕರ, ಅಭಿಷೇಕ ಕಲಾಲ, ನೇತ್ರಾ ಕಮ್ಮಾರ, ಮಾನಂದಾ ಪಾಟೀಲ, ಜಯಶ್ರೀ ಮಗದುಮ್ ಸೇರಿದಂತೆ ಎಬಿವಿಪಿ ಹಾಗೂ ಕೆಎಲ್‍ಇ ವಿದ್ಯಾರ್ಥಿಗಳು ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here