ಶೀಘ್ರದಲ್ಲಿ ನಿರುದ್ಯೋಗಿ ಯುವಕರಿಗೆ ಯುವಶಕ್ತಿ ಯೋಜನೆ-ರಾಮಚಂದ್ರಪ್ಪ

0
21
loading...

ಕೊಪ್ಪಳ ಜ,12 : ದೇವರಾಜ್ ಅರಸ್ ಅಭಿವೃದ್ದಿ ನಿಗಮದಿಂದ ಈಗಾಗಲೇ ಮಹಿಳೆಯರಿಗಾಗಿ ಜಾರಿಯಲ್ಲಿರುವ ಸ್ತ್ರೀಶಕ್ತಿ ಯೋಜನೆಯಂತೆ ರಾಜ್ಯದ 29000 ಗ್ರಾಮಗಳಲ್ಲಿ ಶೀಘ್ರದಲ್ಲಿ ನಿರುದ್ಯೋಗಿ ಯುವಕರಿಗಾಗಿ ಯುವಶಕ್ತಿ ಯೋಜನೆಯನ್ನು ಜಾರಿಗೆ ತರಲಾಗುವುದೆಂದು ರಾಜ್ಯ ದೇವರಾಜ್ ಅರಸ್ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಚಂದ್ರ ಹೇಳಿದರು.
ಅವರು ರವಿವಾರ ಸಂಜೆ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಈ ಯೋಜನೆಯಿಂದ ಪ್ರತಿ ಗ್ರಾಮದಲ್ಲಿ 100 ರಿಂದ 150 ಯುವಕರ 10-15 ಜನ ಯುವಕರ ತಂಡ ರಚಿಸಿ ಇವರಿಗೆ ಪ್ರಥಮ ಬಾರಿ ಒಂದು ತಂಡಕ್ಕೆ 40 ರಿಂದ 50 ಸಾವಿರ ರೂ ಗುಂಪು ಸಾಲವನ್ನಾಗಿ ನೀಡಿ ಅವರನ್ನು ಅದೇ ಗ್ರಾಮದಲ್ಲಿ ಕೆಲಸ ನಿರ್ವಹಿಸಲು ಅನುಕೂಲ ಮಾಡಿಕೊಡಲಾಗುವುದು, ಮುಂದಿನ ದಿನಗಳಲ್ಲಿ ಈ ಯುವಶಕ್ತಿ ಗುಂಪುಗಳಿಗೆ 1 ಲಕ್ಷ ರೂಯವರೆಗೆ ಸಾಲ ಮಂಜೂರು ಮಾಡಲಾಗುವುದು, ಪ್ರತಿಯೊಬ್ಬ ಯುವಕರು ಮಾಸಿಕ ಕನಿಷ್ಠ 5 ಸಾವಿರ ರೂ ದುಡಿಯುವಂತೆ ಮಾಡವುದು ಈ ಯೋಜನೆಯ ಗುರಿಯಾಗಿದೆ.
ಅಲ್ಲದೇ ಈ ಯುವಕರಿಂದ ಸ್ವಚ್ಛ ಗ್ರಾಮ ಯೋಜನೆಯಡಿಯಲ್ಲಿ ಮನೆಯ ಮುಂದಿರುವ ಕಸ-ಕಡ್ಡಿಯನ್ನು ತೆಗೆದು ಹಾಕುವುದು, ಒಂದೇಡೆ ಶೇಖರಿಸಿದ ಕಸವನ್ನು ಸಾವಯವ ಗೊಬ್ಬರ ಹಾಗೂ ಕುಡಿಯುವ ಶುದ್ಧ ನೀರಿನ ಯೋಜನೆ ಘಟಕ, ವಿಲೇವಾರಿ ಮಾಡುವುದು, ಹೀಗೆ ಅನೂಕೂಲ ಮಾಡಿಕೊಡಲಾಗುವುದು ಎಂದರು.
ಭ್ರಷ್ಠಚಾರಕ್ಕೆ ಕಡಿವಾಣ : ಇಲಾಖೆಯಲ್ಲಿ ಸಾಲ ವಿತರಣೆಯಲ್ಲಿ ಫಲಾನುಭವಿಗಳಿಂದ ಅಧಿಕಾರಿಗಳು ಹಣ ವಸೂಲಿ ಮಾಡುತ್ತೀರುವುದು ನನ್ನ ಗಮನಕ್ಕೆ ಬಂದಿದೆ ಅಂಥಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಅನ್‍ಲೈನ್ ಮೂಲಕ ಫಲಾನುಭವಿಗಳಿಗೆ, ಯುವಕರಿಗೆ ಹಣ ಜಮಾ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಭೂಸೇನಾ ನಿಗಮದ ಅಧ್ಯಕ್ಷ ಅಶೋಕ ದಳವಾಯಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಬಸವರಾಜ್ ಹಿಟ್ನಾಳ, ಮುಖಂಡರಾದ ಸುರೇಶ ಭೂಮರಡ್ಡಿ, ಕೆ.ಎಂ.ಸೈಯದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ಅಮರೇಶ ಉಪಲಾಪೂರು, ಜಿಲ್ಲಾ ಸಹಕಾರಿ ಯುನಿಯನ್ ನಿರ್ದೇಶಕ ಗವಿಸಿದ್ಧೇಶ ಹುಡೇಜಾಲಿಮಠ, ಜಡಿಯಪ್ಪ ಬಂಗಾಳಿ, ಬಾಳಪ್ಪ ಬಾರಕೇರಾ ಮತ್ತೀತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here