ನಲಿಕಲಿ ಬೋಧನೆ

0
114
loading...

ಬದಾಮಿ ತಾಲೂಕಿನ ನಲಿಕಲಿ ತರಗತಿ ಬೋಧಿಸುವ ಮಕ್ಕಳಲ್ಲಿ ಚೈತನ್ನಯ ತುಂಬಲು ಮತ್ತು ಸೊರಗಿ ಹೋಗಿರುವ ನಲಿ ಕಲಿ ತರಗತಿಗಳಲ್ಲಿ ಜೀವ ತುಂಬು ಕಾರ್ಯವನ್ನು ಶಿಕ್ಷಕರ ಮನೋಬಲದಲ್ಲಿ ಮಾಡಿಸುವ ಸಲುವಾಗಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ತಾಲೂಕಿನ ಎಲ್ಲ ಶಾಲೆಗಳಲ್ಲಿ ನಲಿಕಲಿ ಬೋಧನೆ ಮಾಡುತ್ತಿರುವ ಶಿಕ್ಷಕ,ಶಿಕ್ಷಕರಿಯರನ್ನು ಬಿ.ಆರ್.ಸಿ.ಬದಾಮಿ ಕರೆಯಿಸಿ ಒಂದು ದಿನದಲ್ಲಿ ನಲಿಕಲಿ 1, 2, ಮತ್ತು 3ನೇ ತರಗತಿಗಳಿಗೆ ಇರುವ ಕನ್ನಡ ಭಾಷೆ, ಗಣಿತ ಮತ್ತು ಪರಿಸರ ಅಧ್ಯಯನದ ಅಭ್ಯಾಸದ ಪುಸ್ತಕಗಳನ್ನು ಚೆನ್ನಾಗಿ ಓದಿಸುವ, ಹಾಗು 1ನೇ ತರಗತಿಯಿಂದ 4ನೇ ತರಗತಿಯ ವರೆಗೆ ಇರುವ ಪರಿಚಯಾತ್ಮಕ ಇಂಗ್ಲೀಷ್ ಪುಸ್ತಕಗಳನ್ನು ಚೆನ್ನಾಗಿ ಓದಿಕೊಂಡು ತಮ್ಮ ತರಗತಿಗಳಲ್ಲಿ ಹಾಡು, ರೈಮ್ಸ, ಕಥೆ, ಸಂಭಾಷಣೆ, ಗಳನ್ನು ಹೇಳಿ ಮಕ್ಕಳಲ್ಲಿ ಆಲಿಸುವ ಸಾಮಥ್ರ್ಯವನ್ನು ಬೆಳಸುವಲ್ಲಿ ಶಿಕ್ಷಕರು ಶ್ರಮಿಸಬೇಕಾಗಿದೆ. ಮಕ್ಕಳು ನಿಮ್ಮ ಮುಂದೆ ಇವೆ ಅವರಿಗೆ ಚೆನ್ನಾಗಿ ಕಲಿಸಿರಿ. ಶಿಕ್ಷಕರೂ ನಿತ್ಯವೂ ಓದುಗರಾಗಿ ಚೆನ್ನಾಗಿ ಸಿದ್ಧತೆಗಳನ್ನು ಮಾಡಿಕೊಂಡು ಮಕ್ಕಳಿಗೆ ಮನಸ್ಸು ಉಲ್ಲಸಿತವಾಗುವಂತೆ ಬೋಧನೆ ಮಾಡುವ ಹಂಬಲ ಹೊಂದಬೇಕು ಎಂದು ತಿಳಿಸಿದರು. ಶಿಕ್ಷಣಕ್ಕೆ ಅಡಿಪಾಯವಾಗಿರುವ ಮೊದಲ 1 ರಿಂದ 4ನೇ ತರಗತಿಗಳಲ್ಲಿ ಮಕ್ಕಳಿಗೆ ಉತ್ತಮ ಓದು, ಬರಹ ಮಾತುಗಾರಿಕೆ, ಲೆಕ್ಕ ಮಾಡುವ ಕ್ರಿಯೆಗಳನ್ನು ಸರಿಯಾಗಿ ತಿಳಿಸದೇ ಹೋದರೆ ನಮ್ಮ ಭವಿಷ್ಯದ ಭಾರತದ ಭದ್ರ ಬುನಾದಿಯನ್ನು ನಾವು ಇಂದು ಸಡಿಲು ಮಾಡಿದಂತಾಗುತ್ತದೆ. ಶಿಕ್ಷಕರು ಕತ್ರ್ಯವ್ಯವನ್ನು ಅರಿತು ವೃತ್ತಿ ಹಿರಿಮೆ ತಿಳಿದು ಅದನ್ನು ಪ್ರವೃತ್ತಿಯನ್ನಾಗಿ ಬದಲಿಸಿಕೊಂಡು ತಮ್ಮ ಬೋಧನಾ ಕಾರ್ಯದಲ್ಲಿ ಆತ್ಮ ಸಂತೋಷದಿಂದ ಕಾರ್ಯನಿರ್ವಹಿಸಲು ತಿಳಿಸಿದರು.
ಇದೇ ಕಾರ್ಯಕ್ರಮದಲ್ಲಿ ಬಿ.ಇ.ಓ ಶ್ರೀ ಅಂದಾನಪ್ಪ ವಡಗೇರಿ ಮಾತನಾಡಿ ಸ್ಪಷ್ಟ ಓದು ಶುಧ್ಧ ಬರಹ ಮತ್ತು ಸರಳ ಲೆಕ್ಕಚಾರಗಳನ್ನು ಮಾಡಲು ಈ ಕಾರ್ಯಾಗಾರದಲ್ಲಿ ಓದಲು ಹಚ್ಚಿರುವ ಕಾರ್ಯವು ಪೂರಕ ಆಗಿದೆ. ನಿಜವಾದ ಶಿಕ್ಷಕರು ಓದಿಕೊಂಡು ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ತಮ್ಮ ಶಾಲೆಗಳಲ್ಲಿ ಮಾಡುತ್ತಾರೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಸಿದ್ದಮ್ಮ ಪಾಟೀಲ, ರಂಗರೇಜಿ. ಶ್ರೀ ಪೂಜಾರ ಶ್ರೀ ಕಡಿವಾಲ, ಶ್ರೀ ದೊಡಪ್ಪನವರ ಹಾಗೂ ಬಿ.ಆರ್.ಪಿ. ಮತ್ತು ಸುಮಾರು 100ಕ್ಕೂ ಹೆಚ್ಚು ನಲಿಕಲಿ ಶಿಕ್ಷಕರು ಹಾಜರಿದ್ದರು.

ಶಾಸಕರ ಮಾದರಿ ಪ್ರಾಥಮಿಕ ಶಾಲೆ ಬದಾಮಿಯಲ್ಲಿ ನಡೆದ ಅಗಸ್ತ್ಯ ಫೌಂಡೇಷನ್ ಮತ್ತು ಎಸ್.ಎಸ್.ಎ. ವತಿಯಿಂದ ನಡೆಸಲಾಗುತ್ತಿರುವ ವಿಜ್ಞಾನ ಕೇಂದ್ರವನ್ನು 2015-16ನೇ ಸಾಲಿಗೆ ಉದ್ಘಾಟನೆ ಮಾಡಿ ಮಾತನಾಡುತ್ತಾ ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಬೆಳೆಸಬೇಕು. ವೈಜ್ಞಾನಿಕ ಜಗತ್ತನ್ನು ಶಿಕ್ಷಕರು ತೋರಿಸಬೇಕು. 1 ರಿಂದ 10ನೇ ತರಗತಿವರೆಗೆ ಪಠ್ಯದಲ್ಲಿರುವ ಸರಳ ಪ್ರಯೋಗಗಳನ್ನು ಶಾಲೆಯಲ್ಲಿ ಶಿಕ್ಷಕರು ಮಾಡಬೇಕು. ಈ ಪ್ರಯೋಗಗಳಿಗೆ ಇಂದು ಉದ್ಘಾಟನೆ ಮಾಡಿದ ವಿಜ್ಞಾನ ಕೇಂದ್ರದ ಸದುಪಯೋಗ ಮಾಡಿಕೊಳ್ಳಬೇಕು. ಅಗಸ್ತ್ಯ ಫೌಂಡೇಷನ್ ದವರು ಅತ್ಯಂತ ಕ್ರಿಯಾಶೀಲರಾಗಿ ಕಾರ್ಯವನ್ನು ಮಾಡುತ್ತಿದ್ದಾರೆ. ಅವರು ಮಕ್ಕಳಿಗೆ ತಿಳಿಯುವಂತೆ ಸರಳ ಪ್ರಯೋಗಗಳನ್ನು ಮಾಡಿ ತೋರಿಸುತ್ತಾರೆ. ಅವರಿಂದ ನಮ್ಮ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಭಾವ ಬೆಳೆಯಲು, ವಿಜ್ಞಾನದ ಜಗತ್ತನ್ನು ಪರಿಚಯಿಸಿರಿ. ಕಲಾಂ ರಂತೆ ಶ್ರೇಷ್ಠ ವಿಜ್ಞಾನಿಗಳಾಗುವಂತೆ ಪ್ರಯತ್ನಿಸಲು ತಿಳಿಸಿದರು. ಕನಸು ಕಾಣಲು ತಿಳಿಸಿ, ಕನಸು ನನಸಾಗಿಸಿಕೊಳ್ಳಲು ನಿರಂತರ ಅಧ್ಯಯನ ಶ್ರದ್ದೆಯ ಪ್ರಯತ್ನ ಮಾಡಲು ತಿಳಿಸಿದರು. ವಿದ್ಯಾರ್ಥಿಗಳಿಗೆ ಶಿಕ್ಷಕರು ಪೂರಕವಾಗಿ ನಿಂತ ಒಬ್ಬ ಶ್ರೇಷ್ಠ ವಿಜ್ಞಾನಿ ಆಗುವಂತೆ ಸಹಕಾರ, ಮಕ್ಕಳು ಅಧ್ಯಯನ ಶೀಲರಾಗುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ಇದೇ ಕಾರ್ಯಕ್ರಮದಲ್ಲಿ ಬಿ.ಇ.ಓ ಶ್ರೀ ಅಂದಾನಪ್ಪ ವಡಗೇರಿ ಮಾತನಾಡಿ ಮಾನ್ಯಶಾಸಕರ ಅನುಮತಿಯ ಮೇರೆಗೆ ಈ ಶಾಲೆಯಲ್ಲಿ ವಿಜ್ಞಾನ ಕೇಂದ್ರ ಸ್ಥಾಪಿಸಲು ಅವಕಾಶ ಮಾಡಿಕೊಡಲಾಗಿದೆ. ಈ ಕೇಂದ್ರದಲ್ಲಿರುವ ವಿಜ್ಞಾನದ ಅನೇಕ ವಸ್ತುಗಳಿಗೆ ಸುತ್ತಲಿನ ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಈ ಕೇಂದ್ರದ ಸಂಪೂರ್ಣ ಲಾಭ ಪಡೆದುಕೊಳ್ಳು ತಿಳಿಸಿದರು. ಇಂದಿನ ವೈಜ್ಞಾನಿಕ ಯುಗದಲ್ಲಿ ಶಿಕ್ಷಕರ ಕಾರ್ಯವು ತುಂಬಾ ಮಹತ್ವದ್ದು. ನಿಜವಾದ ಶಿಕ್ಷಕರು ಸದಾ ಕ್ರಿಯಾಶೀಲಾರಾಗಿ ಹೊಸದನ್ನು ತಿಳಿದುಕೊಂಡು ತಮ್ಮ ಮಕ್ಕಳಿಗೆ ಉತ್ತಮ ಪ್ರಯೋಗಗಳನ್ನು ಮಾಡುವಂತಾಲಿ ಎಂದು ಹಾರೈಸಿದರು. ಶ್ರೀ ಕಡಿವಾಲ, ಶ್ರೀ ದೊಡಪ್ಪನವರ, ಶ್ರೀ ಹೊನಕೇರಿ, ಶ್ರೀ ಕೆ.ವೈ.ಯರಪಲ್ ಹಾಗೂ ಸುಮಾರು 50ಕ್ಕೂ ಹೆಚ್ಚು ವಿಜ್ಞಾನ ಶಿಕ್ಷಕರು ಮತ್ತು 50ಕ್ಕೂ ಹೆಚ್ಚು ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
vvಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here