ಸಮೀಪದ ಬಾಡಗಿ ಗ್ರಾಮದ ರೈತನೊಬ್ಬ ದಿ 21 ರಂದು ವಿಷ ಸೇವಿಸಿ ಆತ್ಮ ಹತ್ಯೆಗೆ ಯತ್ನಿಸಿದಾಗ ಮಿರಜ ಆಸ್ಪತ್ರೆಗೆ ಧಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಶನಿವಾರ ರಾತ್ರಿ 12 ಘಂಟೆಗೆ ಸಾವನ್ನಪ್ಪಿದ್ದಾನೆ.

0
28
loading...

ಅರಟಾಳ : ಸಮೀಪದ ಬಾಡಗಿ ಗ್ರಾಮದ ರೈತನೊಬ್ಬ ದಿ 21 ರಂದು ವಿಷ ಸೇವಿಸಿ ಆತ್ಮ ಹತ್ಯೆಗೆ ಯತ್ನಿಸಿದಾಗ ಮಿರಜ ಆಸ್ಪತ್ರೆಗೆ ಧಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಶನಿವಾರ ರಾತ್ರಿ 12 ಘಂಟೆಗೆ ಸಾವನ್ನಪ್ಪಿದ್ದಾನೆ.
ಘಟನೆ ವಿವರ : ಬಾಡಗಿ ಗ್ರಾಮದ ಸತೀಶ ಅಣ್ಣಪ್ಪ ಮಮದಾಪೂರ (36) ಈತನು 1 ಎಕರೆ 9 ಗುಂಟೆ ಜಮೀನಿದ್ದು, ಪಿಕೆಪಿಎಸ್ ದಲ್ಲಿ ಹಾಗೂ ಖಾಸಗಿ ಕೈಸಾಲ ಮಾಡಿದ್ದ. ತಂದೆ ತೀರಿಕೊಂಡ ನಂತರ ಮನೆಯ ಹಿರಿಯ ಮಗನಾಗಿದ್ದರಿಂದ ಮನೆಯ ಜವಾಬ್ದಾರಿ ಈತನ ಹೆಗಲೇರಿತು. ಕೃಷಿ ಮಾಡಿ ಜೀವನ ನಡೆಸುತ್ತಿದ್ದರಿಂದ ಹೊಲದಲ್ಲಿ ಕಬ್ಬು ಇದ್ದು ಅದರ ನಿರ್ವಹಣೆಗೆ ಅಲ್ಲಲ್ಲಿ ಸಾಲ ಮಾಡಿ ಕಬ್ಬನ್ನು ಗುಡಗುಂಟಿ ಕಾರ್ಖಾನೆಗೆ ಸಾಗಿಸಿದ್ದ, ಉಳಿದ ಜಮೀನದಲ್ಲಿ ಮಳೆ ಇರಲಾರದ್ದರಿಂದ ಬೆಳೆ ಇದ್ದರೂ ಕೈಗೆಟುಕಲಿಲ್ಲ. ಹೀಗಿರುವಾಗ ಮನನೊಂದ ರೈತ ಸತೀಶ ಅಣ್ಣಪ್ಪ ಮಮದಾಪೂರ ವಿಷ ಸೇವಿಸಿ ಆತ್ಮ ಹತ್ಯೆಗೆ ಯತ್ನಿಸಿದ್ದ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಮೃತ ರೈತನಿಗೆ ಹೆಂಡತಿ, ಒಂದು ಗಂಡು, ಒಂದು ಹೆಣ್ಣು ಇರುತ್ತಾರೆ ಇವರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಅಥಣಿ ತಹಶೀಲ್ದಾರ ಎಸ್ ಎಸ್ ಪೂಜಾರಿ, ಅಥಣಿ ವೃತ್ತ ನೀರಿಕ್ಷಕ ಆರ್ ಎಸ್ ಬಡದೇಸಾರ, ಭೇಟಿ ನೀಡಿ ಪರಿಹಾರ ಕೊಡುವುದಾಗಿ ಭರವಸೆ ನೀಡಿದ್ದಾರೆ. ಪ್ರಕರಣ ಐಗಳಿ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.

loading...

LEAVE A REPLY

Please enter your comment!
Please enter your name here