ಕರ್ನಾಟಕ ಕ್ಷೌರಿಕ ಹಿತರಕ್ಷಣಾ ವೇದಿಕೆ

0
16
loading...

 

ವಿಜಯಪುರ  ಉಳ್ಳವರು ಇಲ್ಲದವರಿಗೆ ಸಹಾಯ ಮಾಡುವ ಮೂಲಕ ಅವರ ಇಲ್ಲದಿರುವಿಕೆಯ ಕೊರಗನ್ನು ಕಳೆಯುವ ಮೂಲಕ ಸಮಾನತೆಯ ಭಾವ ಮೂಡುವಂತೆ ಮಾಡಬೇಕು ಎಂದು ಕರ್ನಾಟಕ ಕ್ಷೌರಿಕ ಹಿತರಕ್ಷಣಾ ವೇದಿಕೆಯ ಮುಖಂಡ ರಾಘವೇಂದ್ರ ಗುರ್ಜಾಲ ಹೇಳಿದರು.
ಅವರು ಇಂದು ನಗರದ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಕ್ಷೌರಿಕ ಹಿತರಕ್ಷಣಾ ವೇದಿಕೆಯ 11ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಪೌರಕಾರ್ಮಿಕರಿಗೆ ಸೀರೆ ವಿತರಿಸಿ ಮಾತನಾಡಿದರು.
ಕರ್ನಾಟಕ ಕ್ಷೌರಿಕ ಹಿತ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಲಿಂಗರಾಜ ಬಳ್ಳಾರಿ ಮಾತನಾಡಿ, ವಾರ್ಷಿಕೋತ್ಸವಗಳ ಸಂದರ್ಭದಲ್ಲಿ ಸಂಘಟನೆಗಳು ದುಂದುವೆಚ್ಚ ಮಾಡಬಾರದು. ಅದೆ ಹಣವನ್ನು ಬಡವರಿಗೆ ನೀಡುವ ಸಂಸ್ಕøತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ 31 ಜನ ಪೌರಕಾರ್ಮಿಕರಿಗೆ ಸೀರೆಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೌರಿಕ ಹಿತರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಎಸ್.ಕೆ. ಕುಮಾರ, ರವಿ ಹಡಪದ, ಮಹೇಶ ಮುದೋಳ, ಕಿರೋಶ ಸಾರವಾಡ, ಸುನೀಲ ಕ್ಷೀರಸಾಗರ, ಗಣೇಶ ಬಳ್ಳಾರಿ, ಗುರು ಹಡಪದ, ರಂಗಾ ಗಾಯಕವಾಡ, ವೆಂಕಟೇಶ ವೈದ್ಯ, ಸಾಗರ ಖಂಡಾಕಳೆ, ಬಸವರಾಜ ಹಡಪದ, ಚಂದು ಕಾಳೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

 

loading...

LEAVE A REPLY

Please enter your comment!
Please enter your name here