ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಲಕ್ಷ್ಮೀ ಹೆಬ್ಬಾಳಕರ ಸಾಂತ್ವಾನ.

0
10
loading...

ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಲಕ್ಷ್ಮೀ ಹೆಬ್ಬಾಳಕರ ಸಾಂತ್ವಾನ

ಮುನವಳ್ಳಿ : ಇತ್ತೀಚಿಗೆ ಸವದತ್ತಿ ತಾಲೂಕಿನ ಹಂಚಿನಾಳ ಹಾಗೂ ಚಿಕ್ಕುಂಬಿ ಗ್ರಾಮಗಳ ರೈತರಾದ ಅಶೋಕ ಬಸಪ್ಪ ಸಿಂಗಾರಗೊಪ್ಪ ಹಾಗೂ ಬಸವರಾಜ ಮಣ್ಣೂರ ಇವರ ಮನೆಗೆ ರಾಜ್ಯ ಮಹಿಳಾ ಕಾಂಗ್ರೇಸ್ (ಐ) ಪಕ್ಷದ ಅಧ್ಯಕ್ಷೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ದಿ. 23 ರಂದು ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರ ಧನ ನೀಡಿದರು. ಅನ್ನದಾತ ಆತ್ಮಹತ್ಯೆಗೆ ಶರಣಾಗುತ್ತಿರುವುದು ಅತ್ಯಂತ ನೋವು ತಂದಿದೆ. ಈ ನಾಡಿದ ರೈತರು ಇಂಥ ಕೃತ್ಯಕ್ಕೆ ಕೈಹಾಕುವ ಮೊದಲು ಅವರ ಕುಟುಂಬದವರ ಬಗ್ಗೆ ಸ್ವಲ್ಪ ಯೋಚಿಸುವ ಅಗತ್ಯವಿದೆ ರೈತರ ಸಮಸ್ಯೆಗಳಿಗೆ ನಮ್ಮ ಸರಕಾರ ಸದಾ ಸ್ಪಂದನೆ ನೀಡಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಅದಾಗಿಯೂ ಅನ್ನದಾತ ಇಂಥ ಹೀನ ಕೃತ್ಯಕ್ಕೆ ಬಲಿಯಾಗುತ್ತಿರುವುದು ಖೇದಕರ ಸಂಗತಿ ಎಂದು ಹೇಳಿ ಮೃತರ ಕುಟುಂಬಕ್ಕೆ ಸರಕಾರ ಸೌಲಭ್ಯಗಳನ್ನು ನೀಡುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಹಾಗೂ ನಾಡಿನಲ್ಲಿ ಮಳೆಯಾಗದೆ ರೈತರು ಕಂಗಾಲಾಗಿದ್ದರೆ ಶೀಘ್ರವೇ ರಾಜ್ಯ ಹಾಗೂ ಕೇಂದ್ರ ಸರಕಾರ ರೈತರಿಗೆ ಬರ ಪರಿಹಾರ ಘೋಷಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿ.ಡಿ.ಸಿ.ಸಿ. ಬ್ಯಾಂಕ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ. ಜಿ. ಪಂ.ಸದಸ್ಯ ರವೀಂದ್ರ ಯಲಿಗಾರ. ಮಹಾರಾಜಗೌಡ ಪಾಟೀಲ. ಜಿಲ್ಲಾ ಕಾಂಗ್ರೇಸ್ ಕಿಸಾನ ಸೆಲ್ ಅಧ್ಯಕ್ಷ ರಾಜು ಕಗಧಾಳ. ಆನಂದ ಚೋಪ್ರಾ. ಸುನೀಲ ಪಾಟೀಲ. ರಾಮನಗೌಡ ತಿಪರಾಶಿ ಹಾಗೂ ಕಾಂಗ್ರೇಸ್ ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here