ಸಾಲದ ಬಾಧೆಯಿಂದ ವಿಜಯಪುರ ಜಿಲ್ಲೆಯಲ್ಲಿ ಮತ್ತೊಬ್ಬ ರೈತನ ಆತ್ಮಹತ್ಯೆ

0
29
loading...

ವಿಜಯಪುರ, ಆ.8 : ಸಾಲದ ಬಾಧೆಯಿಂದ ವಿಜಯಪುರ ಜಿಲ್ಲೆಯಲ್ಲಿ ಮತ್ತೊಬ್ಬ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ.
ವಿಜಯಪುರ ತಾಲೂಕಿನ ಸಿದ್ಧಾಪುರ ಕೆ. ಗ್ರಾಮದ ರೈತ ಮಹಾದೇವ ಜೋತಿ ಕೋತ(47) ಎಂಬಾತ ನೇಣಿಗೆ ಕೊರಳಿಡ್ಡಿದ್ದಾನೆ.
ರೈತ ಮಹಾದೇವ ಹೊಲದಲ್ಲಿ ಕೊಳವೆ ಬಾವಿ ಕೊರೆಯಿಸಲು ಹಾಗೂ ದ್ರಾಕ್ಷಿ ಬೆಳೆಯ ಲಾಗೋಡಿ ಸಲುವಾಗಿ ಎಂಟು ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಅದನ್ನು ತೀರಿಸುವುದು ಹೇಗೆಂದು ದಿಕ್ಕು ತೋಚದೇ ನಿನ್ನೆ ರಾತ್ರಿ ತನ್ನ ತೋಟದ ಮನೆಯಲ್ಲಿಯೇ ಜಂತಿಗೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...

LEAVE A REPLY

Please enter your comment!
Please enter your name here