ಹಡಪದ್ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಪ್ರತಿಭಟನೆ

0
26
loading...

ಹಡಪದ್ ಸಮಾಜದ ಕುಲಕಸುಬು ಕ್ಷೌರಿಕ ವೃತ್ತಿಯ ಬಗ್ಗೆ ಜ್ಯೋತಿಷಿ ದೈವಜ್ಞ ಸೋಮಯಾಜಿ ಅಮವಾಸ್ಯೆ, ಹುಣ್ಣಿಮೆ, ಪಾಡ್ಯ, ನವಮಿ, ಸೇರಿ ಹಬ್ಬ ಹರಿದಿನಗಳಲ್ಲಿ ಕ್ಷೌರ ಮಾಡಿಸಿಕೊಂಡರೆ ಹಾನಿಯಾಗುತ್ತದೆ. ಮತ್ತು ಕ್ಷೌರ ಸಲಕರಣೆ ಹಿಡಿದು ಮನೆಯ ಮುಖ್ಯದ್ವಾರದಿಂದ ಪ್ರವೇಶಿಸಬಾರದು ಎಂದು ಹೇಳಿಕೆ ನೀಡಿದ್ದರಿಂದ ನಮ್ಮ ಸಮಾಜಕ್ಕೆ ದೊಡ್ಡ ಅವಮಾನವಗಿz.É ಎಂದು ಕುಷ್ಟಗಿ ತಾಲೂಕಾ ಹಡಪದ ಅಪ್ಪಣ್ಣ ಸಮಾದವರು ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮುಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಬುತ್ತಿ ಬಸವೇಶ್ವರ ದೇವಸ್ಥಾನದಿಂದ ಹೋರಟು ಬಸವೇಶ್ವರ ವೃತ್ತದಲ್ಲಿ ದೈವಜ್ಞ ಸೋಮಯಾಜಿ ಪ್ರತಿಕೃತಿ ದಹನ ಮಾಡಿದರು. ನಂತರ ಹಡಪದ ಅಪ್ಪಣ್ಣ ಸಮಾಜದ ತಂಗಡಿಗಿ ಮಠದ ಸ್ವಾಮೀಜಿ ಮಾತನಾಡಿ ಇಂತವರನ್ನು ನಮ್ಮಮತ್ತುಆಂದ್ರ,ಮಹಾರಷ್ಟ್ರ, ಗೋವಾ ರಜ್ಯಗಳಿಂದಲು ಗಡಿಪಾರು ಮಾಡಬೇಕು ಸೋಮಯಾಜಿ ಯಾವುದೆ ವಾಹಿನಿ ಮುಖಾಂತರ ಜ್ಯೋತಿಷಿ ಹೇಳದಂತೆ ನಿರ್ಭಂದ ಹೆರಿ ಕ್ರಿಮಿನಲ್ ಮೊಕದ್ದಮೆ ಹೋಡಿ ಜೈಲಿಗೆ ಕಳಿಸಬೇಕು. ರಾಜ್ಯದಲ್ಲಿ ನಮ್ಮ ಸಮಾಜದ ಬಗ್ಗೆ ಪದೇ ಪದೇ ಅಪಮಾನ, ದವರ್ಜನ್ಯ, ಹಲ್ಲೆ, ಹೆಚ್ಚಾಗುತ್ತಿರುವದು ಖಂಡನೀಯ. ಇನ್ನೋಬ್ಬರಿಗೆ ಅನ್ಯಾಯ ಬಗೆಯದೇ ಕ್ಷೌರಿಕವೃತ್ತಿತನ್ನು ನಂಬಿ ಜೀವನ ನಡೆಸುತ್ತಿರವ ಹಿಂದುಳಿದ ಹಡಪದ ಸಮಾಜದ ರಕ್ಷಣೆಗೆ ಸರಕಾರಕೂಡಲೆ ವಿಶೇಷ ಕಾನೂನ ರುಪಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಹಡಪದ್ ಸಮಜದ ತಲುಕ ಅಧ್ಯಕ್ಷ ನೀಲಕಂಠಬಾಬು, ಪ್ರಧಾನ ಕಾರ್ಯದರ್ಶಿ ಶಿವಕುಮಾರ, ಮುಖಂಡರುಗಳಾದ ನೀಲಪ್ಪ ಮರನಾಳ, ರುದ್ರಪ್ಪ, ಶಂಕರಪ್ಪ, ಶರಣಪ್ಪ, ಮುಖೇಶ್ ನಿಲೋಗಲ್, ಮಾರುತಿ, ನಾಗಪ್ಪ, ಸಂಗಮೇಶ್, ಕಳಕಪ್ಪ, ವಿರೇಶ್, ವಿಶ್ವನಾಥ, ಮಾಹಂತೇಶ್, ರವಿಕುಮಾರ, ಬಸವರಾಜ, ಮುಂತಾದವರು ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here