ಅದ್ದೂರಿಯಾಗಿ ನೇರವೇರಿದ ಹೂವನೂರನ ಪುರಾಣ ಮಹಾಮಂಗಲೋತ್ಸವ

0
21
loading...

ಕೂಡಲಸಂಗಮ-ಶ್ರಾವಣ ಮಾಸದ ನಿಮಿತ್ಯ ಶ್ರೀ ಸರಣಬಸವೇಶ್ವರ ಪುರಾಣ-ಪ್ರವಚನವನ್ನು ಆರಂಭಿಸಿದ್ದು ಒಂದು ತಿಂಗಳ ಪರಿಯಂತ ವಿಜೃಂಭಣೆಯಿಂದ ಸಾಗಿ ಬಂದ ಈ ಧಾರ್ಮಿಕ ಕಾರ್ಯಕ್ರಮವು ಇತ್ತೀಚಗೆ ಪುರಾಣ ಮಹಾಮಂಗಲೋತ್ಸವವು ರಾಷ್ಟ್ರೀಯ ಹೆದ್ದಾರೆ 50 ರ ಪಕ್ಕದಲ್ಲಿರುವ ಹೂವನೂರ ಗ್ರಾಮದಲ್ಲಿ ನಡೆಯಿತು ಈ ಪುರಾಣ ಮಂಗಲೋತ್ಸವದ ಪ್ರಯುಕ್ತ ಶ್ರೀ ಶರಣಬವೇಶ್ವರರ ಭಾವಚಿತ್ರ ಹಾಗೂ 21 ಕುಂಭಮೇಳ ಮೆರವಣೆಗೆಯು ವಿಜೃಂಭಣೆಯಿಂದ ಜರುಗಿತು.
ಶ್ರಾವನ ಮಾಸ ಬಂತೆಂದರೆ ಗ್ರಾಮದಲ್ಲಿ ಭಕ್ತಿ-ಭಾವದಿಂದ ಶರಣರ ಪುರಾಣ-ಪ್ರವಚನವನ್ನು ಆರಂಭಿಸುವ ವಾಡಿಕೆಯಿದೆ,ಒಂದು ತಿಂಗಳ ಪರಿಯಂತ ನಡೆಯುವ ಈ ಪುರಾಣ ಕಾರ್ಯದಲ್ಲಿ ಆಧ್ಯಾತ್ಮಿಕ ವಿಚಾರಧಾರೆಯನ್ನು ತಿಳಿದುಕೊಳ್ಳಲು ಗ್ರಾಮದ ಭಕ್ತರು ಉತ್ಸುಕರಾರಿರುತ್ತಾರೆ ಅಷ್ಟೇ ಭಕ್ತಿಯಿಂದ ಜಂಗಮ ಸೇವೆರಯನ್ನು ಮಾಡುವ ಶರಣ ಗ್ರಾಮವಾಗಿದೆ ಒಂದು ತಿಂಗಳಿಂದ ನಡೆದುಕೊಂಡು ಬಂದು ಪುರಾಣ ಪ್ರವಚನದ ಮಹಾಮಂಗಲದ ದಿನದಂದು ಶ್ರೀ ಶರಣಬಸವೇಶ್ವರರ ಬಾವಚಿತ್ರ ಹಾಗೂ ಕುಂಭಮೇಳದ ಮೆರವಣೆಗೆಯನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ಹಲವಾರು ವಾದ್ಯ-ವೈಭವದೊಂದಿಗೆ ಹಾಗೂ ಪರವಂತರ ಕುಣೆತದೊಂದಿಗೆ ವಿಜೃಂಭಣೆಯಿಂದ ಜರುಗಿತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹೂವನೂರ,ನಂದನೂರ ಹಾಗೂ ಸುತ್ತಮುತ್ತಲಿನ ಭಕ್ತಜನಸಾಗರವು ಭಾಗವಹಿಸಿ ಪುರವಂತರ ಕುಣಿತವನ್ನು ಕಣ್ಣು ತುಂಬಿಕೊಂಡರು.

loading...

LEAVE A REPLY

Please enter your comment!
Please enter your name here