ಆತ್ಮಹತ್ಯೆ ಮಾಡಿಕೊಂಡ ಗಣೇಶವಾಡಿ ಗ್ರಾಮದ ರೈತ ಪರಸಪ್ಪನ ಮಕ್ಕಳಿಗೆ 37,101 ರೂ.ಗಳನ್ನು ಚೆಕ್

0
3
loading...

 

ಗೋಕಾಕ: ಸಾಲದ ಬಾಧೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಗಣೇಶವಾಡಿ ಗ್ರಾಮದ ರೈತ ಪರಸಪ್ಪ ಯಲ್ಲಪ್ಪ ಸಂಪಗಾಂವಿ ಈತನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇಲ್ಲಿಯ ಶೂನ್ಯ ಸಂಪಾದನಾ ಮಠದ ಚನ್ನಬಸವೇಶ್ವರ ವಿದ್ಯಾಪೀಠದ ಸಿದ್ಧಲಿಂಗೇಶ್ವರ ಬಿಸಿಎ ಕಾಲೇಜಿನ ರೆಡ್‍ಕ್ರಾಸ್ ಘಟಕದ ವಿದ್ಯಾರ್ಥಿಗಳು ಸಂಗ್ರಹಿಸಿದ 37,101 ರೂ.ಗಳನ್ನು ಚೆಕ್‍ನ್ನು ಮೃತ ರೈತನ ಪತ್ನಿ ಜಾನವ್ವ ಅವರಿಗೆ ಬುಧವಾರದಂದು ನೀಡಿದರು.
ಈ ಸಂದರ್ಭದಲ್ಲಿ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಸುರೇಶ ಸೊಲ್ಲಾಪೂರಮಠ, ಅಡವೀಶ ಗವಿಮಠ ಸೇರಿದಂತೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.

loading...

LEAVE A REPLY

Please enter your comment!
Please enter your name here