ಕಂಪ್ಯೂಟರ ಶಿಕ್ಷಣ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಅತ್ಯವಶ್ಯಕವಾಗಿದೆ: ಜಿ.ಪಂ. ಸದಸ್ಯ ವಾಸುದೇವ ಸವತಿಕಾಯಿ

0
113
loading...

 

ಗೋಕಾಕ: ಇಂದಿನ ಸ್ಪರ್ಧಾತ್ಮಕ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ ಶಿಕ್ಷಣ ಅತ್ಯವಶ್ಯಕವಾಗಿದೆ ಎಂದು ಜಿ.ಪಂ. ಸದಸ್ಯ ವಾಸುದೇವ ಸವತಿಕಾಯಿ ಹೇಳಿದರು.
ಅವರು, ಇತ್ತೀಚೆಗೆ ನಗರದ ಪ್ರವಾಸಿ ಮಂದಿರದಲ್ಲಿ ಇನ್‍ಫೋಸಿಸ್ ಸಂಸ್ಥೆಯವರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿಎಸ್‍ಇಆರ್‍ಟಿ ನಿರ್ದೇಶಕರಾದ ಎಸ್. ಜಯಕುಮಾರ ಅವರ ಕನಸಿನ ಕಾರ್ಯಕ್ರಮವನ್ನು ‘ಶಾಲೆಗೆ ಬನ್ನಿ ಶನಿವಾರ-ಕಲಿಯಲು ನೀಡಿ ಸಹಕಾರ’ ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಇನ್‍ಫೋಸಿಸ್ ಸಂಸ್ಥೆಯವರು ಕಂಪ್ಯೂಟರ್ ಶಿಕ್ಷಣದ ಜೊತೆ ಸ್ವಚ್ಛ ಭಾರತ, ವ್ಯಕ್ತಿತ್ವ ವಿಕಸನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕೌಶಲ್ಯಗಳನ್ನು ತಿಳಿಸಿರುವುದು ಸ್ವಾಗತಾರ್ಹ ಎಂದರು.
ಸನ್ಮಾನ ಕಾರ್ಯಕ್ರಮದ ಪೂರ್ವದಲ್ಲಿ ಸಮರ್ಪಣ್ ಇನಫೋಸಿಸ್ ಲಿಮಿಟೆಡ್ ಬೆಂಗಳೂರು, ಸರ್ವೋದಯ ಗ್ರಾಮೀಣ ವಿಕಾಸ ಸಂಸ್ಥೆ ಹಿರೇಬಾಗೇವಾಡಿ, ಪರಿವಾರ ಫೌಂಡೇಶನ್ ಗೋಕಾಕ ಇವರ ಸಂಯುಕ್ತಾಶ್ರಯದಲ್ಲಿ ಗೋಕಾಕ, ಮೂಡಲಗಿ, ರಾಯಬಾಗ ವಲಯದ ಆಯ್ದ ಸುಮಾರು 30 ಶಾಲೆಗಳಲ್ಲಿ ಗ್ರಾಮೀಣ ಸ್ಪಂದನ ಕಾರ್ಯಕ್ರಮದಡಿಯಲ್ಲಿ ಸುಮಾರು 3000 ಶಾಲಾ ಮಕ್ಕಳಿಗೆ ಕಂಪ್ಯೂಟರ್ ಬಗ್ಗೆ ಮೂಲ ತಿಳುವಳಿಕೆ, ಮಹತ್ವ ಹಾಗೂ ಉಪಯೋಗದ ಬಗ್ಗೆ ತರಬೇತಿ ನೀಡಿದರು.
ಈ ತರಬೇತಿಯಲ್ಲಿ ಬೆಂಗಳೂರಿನ ಇನ್‍ಫೋಸಿಸ್ ಸಂಸ್ಥೆಯ ಮೂವತ್ತು ಸಾಫ್ಟವೇರ ಇಂಜನೀಯರ್ಸ್ ಬಂದು ಎಲ್ಲ ಶಾಲೆಗಳಿಗೆ ಹೋಗಿ ಮಕ್ಕಳ ಜೊತೆ ಬೆರೆತು ಕಾರ್ಯಾಗಾರ ನಡೆಸಿಕೊಟ್ಟರು.
ಗ್ರಾಮೀಣ ಸ್ಪಂದನ ಕಾರ್ಯಕ್ರಮದಡಿಯಲ್ಲಿ ಈ ಮೂರು ತಾಲೂಕಿನ ಸುಮಾರು 70 ಶಾಲೆಗಳಿಗೆ ಉಚಿತ ಕಂಪ್ಯೂಟರ್ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಸಂಸ್ಥೆಯ ಮುಖ್ಯಸ್ಥರ ಜೊತೆ ಚರ್ಚಿಸಿ ಈ ಎಲ್ಲ ಶಾಲೆಗಳಿಗೆ ಕಂಪ್ಯೂಟರ್‍ಗಳನ್ನು ಒದಗಿಸಲಾಗುವದೆಂದು ಇನ್‍ಫೋಸಿಸ್ ಸಂಸ್ಥೆಯ ಸಾಫ್ಟವೇರ್ ಇಂಜನೀಯರ ಮಹೇಶಕುಮಾರ ಭರವಸೆ ನೀಡಿದರು.
ಇನ್‍ಫೋಸಿಸ್ ಸಂಸ್ಥೆಯ ಹಿರಿಯ ಸಾಫ್ಟವೇರ್ ಇಂಜಿನಿಯರ್ಸರಾದ ರಿತೇಶ ಹಾಗೂ ಶ್ರೀನಿವಾಸ ಮಾರ್ಗದರ್ಶನದಲ್ಲಿ 30 ತರಬೇತುದಾರರು ಕಾರ್ಯಗಾರದಲ್ಲಿ ಭಾಗವಹಿಸಿದರು. ಉದಯ ಇಡಗಲ್ಲ, ವಿವಿಧ ಶಾಲೆಯ ಮುಖ್ಯೋಪಾಧ್ಯಾಯರಾದ ಎಲ್.ಎಸ್.ಚೌರಿ, ಆರ್.ಎಮ್. ಅಗಳನ್ನವರ, ಎಸ್.ಆಯ್. ಸವದತ್ತಿ, ಎಮ್.ಎಲ್.ಹಸರಂಗಿ, ಎಲ್.ಎಲ್. ನಾಯಕ, ಎಮ್.ಎಸ್.ಜೊಲಾಪೂರ, ಎಸ್.ಎಸ್. ಮಾಳಗಿ ಸೇರಿದಂತೆ ಹಲವರು ಇದ್ದರು.

loading...

LEAVE A REPLY

Please enter your comment!
Please enter your name here