ಗಣಪತಿಗೆ ಪ್ರಥಮ ಆದ್ಯತೆ ನೀಡಿದ ಬಾದಾಮಿ ಚಾಲುಕ್ಯರು

0
33
loading...

ಶಂಕರಲಿಂಗ ದೇಸಾಯಿ
ಬಾಗಲಕೋಟ : ದಕ್ಷಿಣದ ಕಾವೇರಿಯಿಂದ ಉತ್ತರದ ನರ್ಮದಾ ನದಿಯವರೆಗೆ ಸಾಮ್ರಾಜ್ಯ ಸ್ಥಾಪಿಸಿ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ಹಾರಿಸಿದ ಬಾದಾಮಿಯ ಚಾಲುಕ್ಯರ ಪ್ರಸಿದ್ದಿಗೆ ಕಾರಣವಾಗಿದ್ದು, ಅವರು ಪ್ರಥಮ ಕಾರ್ಯದಲ್ಲಿ ಆದ್ಯತೆ ನೀಡುತ್ತಿರುವ ಗಣೇಶನ ಆರಾಧನೆಯಿಂದ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.
ಅದಕ್ಕಿಂತ ಪೂರ್ವದ ಇತಿಹಾಸವನ್ನು ಅವಲೋಕಿಸಿದಾಗ ಬಾದಾಮಿಗೆ ಮೊದಲು ವಾತಾಪಿ ಇಲ್ವಲ ಎಂಬ ರಾಕ್ಷಸರು ಇಲ್ಲಿಯ ಜನರಿಗೆ ತೊಂದರೆ ನೀಡುವದರಲ್ಲದೇ ನಿರಂತರವಾಗಿ ಪೀಡಿಸುತ್ತಿದ್ದರು. ಕಾಲಾಂತರದಿಂದ ಅಗಸ್ತ್ಯ ಋಷಿಗಳು ಸಂಚರಿಸುತ್ತಾ ಇಲ್ಲಿಗೆ ಆಗಮಿಸಿ ಇಲ್ಲಿ ಉಪಟಳ ಕೊಡುತ್ತಿರುವ ವಾತಾಪಿ ಮತ್ತು ಇಲ್ವಲ ಎಂಬ ರಾಕ್ಷಸರ ಬಗ್ಗೆ ತಿಳಿದುಕೊಂಡರು. ಇವರಿರ್ವರೂ ದುಷ್ಟ ಹಾಗೂ ಪರಾಕ್ರಮಿ ರಾಕ್ಷಸರಾಗಿದ್ದರಿಂದ ಯೋಗಿಗಳು ಯತಿಗಳು ಕೂಡ ಇವರಿಗೆ ಹೆದರುತ್ತಿದ್ದರು. ಈ ವಿಷಯ ತಿಳಿದ ಅಗಸ್ತ್ಯರು ಸಮಸ್ತ ಗಣಗಳ ನಾಯಕ ಗಣಪತಿಯ ಆರಾಧನೆಯಿಂದ ಎಂತಹದೇ ಕಠಿಣ ಕಾರ್ಯ ನಿರ್ವಿಗ್ನವಾಗಿ ಸಾಗುವುದ ಎಂಬುದನ್ನು ಅರಿತು ಶ್ರೀಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ನಾನಾ ವಿವಿಧ ಪೂಜಾ ಕೈಂಕರ್ಯಗಳನ್ನು ಪೂರೈಸಿ ಈ ಇಬ್ಬರು ರಾಕ್ಷಸರನ್ನು ಕೊಂದರು. ಎಂದು ಇತಿಹಾಸ ಹಾಗೂ ಸಂಶೋಧನೆಯಿಂದ ತಿಳಿದು ಬಂದಿದ್ದು, ಇದರಿಂದಲೇ ಬಾದಾಮಿಗೆ ವಾತಾಪಿ ಎಂಬ ಹೆಸರು ಹಿಂದೆ ಇತ್ತು ಎಂದು ತಿಳಿಯುತ್ತಿದೆ.
ಈ ಸಂಶೋಧನೆಯಿಂದ ಹೊರಬಂದ ವಿಷಯವನ್ನು ಆಧರಿಸಿಕೊಂಡು ತಮಿಳುನಾಡಿನ ಹೆಸರಾಂತ ಸಂಗೀತಗಾರ ಮತ್ತು ಗೀತ ರಚನೆಕಾರ ಮುತ್ತುಸ್ವಾಮಿ ದಿಕ್ಷಿತ ರಚಿಸಿದ “ವಾತಾಪಿ ಗಣಪತಿ ಭಜ್ಯೆ ಹಂ” ಎಂಬ ಹಾಡು ಇಂದಿಗೂ ಪ್ರಸ್ತುತವಿದೆ. ತದನಂತರ ಸಾಮ್ರಾಜ್ಯ ಸ್ಥಾಪಿಸಿದ ಚಾಲುಕ್ಯರು ಪ್ರಥಮವಾಗಿ ಗಣೇಶನ್ನು ಪೂಜಿಸುತ್ತಿದ್ದರು ಎಂಬುದು ಅವರು ಸ್ಥಾಪಿಸಿದ ಶಿಲ್ಪಕಲೆಗಳಲ್ಲಿ ಕಂಡು ಬರುತ್ತದೆ. ಅವರು ನಿರ್ಮಿಸಿದ ಬಲಮುರಿ ಸೊಂಡೆಯ ಗಣೇಶನ ಮೂರ್ತಿ ಪೂಜೆಗೆ ಅರ್ಹವಾಗಿದ್ದರಿಂದ ಕೇವಲ ದೇವಾಲಯಗಳಲ್ಲಿ ಮಾತ್ರ ಇಂತಹ ಮೂರ್ತಿಗಳು ಕಂಡುಬರುತ್ತವೆ. ಮೇಣಬಸದಿಯ ಮೊದಲೇ ಗುಹಾಂತರದಲ್ಲಿ ನಟರಾಜನ ಮೂರ್ತಿಯ ಕೆಳಗೆ ನೃತ್ಯಗೈಯುತ್ತಿರುವ ಬಲಮುರಿ ಸೊಂಡಲಿನ ದ್ವಿಮುಖ ಗಣೇಶನ ಮೂರ್ತಿಯನ್ನು ಕೆತ್ತಿರುತ್ತಾರೆ. ನಟರಾಜನ ಮೂರ್ತಿಯ ಹಿಂದೆ ಒಳಗಿನ ಭಾಗದಲ್ಲಿ ದಕ್ಷಿಣಾಭಿಮುಖವಾಗಿ ಎರಡು ಬಾಹುಗಳನ್ನು ಹೊಂದಿದ ಎಡಮುರಿ ಸೊಂಡಲಿನ ಗಣೇಶ ಮೂರ್ತಿ ಕಂಡು ಬರುತ್ತದೆ. ಇಲ್ಲಿಯ ಗಣೇಶ ಮೂರ್ತಿಗಳಿಗೆ ದೊಡ್ಡೆ ಹೊಟ್ಟೆ ಇಲ್ಲ, ಕಿರೀಟವಿಲ್ಲ. ಕೂದಲಿನಿಂದ ತುರುಬು ಕಟ್ಟಿದಂತ ಶೀಲಾಮೂರ್ತಿಗಳು ಕಂಡುಬರುತ್ತವೆ.
ಎರಡನೇ ಮೇಣಬಸದಿಯ ಗುಹಾಂತರ ದೇವಾಲಯದಲ್ಲಿ ಕಂಬದ ಮೇಲೆ ಎರಡು ಬುಜದ ಬಲಮುರಿ ಗಣೇಶ ಮೂರ್ತಿ ಇದೆ. ಮೂರನೇ ಬಸದಿಯಲ್ಲಿ ಮೇಲ್ಚಾವಣಿಯಲ್ಲಿ ಬಲಮುರಿ ಸೊಂಡಲಿನ ನೃತ್ಯ ಮಾಡುತ್ತಿರುವ ಗಣೇಶ ಮೂರ್ತಿ ಇದೆ. ಅಲ್ಲದೇ ಮಹಾಕೂಟದ ಮಹಾಕೂಟೇಶ್ವರ ದೇವಾಲಯದಲ್ಲಿ ಗಣಪತಿಯ ಮೂರ್ತಿ ಇದೆ. ಇದು ಅತ್ಯಂತ ಪ್ರಾಚೀನ ಮೂರ್ತಿಗಳಲ್ಲಿ ಒಂದಾಗಿದೆ ಎಂದು ತಿಳಿದಿದೆ. ಪಟ್ಟದಕಲ್ಲಿನ ವಿರುಪಾಕ್ಷ ದೇವಾಲಯದ ಒಳಗೆ ಪ್ರಥಮದಲ್ಲಿ ಗಣೇಶ ಮೂರ್ತಿ ಇದೆ. ಹೀಗೆ ಅನೇಕ ಸಮೂಹ ಶಿಲ್ಪಕಲೆಗಳಲ್ಲಿ ಗಣೇಶ ಮೂರ್ತಿಗಳು ಕಂಡುಬರುತ್ತಿದ್ದು, ವಿಶೇಷವಾಗಿ ಗಣಪತಿಗಾಗಿಯೇ ಅನೇಕ ಗುಡಿಗಳನ್ನು ನಿರ್ಮಿಸಿದ್ದಾರೆ. ಬಾದಾಮಿಯಲ್ಲಿರುವ ಗಣೇಶ ದೇವಸ್ಥಾನವೊಂದು ಉತ್ತರ ದಿಕ್ಕಿನ ನೈಸರ್ಗಿಕ ಬಂಡೆ ಕೋಟೆಯ ಮೇಲೆ ಇದ್ದು, ಈ ಗುಡಿ ಒಳಗೆ ಪ್ರತಿಷ್ಠಾಪಿಸಿದಂತ ಗಣೇಶ ಮೂರ್ತಿಯನ್ನು ಪಲ್ಲವರ ರಾಜ ನರಸಿಂಹವರ್ಮ ಪುಕೇಶಿಯನ್ನು ಸೋಲಿಸಿ ಆ ಮೂರ್ತಿಯನ್ನೇ ವಿಜಯದ ಸಂಕೇತವೆಂದು ತೆಗೆದುಕೊಂಡು ಹೋದನಂತೆ. ಅಲ್ಲಿಂದ ಚಾಲುಕ್ಯರ ಸಾಮ್ರಾಜ್ಯ ಕ್ಷೀಣಿಸುತ್ತಾ ಬಂದು 2ನೇ ಕೀರ್ತಿ ವರ್ಮನಿಂದ ಫತನಗೊಂಡಿತು.

loading...

LEAVE A REPLY

Please enter your comment!
Please enter your name here