ಜನ ಮನ ಸೂರೆಗೊಂಡ ಕೊಳ್ಳದ ಸಿದ್ದೇಶ್ವರನ ಜಾತ್ರೆ.. ಭಕ್ತ ಜನಸಾಗರದಲ್ಲಿ ಶ್ರೀ ಸಿದ್ದೇಶ್ವರ ರಥೋತ್ಸವ

0
21
loading...

ಬೀಳಗಿ : ಪಟ್ಟಣದಿಂದ ಸುಮಾರು ಒಂದು ಕಿಲೋ ಮೀಟರ್ ದೂರದಲ್ಲಿರುವ ಬೆಟ್ಟ ಗುಡ್ಡಗಳ ನಡುವನ ಕೊಳ್ಳ ಪ್ರದೇಶದಲ್ಲಿರುವ ಸಿದ್ದೇಶ್ವರ ದೇವಸ್ಥಾನವು ತನ್ನದೇ ಆದ ಪಾವಿತ್ರ್ಯತೆಯಿಂದ ರಮಣೀಯ ತಾಣವಾಗಿ ಜನಮನವನ್ನು ಸೆಳೆಯುವ ಶ್ರಧ್ಧಾ ಕೇಂದ್ರವಾಗಿದ್ದು ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಪಟ್ಟಣದಿಂದ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಭಕ್ತರು ನಿತ್ಯ ಮುಂಜಾನೆ ಮತ್ತು ಸಾಯಂಕಾಲ ಸಮಯದಲ್ಲಿ ಸಿದ್ದೇಶ್ವರನ ದರ್ಶನ ಪಡೆಯಲು ಸಾಲುಗಟ್ಟುತ್ತಾರೆ.
ಲಕ್ಷಾಂತರ ಭಕ್ತರ ಶ್ರದ್ಧಾ ಕೇಂದ್ರವಾದ ಕೊಳ್ಳದ ಸಿದ್ದಪ್ಪನೆಂದೆ ಪ್ರತೀತಿ ಪಡೆದ ಬೀಳಗಿ ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಸಿದ್ದೇಶ್ವರ ರಥೋತ್ಸವವು ನಿನ್ನೆ ಕಡೆಯ ಶ್ರಾವಣ ಸೋಮವಾರದಂದು ಸಾಯಂಕಾಲ ಭಕ್ತ ಜನಸಾಗರದಲ್ಲಿ ವಿಜೃಂಭಣೆಯಿಂದ ಜರುಗಿತು. ಇದೇ ಸಮಯದಲ್ಲಿ ಮದ್ದು ಪಟಾಕಿಗಳನ್ನು ಸಿಡಿಸಿ ಸಂಭ್ರಮ ಪಟ್ಟರು.
ಸೋಮವಾರ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳೊಂದಿಗೆ ಸಕಲವಾದ್ಯವೈಭವಗಳೊಂದಿಗೆ ಕಳಶದ ಮೆರುವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಕ್ತರರಿಂದ ಹಾರ ತುರಾಯಿಗಳನ್ನು ಸ್ವೀಕರಿಸಿ ಸಂಜೆ ದೇವಸ್ಥಾನಕ್ಕೆ ತೆರಳಿ ಅಲ್ಲಿ ಸಿದ್ದೇಶ್ವರನ ಜಾತ್ರಾ ವೈಭವದಲ್ಲಿ ಪಾಲ್ಗೋಂಡು ನಂತರ ಕಣ್ಮನ ಸೆಳೆವ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ಎಲ್ಲರೊಳಗೊಂದಾಗು ಮಂಕುತಿಮ್ಮ

LEAVE A REPLY

Please enter your comment!
Please enter your name here