ದಿ. ವಿಷ್ಣುವರ್ಧನ ಹುಟ್ಟುಹಬ್ಬ ಆಚರಣೆ

0
21
loading...

ಇಳಕಲ್ಲ.18. ಇಲ್ಲಿಯ ಸಾಹಸಸಿಂಹ ಡಾ. ವಿಷ್ಣುವರ್ಧನ ಸಂಘದವರು ಹಾಗೂ ಅಭಿಮಾನಿಗಳು ನಗರದಲ್ಲಿ ನಟ ದಿ.ವಿಷ್ಣುವರ್ಧನರ 65ನೇ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದೊಂದಿಗೆ ಆಚರಿಸಿದರು.
ಮುದ್ದು ಮುದ್ದು ಮಕ್ಕಳಿಂದ ಗುರುವಾರ ಮಧ್ಯರಾತ್ರಿ 12ಕ್ಕೆ ಕೇಕ್ ಕತ್ತರಿಸುವ ಮೂಲಕ ಸಾಹಸಸಿಂಹ,ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ ಹುಟ್ಟುಹಬ್ಬವನ್ನು ಆಚರಿಸಿದರು. ವಿಷ್ಣುವರ್ಧನ ಕುಟುಂಬದವರಿಗೆ ಮಕ್ಕಳಿಲ್ಲ ಎಂಬ ಭಾವನೆ ಬಾರದಿರಲಿ ಎನ್ನುವ ಉದ್ದೇಶದಿಂದ ಮಕ್ಕಳಿಂದಲೇ ಕೇಕ್ ಕತ್ತರಿಸುವ ಮೂಲಕ ಅವರ ಹುಟ್ಟುಹಬ್ಬವನ್ನು ಆಚರಿಸಲಾಗಿದೆ ಎಂದು ಮಹಾಂತೇಶ ಯರಡೋಣಿ, ಸುರೇಶ ಪೂಲಪಾಟ್ಲಿ ವಿವರಿಸಿದರು.
ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವಿಷ್ಣುವರ್ಧನ ಸ್ಮಾರಕವನ್ನು ಸರಕಾರ ತೀವ್ರವೇ ನಿರ್ಮಿಸಿಕೊಡುವಲ್ಲಿ ಮುಂದಾಗಬೇಕೆಂದು ನಾಗರತ್ನ ಕಂದಕೂರ, ನೀಲಕಂಠಪ್ಪ ಪೋಚಗುಂಡಿ ಒತ್ತಾಯಿಸಿದರು.ಲಕ್ಷ್ಮೀಬಾಯಿ ಯರಡೋಣಿ, ಲಕ್ಷ್ಮೀಬಾಯಿ ರಾಯಬಾಗಿ, ಅಶೋಕ ಅಬಲಕಟ್ಟಿ, ಮಂಜುನಾಥ ಪೋಚಗುಂಡಿ, ಬಸವರಾಜ ಕಥಾಡೆ, ರಾಘವೇಂದ್ರ ಪೋಚಗುಂಡಿ ಮೊದಲಾದ ಅಭಿಮಾನಿಗಳು ಆಲಂಪೂರ ಪೇಟೆಯ ಕನಕನಗರದಲ್ಲಿ ಹುಟ್ಟುಹಬ್ಬವನ್ನು ಆಚರಿಸಿದರು. ದಿ.ವಿಷ್ಣುವರ್ಧನ ಅವರ ಆತ್ಮಕ್ಕೆ ಶಾಂತಿಗಾಗಿ ಎರಡು ನಿಮಿಷ ಮೌನ ಆಚರಿಸಲಾಯಿತು.

loading...

LEAVE A REPLY

Please enter your comment!
Please enter your name here