ನಿರ್ಮಿತಿ ಕೇಂದ್ರದ ಭ್ರಷ್ಟಾಚಾರಕ್ಕೆ ಜಿಲ್ಲಾಧಿಕಾರಿಯ ಶ್ರೀರಕ್ಷೆ ?

0
31

ಕಾಮಗಾರಿ ಹೆಸರಿನಲ್ಲಿ 30 ಲಕ್ಷ ಹಣ ಲೂಟಿ – ಕ್ರಮಕ್ಕೆ ಮುಂದಾಗದ ಡಿಸಿ

loading...

ಬೆಳಗಾವಿ:2ನಗರದ ಪೊಲೀಸ್ ವಸತಿ ಗೃಹಗಳ ದುರಸ್ಥಿ ಕಾಮಗಾರಿ ಸೇರಿದಂತೆ ವಿವಿಧ ಇಲಾಖೆಗಳ ದುರಸ್ಥಿ ಕಾಮಗಾರಿಗಳಿಗೆ ನಿರ್ಮಿತಿ ಕೇಂದ್ರದಿಂದ ಲಕ್ಷ ಲಕ್ಷ ರೂ.ಗಳಂತೆ ಭ್ರಷ್ಟಾಚಾರ ನಡೆದಿರುವುದು ಕಂಡುಬಂದರೂ, ನಿರ್ಮಿತಿ ಕೇಂದ್ರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಎನ್. ಜಯರಾಮ ಅವರು ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಕೆ.ಎಸ್ ಸುರೇಶ ಅವರಿಗೆ ಶ್ರೀ ರಕ್ಷೆಯಾಗಿ ನಿಂತಿರುವುದು ಮಾಹಿತಿ ಹಕ್ಕಿನಡಿಯಲ್ಲಿ ಬಹಿರಂಗಗೊಂಡಿದೆ. ದೇಶದಲ್ಲಿ ಭ್ರಷ್ಟಾಚಾರದ ನಿರ್ಮೂಲನೆಗೆ ಸಮರಸಾರುತ್ತಿದ್ದರೇ, ಇತ್ತ ಬೆಳಗಾವಿಯ ನಿರ್ಮಿತಿ ಕೇಂದ್ರದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ವಿವಿಧ ಇಲಾಖೆಗಳ ದುರಸ್ಥಿ ಕಾಮಗಾರಿಗಳ ಹಣವನ್ನು ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಕೆ.ಎಸ್. ಸುರೇಶ ಅವರು ತಮ್ಮ ದುರಾಡಳಿತದಿಂದ ಹೆಚ್ಚಿನ ಹಣವನ್ನು ಲೂಟಿಮಾಡಿ ಸರಕಾರಕ್ಕೆ ದ್ರೋಹಮಾಡಿದ್ದಾರೆ. ಜಿಲ್ಲಾಧಿಕಾರಿಗಳ ಗಮನಕ್ಕೆ ಹಲವು ಸಂಘಟನೆಗಳು ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿ ಐದಾರು ತಿಂಗಳಾದರೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ನಿರ್ಮಿತಿ ಕೇಂದ್ರದಲ್ಲಿ 2011-12 ರಿಂದ 2014 – 15ರ ವರೆಗೆ ಆರ್ಥಿಕ ಸಾಲಿನ ಕಾಮಗಾರಿಗಳ ಬಗ್ಗೆ ಕುಲಂಕುಶವಾಗಿ ಪರಿಶೀಲಿಸಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಹಾಯಕ ನಿಯಂತ್ರಕ, ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ ಹಾಗೂ ಜಿಲ್ಲಾ ಪಂಚಾಯತನ ಲೆಕ್ಕಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿ ಸಮಗ್ರ ಮಾಹಿತಿ ನೀಡುವಂತೆ ಸೂಚನೆ ನೀಡಿದರು. ಅದರಂತೆಯೇ ಈ ತಂಡದಿಂದ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಕೆ.ಎಸ್. ಸುರೇಶ ಅವರಿಂದ ಸುಮಾರು 30 ಲಕ್ಷ ಕ್ಕೂ ಹೆಚ್ಚು ಭ್ರಷ್ಟಾಚಾರ ನಡೆಸಿರುವುದನ್ನು ಜಿಲ್ಲಾಧಿಕಾರಿಗಳಿಗೆ 09-3-2015ಕ್ಕೆ ವರದಿ ಸಲ್ಲಿಸಿದರು.  ಜಿಲ್ಲಾಧಿಕಾರಿಗಳು 4-4-2015ರಲ್ಲಿ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕರಿಗೆ ಇದಕ್ಕೆ ಉತ್ತರ ನೀಡುವಂತೆ ಪತ್ರ ಬರೆಯುತ್ತಾರೆ. ಇದಕ್ಕೆ 13-4-2015ರಲ್ಲಿ ಉತ್ತರಿಸಿದ ವ್ಯವಸ್ಥಾಪಕ ಸುರೇಶ ತಾವು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದು ಪುನಃ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟನೆ ನೀಡುತ್ತಾರೆ. ನಿರ್ಮಿತಿ ಕೇಂದ್ರದ ವ್ಯವಸ್ಥಾಪಕರಿಗೆ ಭ್ರಷ್ಟಾಚಾರ ನಡೆಸಿರುವ ಬಗ್ಗೆ ಮಾಹಿತಿ ಕೇಳುವ ಜಿಲ್ಲಾಧಿಕಾರಿಗಳು ತನಿಖಾ ವರದಿಗಾಗಿ ಸಮಿತಿಯನ್ನು ರಚಸಿ ಸಮಗ್ರ ತನಿಖೆ ನಡೆಸುವ ಅವಶ್ಯಕತೆ ಇತ್ತಾ ಎಂಬ ಪ್ರಶ್ನೆ ಮೂಡುತ್ತಿದೆ. ತನಿಖಾ ಸಮಿತಿ ರಚಿಸಿ ನಂತರ ಸಮಗ್ರ ಮಾಹಿತಿ ನೀಡಿದ ನಂತರ ಜಿಲ್ಲಾಧಿಕಾರಿಗಳು ತನಿಖಾ ವರದಿಯನ್ನು ಆದರಿಸಿ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕರ ಮೇಲೆ ಕ್ರಮಕೈಗೊಳ್ಳುತ್ತಿದ್ದರು. ಕ್ರಮ ಕೈಗೊಳ್ಳುವ ಬದಲು ಪತ್ರ ಬರೆಯುವುದನ್ನು ನೋಡಿದರೇ ಜಿಲ್ಲಾಧಿಕಾರಿಗಳು ಇದರಲ್ಲಿ ಶಾಮಿಲಾಗಿದ್ದಾರೆಯೋ ಎಂಬ ಅನುಮಾನ ಕಾಡುತ್ತಿದೆ. ಕಾಮಗಾರಿ ಪ್ರಾರಂಭವಾಗುವ ಮುನ್ನವೆ ಬಿಲ ಬರೆಯದೆ ಹಾಗೂ ಎಮ್.ಬಿ.ಬರೆಯದೆ ಅನುದಾನದ ಖರ್ಚಾಗಿರುವ ಬಗ್ಗೆ ಕಾಮಗಾರಿಗೆ ಬಿಡುಗಡೆಯಾದ ಮೊದಲ ಕಂತಿನ 45 ಲಕ್ಷಗಳ ರೂ, ಅನುದಾನಕ್ಕೆ ಹಣ ಬಳಕೆಯ ಪ್ರಮಾಣ ಸಲ್ಲಿಸಿದ್ದು ಅಸಮಂಜಸವಾಗಿದೆ. ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಕೆ.ಎಸ್.ಸುರೇಶ ಅವರು 28/11/2014 ರಂದು ಕಚೇರಿಯ ವಿಷಯ ಕಂಡಿಕೆ (5)ರಲ್ಲಿ  ಅನುಮೋದಿಸಿದಂತೆ 4 ಲಕ್ಷ 50 ಸಾವಿರಗಳಿಗೆ ಚೆಕ್ ಬರೆಯಲು ತಿಳಿಸಿದ್ದು, ಯೋಜನಾ ಅಭಿಯಂತರರ ಕಡತ ಮಂಡಿಸದೆ ಯಾವ ಆದಾರದ ಮೇಲೆ ಚಕ್ ಡ್ರಾ ಮಾಡಲು ಅನುಮೋದನೆ ನೀಡಿದ್ದಾರೆ ಎಂಬ ಪ್ರಶ್ನೆ ಉದ್ಭವವಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಕಚೇರಿಯ ಟಿಪ್ಪಣಿಯನ್ನು ತನಿಖಾ ವೇಳೆ ಹರಿದುಹಾಕಿ ಹೊಸ ಕಚೇರಿಯ ಟಿಪ್ಪಣಿಗಳನ್ನು ಬರೆದಿರುವ ದಾಖಲೆಗಳನ್ನು ವರದಿಯಲ್ಲಿ ನೀಡಲಾಗಿದೆ. ಯಾವುದೇ ಕಾಮಗಾರಿಗಳನ್ನು 9 ತಿಂಗಳಲ್ಲಿ ಪೂರ್ಣಗೊಳಿಸಿ ಇಲಾಖೆಗೆ ವರದಿ ಸಲ್ಲಿಸಲು ಸೂಚಿಸಿದ್ದರೂ, ಸುಮಾರು ನಾಲ್ಕೈದು ತಿಂಗಳಾದರು ಕಾಮಗಾರಿಗಳು ಪೂರ್ಣವಾಗಿಲ್ಲ. ಕೆಲಸ ಪ್ರಾರಂಭವಾಗಿರುವುದು ಯಾವುದೇ ದಾಖಲಾತಿಗಳ ಕಡತದಲ್ಲಿ ಲಭ್ಯವಿಲ್ಲದೆ ಕೇವಲ ಸದರಿ ಕಾಮಗಾರಿಯ ಹೆಸರಿನಲ್ಲಿ ಖರ್ಚು ಭರಿಸಿದ್ದಾರೆ. ಜಿಲ್ಲೆಯಲ್ಲಿ ಉತ್ತಮ ಆಡಳಿತ ನೀಡುತ್ತಿರುವ ಜಿಲ್ಲಾಧಿಕಾರಿ ಎನ್. ಜಯರಾಮ ಅವರು ನಿರ್ಮಿತಿ ಕೇಂದ್ರದಲ್ಲಿ ಅವರ ಹಿಂದೆ ಇಷ್ಟೋಂದು ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದ್ದರೂ ಕಂಡು ಕಾಣದ ಹಾಗೆ ಸುಮ್ಮನೆ ಕುಳಿತಿರುವುದು ಸಾರ್ವಜನಿಕರಿಗೆ ಹಲವು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ. ಇಂಥ ಭ್ರಷ್ಟರನ್ನು ಜಿಲ್ಲಾಧಿಕಾರಿಗಳು ಬೆಳೆಸುತ್ತಿದ್ದಾರೆಯೋ, ಅಥವಾ ಜಿಲ್ಲಾಧಿಕಾರಿಗಳು ಇವರೊಂದಿಗೆ ಸೇರಿಕೊಂಡಿದ್ದಾರೆ ಎಂಬ ಅನುಮಾನಗಳು ಸಾರ್ವಜನಿಕರಲ್ಲಿ ಕಾಡುತ್ತಿವೆ. ಇನ್ನಾದರು ಜಿಲ್ಲಾಧಿಕಾರಿಗಳು ಇಂಥ ಭ್ರಷ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತಾರೋ ಕಾದುನೋಡಬೇಕಷ್ಟೆ.

ಜಿಲ್ಲಾಧಿಕಾರಿಗಳು, ನಿರ್ಮಿತಿ ಕೇಂದ್ರದ ಅಧ್ಯಕ್ಷರು ಮತ್ತು ಕೆಂದ್ರದ ಯೋಜನಾ ವ್ಯವಸ್ಥಾಪಕರ ಹೆಸರಿನಲ್ಲಿ ನಗರದ ಟಿಳಕವಾಡಿಯಲ್ಲಿರುವ ಆಯ್ಡಿಬಿಆಯ್ ಬ್ಯಾಂಕ್ ಶಾಖೆಯಲ್ಲಿ 0555104000065098 ನಂಬರಿನ ಖಾತೆಯಿದ್ದು. ಈ ಖಾತೆಯಿಂದ ಜಿಲ್ಲಾಧಿಕಾರಿಗಳ ಹಾಗೂ ವ್ಯವಸ್ಥಾಪಕರ ಸಹಿಯುಳ್ಳ ಚೆಕ್ ನಂಬರ 099202 ದಿನಾಂಕ 19-11-2014 ರಂದು ನಂದಿ ಸ್ಟಿಲ್ ಹೆಸರಿನಲ್ಲಿ 11,854 ರೂ ಚೆಕ್ ವಿತರಣೆಯಾದರೆ. ಅದೇ ಶಾಖೆಯಲ್ಲಿ ನಿರ್ಮಿತ ಕೇಂದ್ರದ ವ್ಯವಸ್ಥಾಪಕರ ಹೆಸರಿನಲ್ಲಿರುವ 0555104000043458 ನಂಬರಿನ ಮತ್ತೊಂದು ಖಾತೆಯಿದೆ. ಈ ಖಾತೆಯಿಂದ ವ್ಯವಸ್ಥಾಪಕರ ಸಹಿಯುಳ್ಳ ಚೆಕ್ ನಂಬರ 111891 ದಿನಾಂಕ 28-11-2014 ರಂದು ಅನಾಮೇಧಯರ ಹೆಸರಿನಲ್ಲಿ 4.45.500 ವಿತರಣೆಯಾಗಿದೆ. ಜಿಲ್ಲಾಧಿಕಾರಿಗಳು, ನಿರ್ಮಿತಿ ಕೇಂದ್ರದ ಅಧ್ಯಕ್ಷರು ಮತ್ತು ಕೆಂದ್ರದ ಯೋಜನಾ ವ್ಯವಸ್ಥಾಪಕರ ಹೆಸರಿನಲ್ಲಿರುವ ಖಾತೆಯಿಂದ ಚೆಕ್ ನೀಡಬೇಕಾಗಿದ್ದ ನಿರ್ಮಿತ ಕೇಂದ್ರದ ವ್ಯವಸ್ಥಾಪಕರು ಅದನ್ನು ಗಾಳಿಗೆ ತೂರಿ ತಮ್ಮ ಹೆಸರಿನಲ್ಲಿರುವ ಖಾತೆಯಿಂದ ಚೆಕ್ ಯಾಕೆ ನೀಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಇದು ಅಷ್ಟೆ ಅಲ್ಲದೆ ವ್ಯವಸ್ಥಾಪಕರ ಹೆಸರಿನಲ್ಲಿರುವ ಖಾತೆಯಿಂದ ಅದೇಷ್ಟು ಅನಾಮೆಧ ವ್ಯಕ್ತಿಗಳ ಹೆಸರಿನಲ್ಲಿ ಚೆಕ್ಗಳು ವಿತರಣೆಯಾಗಿವೆ. ಇದರಿಂದ್ದ ಸ್ಪಷ್ಟವಾಗುತ್ತದೆ ನಿರ್ಮಿತ ಕೇಂದ್ರದಲ್ಲಿ ನಡೆಯುತ್ತಿದೆ ಗೋಲ್ ಮಾಲ್ ಎಂದು. ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಕೆ.ಎಸ್ ಸುರೇಶ ಅವರು ನಡೆಸಿರುವ ಗೋಲ್ ಮಾಲ್ಗಳು ಕಣ್ಣಾರೆ ಕಂಡರು ಸುಮ್ಮನ್ನಿರುವ ಜಿಲ್ಲಾಧಿಕಾರಿಗಳು ಅವರಿಗೆ ಶ್ರೀ ರಕ್ಷೆಯಾಗಿ ನಿಂತಿರುವುದು ವ್ಯವಸ್ಥಾಪಕರಿಗೆ ಇನಷ್ಟು ಸುಲಿಗೆ ಮಾಡಲ್ಲಿಕ್ಕೆ ಅನುಕೂಲವಾಗುತ್ತಿದೆ. ವ್ಯವಸ್ಥಾಪಕರು ಮಾಡಿದ್ದ ಆಟವೇ ಅವರು ನೀಡುತ್ತಿರುವ ಅನಾಮೆಧ ಚೆಕ್ಗಳು ಸಾಕ್ಷಿಯಾಗಿವೆ.
ಜಿಲ್ಲಾಧಿಕಾರಿಗಳು, ನಿರ್ಮಿತಿ ಕೇಂದ್ರದ ಅಧ್ಯಕ್ಷರು ಮತ್ತು ಕೆಂದ್ರದ ಯೋಜನಾ ವ್ಯವಸ್ಥಾಪಕರ ಹೆಸರಿನಲ್ಲಿ ನಗರದ ಟಿಳಕವಾಡಿಯಲ್ಲಿರುವ ಆಯ್ಡಿಬಿಆಯ್ ಬ್ಯಾಂಕ್ ಶಾಖೆಯಲ್ಲಿ 0555104000065098 ನಂಬರಿನ ಖಾತೆಯಿದ್ದು. ಈ ಖಾತೆಯಿಂದ ಜಿಲ್ಲಾಧಿಕಾರಿಗಳ ಹಾಗೂ ವ್ಯವಸ್ಥಾಪಕರ ಸಹಿಯುಳ್ಳ ಚೆಕ್ ನಂಬರ 099202 ದಿನಾಂಕ 19-11-2014 ರಂದು ನಂದಿ ಸ್ಟಿಲ್ ಹೆಸರಿನಲ್ಲಿ 11,854 ರೂ ಚೆಕ್ ವಿತರಣೆಯಾದರೆ. ಅದೇ ಶಾಖೆಯಲ್ಲಿ ನಿರ್ಮಿತ ಕೇಂದ್ರದ ವ್ಯವಸ್ಥಾಪಕರ ಹೆಸರಿನಲ್ಲಿರುವ 0555104000043458 ನಂಬರಿನ ಮತ್ತೊಂದು ಖಾತೆಯಿದೆ. ಈ ಖಾತೆಯಿಂದ ವ್ಯವಸ್ಥಾಪಕರ ಸಹಿಯುಳ್ಳ ಚೆಕ್ ನಂಬರ 111891 ದಿನಾಂಕ 28-11-2014 ರಂದು ಅನಾಮೇಧಯರ ಹೆಸರಿನಲ್ಲಿ 4.45.500 ವಿತರಣೆಯಾಗಿದೆ.
ಜಿಲ್ಲಾಧಿಕಾರಿಗಳು, ನಿರ್ಮಿತಿ ಕೇಂದ್ರದ ಅಧ್ಯಕ್ಷರು ಮತ್ತು ಕೆಂದ್ರದ ಯೋಜನಾ ವ್ಯವಸ್ಥಾಪಕರ ಹೆಸರಿನಲ್ಲಿರುವ ಖಾತೆಯಿಂದ ಚೆಕ್ ನೀಡಬೇಕಾಗಿದ್ದ ನಿರ್ಮಿತ ಕೇಂದ್ರದ ವ್ಯವಸ್ಥಾಪಕರು ಅದನ್ನು ಗಾಳಿಗೆ ತೂರಿ ತಮ್ಮ ಹೆಸರಿನಲ್ಲಿರುವ ಖಾತೆಯಿಂದ ಚೆಕ್ ಯಾಕೆ ನೀಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ.
ಇದು ಅಷ್ಟೆ ಅಲ್ಲದೆ ವ್ಯವಸ್ಥಾಪಕರ ಹೆಸರಿನಲ್ಲಿರುವ ಖಾತೆಯಿಂದ ಅದೇಷ್ಟು ಅನಾಮೆಧ ವ್ಯಕ್ತಿಗಳ ಹೆಸರಿನಲ್ಲಿ ಚೆಕ್ಗಳು ವಿತರಣೆಯಾಗಿವೆ. ಇದರಿಂದ್ದ ಸ್ಪಷ್ಟವಾಗುತ್ತದೆ ನಿರ್ಮಿತ ಕೇಂದ್ರದಲ್ಲಿ ನಡೆಯುತ್ತಿದೆ ಗೋಲ್ ಮಾಲ್ ಎಂದು.
ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಕೆ.ಎಸ್ ಸುರೇಶ ಅವರು ನಡೆಸಿರುವ ಗೋಲ್ ಮಾಲ್ಗಳು ಕಣ್ಣಾರೆ ಕಂಡರು ಸುಮ್ಮನ್ನಿರುವ ಜಿಲ್ಲಾಧಿಕಾರಿಗಳು ಅವರಿಗೆ ಶ್ರೀ ರಕ್ಷೆಯಾಗಿ ನಿಂತಿರುವುದು ವ್ಯವಸ್ಥಾಪಕರಿಗೆ ಇನಷ್ಟು ಸುಲಿಗೆ ಮಾಡಲ್ಲಿಕ್ಕೆ ಅನುಕೂಲವಾಗುತ್ತಿದೆ. ವ್ಯವಸ್ಥಾಪಕರು ಮಾಡಿದ್ದ ಆಟವೇ ಅವರು ನೀಡುತ್ತಿರುವ ಅನಾಮೆಧ ಚೆಕ್ಗಳು ಸಾಕ್ಷಿಯಾಗಿವೆ.
jairam copy
ದೇಶದಲ್ಲಿ ಭ್ರಷ್ಟಾಚಾರದ ನಿರ್ಮೂಲನೆಗೆ ಸಮರಸಾರುತ್ತಿದ್ದರೇ, ಇತ್ತ ಬೆಳಗಾವಿಯ ನಿರ್ಮಿತಿ ಕೇಂದ್ರದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ವಿವಿಧ ಇಲಾಖೆಗಳ ದುರಸ್ಥಿ ಕಾಮಗಾರಿಗಳ ಹಣವನ್ನು ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಕೆ.ಎಸ್. ಸುರೇಶ ಅವರು ತಮ್ಮ ದುರಾಡಳಿತದಿಂದ ಹೆಚ್ಚಿನ ಹಣವನ್ನು ಲೂಟಿಮಾಡಿ ಸರಕಾರಕ್ಕೆ ದ್ರೋಹಮಾಡಿದ್ದಾರೆ. ಜಿಲ್ಲಾಧಿಕಾರಿಗಳ ಗಮನಕ್ಕೆ ಹಲವು ಸಂಘಟನೆಗಳು ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿ ಐದಾರು ತಿಂಗಳಾದರೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

 

ಕಾಮಗಾರಿಗೆ ನಿವೇಶನ ನಿಗದಿಯಾಗಿ ಕಾಮಗಾರಿ ಪ್ರಾರಂಭವಾಗುವ ಮುನ್ನವೆ ಮಾನ್ಯ ಅಧ್ಯಕ್ಷರ ಅನುಮೋಧನೆ ಇಲ್ಲದೆ ಐಡಿಬಿಐ ಬ್ಯಾಂಕ್ ಖಾತೆ ಸಂಖ್ಯೆ 43459 ನಿಂದ ಚಕ್ ಸಂಖ್ಯೆ 111890 ದಿ:28/11/2014 ರಂದು 4 ಲಕ್ಷ 45 ಸಾವಿರ 500 ರೂ. ಗಳನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸದೆ ಡ್ರಾ ಮಾಡಲಾಗಿದೆ. ಸದರಿ ಕಾಮಗಾರಿಯು ಪ್ರಾರಂಭವಾಗದೆ ಇಷ್ಟೊಂದು ದೊಡ್ಡ ಮೊತ್ತವನ್ನು ಯಾವ ಉದ್ದೇಶಕ್ಕಾಗಿ ಡ್ರಾ ಮಾಡಲಾಯಿತು ಎಂಬುದು ಮಾತ್ರ ನಿಗೂಢವಾಗಿದೆ.
ಕಾಮಗಾರಿಗೆ ನಿವೇಶನ ನಿಗದಿಯಾಗಿ ಕಾಮಗಾರಿ ಪ್ರಾರಂಭವಾಗುವ ಮುನ್ನವೆ ಮಾನ್ಯ ಅಧ್ಯಕ್ಷರ ಅನುಮೋಧನೆ ಇಲ್ಲದೆ ಐಡಿಬಿಐ ಬ್ಯಾಂಕ್ ಖಾತೆ ಸಂಖ್ಯೆ 43459 ನಿಂದ ಚಕ್ ಸಂಖ್ಯೆ 111890 ದಿ:28/11/2014 ರಂದು 4 ಲಕ್ಷ 45 ಸಾವಿರ 500 ರೂ. ಗಳನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸದೆ ಡ್ರಾ ಮಾಡಲಾಗಿದೆ. ಸದರಿ ಕಾಮಗಾರಿಯು ಪ್ರಾರಂಭವಾಗದೆ ಇಷ್ಟೊಂದು ದೊಡ್ಡ ಮೊತ್ತವನ್ನು ಯಾವ ಉದ್ದೇಶಕ್ಕಾಗಿ ಡ್ರಾ ಮಾಡಲಾಯಿತು ಎಂಬುದು ಮಾತ್ರ ನಿಗೂಢವಾಗಿದೆ.

ತನಿಖಾ ವರದಿಯಲ್ಲಿ ಏನಿದೆ:?

ವರದಿಯಲ್ಲಿಯ ಲೋಪದೋಷಗಳು ಹಾಗೂ ಭ್ರಷ್ಟಾಚಾರ: ಬೆಳಗಾವಿಯ ಪೊಲೀಸ್ ವಸತಿ ಗೃಹಗಳ ರಿಪೇರಿ ಕಾಮಗಾರಿಯ ಅಂತಿಮ ಬಿಲ್ಲಿನ ಮೊತ್ತವನ್ನು ಪಾವತಿಸಿದ ನಂತರ ಮತ್ತೊಮ್ಮೆ ಹೆಚ್ಚುವರಿಯಾಗಿ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಕೆ.ಎಸ್. ಸುರೇಶ 10 ಲಕ್ಷ 17 ಸಾವಿರ 290 ರೂ. ಹಣ ಲೂಟಿ ಮಾಡಿರುವುದಾಗಿ ತಿಳಿಸಿದೆ.

2012-13ನೇ ಸಾಲಿನಲ್ಲಿ ಪೊಲೀಸ್ ವಸತಿ ಗೃಹಗಳ ದುರಸ್ಥಿ ಕಾಮಗಾರಿಗೆ ಒಟ್ಟು 126.35 ಲಕ್ಷ ರೂ. ಅನುಮೋದನೆಯಾಗಿತ್ತು, ಅದರಂತೆ ಅನುದಾನದ ಮೊತ್ತವು ನಿರ್ಮಿತಿ ಕೇಂದ್ರಕ್ಕೆ ಬಿಡುಗಡೆಯಾಗಿತ್ತು. ಕಾಮಗಾರಿ ಮುಗಿದು ಹಸ್ತಾಂತರಗೊಂಡು ವರ್ಷದ ನಂತರ 10 ಲಕ್ಷ 17 ಸಾವಿರ ರೂ.ಗಳನ್ನು ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ವರದಿಯಲ್ಲಿ ತಿಳಿಸಲಾಗಿದೆ.

ಚಿಕ್ಕೋಡಿ ತಾಲೂಕಿನ ಶಮನವಾಡಿ, ಇಂಗಳಿ, ಚಿಕ್ಕಲವಾಡ ಗ್ರಾಮಗಳಲ್ಲಿನ ಪರಿಶಿಷ್ಟ ಜಾತಿ ಜನರ ಕಾಲೋನಿಗಳಲ್ಲಿ ಪೇವರ್ಸ್ ಅಳವಡಿಕೆಗೆ ಜಿಲ್ಲಾಧಿಕಾರಿಗಳು ಆಡಳಿತಾತ್ಮಕ ಅನುಮೋದನೆ ನೀಡಿದರು. ಇದರಲ್ಲಿ ಒಟ್ಟು 3 ಲಕ್ಷ 86 ಸಾವಿರ 500 ರೂ,ಗಳ ವರೆಗೆ ಭ್ರಷ್ಟಾರವಾಗಿದೆ.

 ಜಿಮ್ ಮಟಿರಿಯಲ್ ಪೂರೈಸಿದ್ದಕ್ಕೆ ವಿನಾಕಾರಣ ಹೆಚ್ಚುವರಿಯಾಗಿ ಕೂಲಿ ಪಾವತಿ ಮಾಡಿರುವುದು ಒಟ್ಟು 2 ಲಕ್ಷ 38 ಸಾವಿರ ರೂ,ಗಳು. ಗೋಕಾಕ ತಾಲೂಕಿನ ಚಿಕ್ಕನಂದಿ ಗ್ರಾಮದಲ್ಲಿ ಸಾಂಸ್ಕøತಿಕ ಭವನ ನಿರ್ಮಾಣ ಕಾಮಗಾರಿಯ ಎಲ್ಲ ಬಿಲ್ ಪಾವತಿಸಿದ ನಂತರವೂ ಪುನಃ ಹೆಚ್ಚುವರಿಯಾಗಿ ಹಣ ಡ್ರಾ ಮಾಡಿಕೊಂಡಿರುವುದು 2 ಲಕ್ಷ 2 ಸಾವಿರ ರೂ.ಗಳು ಎಂಬುದು ತನಿಖಾ ವರದಿ ಜಿಲ್ಲಾಧಿಕಾರಿಗಳಿಗೆ ನೀಡಿತ್ತು.

ಕಾಮಗಾರಿಗೆ ನಿವೇಶನ ನಿಗದಿಯಾಗಿ ಕಾಮಗಾರಿ ಪ್ರಾರಂಭವಾಗುವ ಮುನ್ನವೆ ಮಾನ್ಯ ಅಧ್ಯಕ್ಷರ ಅನುಮೋಧನೆ ಇಲ್ಲದೆ ಐಡಿಬಿಐ ಬ್ಯಾಂಕ್ ಖಾತೆ ಸಂಖ್ಯೆ 43459 ನಿಂದ ಚಕ್ ಸಂಖ್ಯೆ 111890 ದಿ:28/11/2014 ರಂದು 4 ಲಕ್ಷ 45 ಸಾವಿರ 500 ರೂ. ಗಳನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸದೆ ಡ್ರಾ ಮಾಡಲಾಗಿದೆ. ಸದರಿ ಕಾಮಗಾರಿಯು ಪ್ರಾರಂಭವಾಗದೆ ಇಷ್ಟೊಂದು ದೊಡ್ಡ ಮೊತ್ತವನ್ನು ಯಾವ ಉದ್ದೇಶಕ್ಕಾಗಿ ಡ್ರಾ ಮಾಡಲಾಯಿತು ಎಂಬುದು ಮಾತ್ರ ನಿಗೂಢವಾಗಿದೆ.

ಗೋಕಾಕ ತಾಲೂಕಿನ ಕೈತನಾಳ ಗ್ರಾಮದ ಬ್ರಹ್ಮಶ್ರೀ ವೀರಭದ್ರಸ್ವಾಮಿ ಬ್ರಹ್ಮನಮಠ ಹತ್ತಿರ ಯಾತ್ರಿ ನಿವಾಸ ನಿರ್ಮಾಣಕ್ಕೆ ನಿರ್ದೇಶಕರು ಪ್ರವಾಸೋಧ್ಯಮ ಇಲಾಖೆ ಇವರ ಅಧಿಕೃತ ಜ್ಞಾನಪನ ಸಂಖ್ಯೆ: ಪ್ರ ಇ/ಯೋ-2/408/2012-13/1898 ದಿನಾಂಕ 12-09-2014ರಲ್ಲಿನ ಷರತ್ತಿಗೊಳಪಟ್ಟು ಯೋಜನಾ ವ್ಯವಸ್ಥಾಪಕರು ನಿರ್ಮಿತಿ ಕೇಂದ್ರ, ಬೆಳಗಾವಿ ಇವರ ಹೆಸರಿನಲ್ಲಿ ಚೆಕ್ ನಂ 363889 ದಿ:14/10/2014 ರಂದು 45 ಲಕ್ಷ ರೂ.ಗಳನ್ನು ಯಾತ್ರಿ ನಿವಾಸ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲು ಮೊದಲನೇ ಕಂತಿನ ಅನುದಾನ ಬಿಡುಗಡೆ ಮಾಡಿದ್ದರು. ಈ ಹಣವನ್ನು ದಿನಾಂಕ 27/10/2014ರಂದು ಯೋಜನಾ ವ್ಯವಸ್ಥಾಪಕರು ಪಡೆದುಕೊಂಡಿದ್ದಾರೆ. ಇದರ ಅಂದಾಜು ಪ್ರಕ್ರಿಯೆ ಮೊತ್ತ 1 ಕೋಟಿ ರೂ.ಗಳಿಗೆ ಪ್ರವಾಸೋಧ್ಯಮ ಇಲಾಖೆ ಆಡಳಿತಾತ್ಮಕ ಮತ್ತು ತಾಂತ್ರಿಕ ಮಂಜೂರಾತಿಯನ್ನು ನೀಡಿತ್ತು.

ಅದರಂತೆ ಸಂಸತ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ 7 ಕಾಮಗಾರಿಗಳಲ್ಲಿ ಎಲ್ಲ ಬಿಲ್ ಪಾವತಿಸಿದ ನಂತರ ಹೆಚ್ಚುವರಿಯಾಗಿ ಹಣ ಡ್ರಾ ಮಾಡಿರುವುದು 1 ಲಕ್ಷ 40 ಸಾವಿರ ರೂ.ಗಳು, ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ಪಟ್ಟಣದ ರುದ್ರಭೂಮಿ ಅಭಿವೃದ್ಧಿ ಕಾಮಗಾರಿಯ ಎಲ್ಲ ಬಿಲ್‍ಗಳನ್ನು ಪಾವತಿಸಿದ ನಂತರ 1 ಲಕ್ಷ 50 ಸಾವಿರ 880 ರೂ,ಗಳು ಹಾಗೂ ನಿವೇಶನ ನಿಗದಿಯಾಗದೇ ಕಾಮಗಾರಿಗಳಿಗೆ ಖರ್ಚು ಭರಿಸಿದ್ದು, 8 ಲಕ್ಷ 50 ಸಾವಿರ ರೂ.ಗಳು ಹೀಗೆ ವಿವಿಧ ಕಾಮಗಾರಿಗಳ ಹೆಸರಿನಲ್ಲಿ ಲಕ್ಷ ಲಕ್ಷದಂತೆ ಲೂಟಿಮಾಡಿರುವುದು ಬೆಳಕಿಕೆ ಬಂದರೂ ಕೂಡಾ ಜಿಲ್ಲಾಧಿಕಾರಿಗಳು ಯೋಜನಾ ವ್ಯವಸ್ಥಾಪಕರುಗಳ ಮೇಲೆ ಕ್ರಮ ಕೈಗೊಳ್ಳದೆ ಇರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರು ಅಧಿಕೃತವಾಗಿ ಜ್ಞಾಪನ ಸಂಖ್ಯೆ ಕಾರ್ನಿಕ:126 ಯೋಜನೆ 58 2010/3543 ದಿ:30/07/2012ರ ಪ್ರಕಾರ 25 ಲಕ್ಷ ರೂ.ಗಳ ಮೀರಿದ ಕಾಮಗಾರಿಗಳ ಅಂದಾಜು ಪತ್ರಿಕೆಗೆ ತಾಂತ್ರಿಕ ಮಂಜೂರಾತಿಯನ್ನು ಕಾರ್ನಿಕ ಕಚೇರಿ ಬೆಂಗಳೂರು ಇವರಿಂದ ಪಡೆಯಬೇಕು. ಆದರೆ ಯೋಜನಾ ವ್ಯವಸ್ಥಾಪಕರು ತಾಂತ್ರಿಕ ಪರಿಶೀಲನೆ ಮತ್ತು ತಾಂತ್ರಿಕ ಮಂಜೂರಾತಿಗಾಗಿ ಅಂದಾಜು ಪಟ್ಟಿಯನ್ನು ಕಳುಹಿಸದೆ ಇರುವುದು ಕಾನೂನು ನಿಯಮ ಬಾಹೀರವಾಗಿದೆ. ಅಲ್ಲದೆ ಈ ವಿಷಯವನ್ನು ನಿರ್ಮಿತಿ ಕೇಂದ್ರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರದೆ ಇರುವುದು ಕಡತ ಪರಿಶೀಲನೆಯಿಂದ ಕಂಡುಬಂದಿದೆ.

 ಕಾಮಗಾರಿಯ ಹೆಸರಿನಲ್ಲಿ ಚಕ್ ಡ್ರಾ ಮಾಡಿದ್ದು, ಕೂಲಿ ಪಾವತಿ ಉದ್ದೇಶಕ್ಕಾಗಿ ಎಂದು ದಾಖಲಾತಿಗಳಲ್ಲಿ ಮತ್ತು ಕಾಮಗಾರಿಯ ಟ್ಯಾಲಿ ಲೇಡ್ಜರ್‍ನಲ್ಲಿ ತಿಳಿಸಲಾಗಿತ್ತು. ಆದರೆ ಕಾಮಗಾರಿ ಪ್ರಾರಂಭವಾಗುವ ಮುನ್ನವೆ ಬಿಲ್ ಬರೆಯದೆ ಹಾಗೂ ಎಮ್‍ಬಿಯನ್ನು ಬರೆಯದೆ ತಮ್ಮ ವೈಯಕ್ತಿಕವಾಗಿ ಕೆ.ಎಸ್.ಸುರೇಶ ಯೋಜನಾ ವ್ಯವಸ್ಥಾಪಕ ನಿರ್ದೇಶಕ ಚೆಕ್ ಡ್ರಾ ಮಾಡಿಕೊಂಡಿದ್ದಾರೆ ಎಂಬ ತನಿಖಾ ವರದಿಯಲ್ಲಿ ಸ್ಪಷ್ಟಪಡಿಸಿದೆ.

loading...

LEAVE A REPLY

Please enter your comment!
Please enter your name here