ಬಸವಣ್ಣ ದೇವರ ಗುಡಿಗೆ ನೂತನವಾಗಿ ನಿರ್ಮಿಸಿದ ಮಹಾದ್ವಾರದ ಉದ್ಘಾಟನೆ

0
22
loading...

 

ಗೋಕಾಕ: ಹಿರೇನಂದಿ ಗ್ರಾಮದ ಪುರಾತನ ಶ್ರೀ ಬಸವಣ್ಣ ದೇವರ ಗುಡಿಗೆ ನೂತನವಾಗಿ ನಿರ್ಮಿಸಿದ ಮಹಾದ್ವಾರದ ಉದ್ಘಾಟನೆ ಹಾಗೂ ಶ್ರಾವಣ ಮಾಸದ ನಿಮಿತ್ಯ ಹಮ್ಮಿಕೊಂಡಿದ್ದ ಶ್ರೀ ಬಸವ ಚಿಂತನಗೋಷ್ಠಿಯ ಸಮಾರೋಪ ಸಮಾರಂಭ ವಿಜೃಂಭನೆಯಿಂದ ನಡೆಯಿತು.
ಪೂಜ್ಯ ಶ್ರೀ ಗುರುಸಿದ್ದೇಶ್ವರ ಸ್ವಾಮಿಗಳು ಅಡವಿಸಿದ್ದೇಶ್ವರ ಮಠ ಅಂಕಲಗಿ, ಶ್ರೀ ಸಿದ್ದಲಿಂಗಸ್ವಾಮಿಗಳು ತವಗಮಠ, ಶ್ರೀ ಮೌನಮಲ್ಲಿಕಾರ್ಜುನ ಸ್ವಾಮಿಗಳು ಮಮದಾಪೂರದ ಪೂಜ್ಯರುಗಳು ದ್ವಾರಬಾಗಿಲದ ಲೋಕಾರ್ಪಣೆ ನೆರವೇರಿಸಿದರು. ಈ ಸಂದರ್ಭದಲ್ಲಿ ಜರುಗಿದ ಸಮಾರಂಭದಲ್ಲಿ ದೀಪ ಪ್ರಜ್ವಲನೆ ಮಾಡಿ ಮಾತನಾಡಿದ ಮುಖ್ಯ ಅತಿಥಿಗಳಾದ ಜೆ.ಡಿ.ಎಸ್. ಮುಖಂಡ ಅಶೋಕ ಪೂಜಾರಿ ಧಾರ್ಮಿಕ ಮನೋಭಾವನೆ ನಮ್ಮನ್ನು ಮಾನಸಿಕವಾಗಿ ಸ್ಥಿರಗೊಳಿಸುವದ ಜೊತೆಗೆ ಉದಾತ್ತ ಆಚಾರ-ವಿಚಾರಗಳಿಗೆ ಪೂರಕವಾದ ಜೀವನ ಶೈಲಿಗೆ ಬಂಧಿಸುತ್ತದೆ. ಅಣ್ಣಬಸವಣ್ಣನ ಬೋಧನೆಯಂತೆ ಸಕಲ ಜೀವಿಗಳಿಗೂ ದಯೆ ತೋರಿಸುತ್ತ ಇನ್ನೋಬ್ಬರಿಗೆ ಒಳ್ಳೆಯದನ್ನು ಮಾಡುವದೇ ನಿಜವಾದ ಧರ್ಮ. ಆಧ್ಯಾತ್ಮ ಚಿಂತನೆಯ ಬಗ್ಗೆ ನಮ್ಮನ್ನು ನಾವು ಗೊಂದಲಕ್ಕೆ ಒಳಪಡಿಸಿಕೊಳ್ಳದೇ ನಮ್ಮ ಆತ್ಮ ಸಾಕ್ಷಿಗೆ ಅನುಗುಣವಾದ ಬದುಕೇ ಸಾರ್ಥಕ ಬದುಕು ಎಂದು ಅರ್ಥಪೂರ್ಣವಾಗಿ ಹೇಳಿದರು.
ಇನ್ನೊರ್ವ ಅತಿಥಿಗಳಾದ ಮಾಜಿ ಜಿ.ಪಂ. ಉಪಾಧ್ಯಕ್ಷ ಟಿ.ಆರ್. ಕಾಗಲ್ ಮಾತನಾಡಿ ಸದಾ ಸಂಸ್ಕಾರಯುತ ಜೀವನ ನಡೆಸುತ್ತಿರುವ ಹಿರೇನಂದಿ ಗ್ರಾಮ ಧಾರ್ಮಿಕತೆಯ ಕೇಂದ್ರ ಸ್ಥಳವಾಗಿದೆ ಎಂದರು.
ಸಮಾರಂಭದಲ್ಲಿ ತಿಂಗಳ ಪರ್ಯಂತ ಪ್ರವಚನ ನೀಡಿದ ರಾಜು ಶರಣರು ಜಂಜರವಾಡ, ಹಿರಿಯರಾದ ಎಲ್.ಬಿ. ಹುಳ್ಳೇರ, ಎ.ಪಿ.ಎಮ್.ಸಿ ಅಧ್ಯಕ್ಷ ಮಡ್ಡೆಪ್ಪ ತೋಳಿನವರ, ಕುಬಸದ, ಗ್ರಾಮದ ಹಿರಿಯರಾದ ಶಿವಯ್ಯ ಪೂಜೇರಿ, ಮಲ್ಲಿಕಾರ್ಜುನ ಮೂಲಿಮನಿ, ಅಶೋಕ ಅಂಕಲಗಿ, ಬಸವರಾಜ ಅಂಕಲಗಿ, ಬಸವರಾಜ ಅಜ್ಜನವರ, ಗ್ರಾ. ಪಂ. ಅಧ್ಯಕ್ಷ ಶ್ರೀಮತಿ ನಾಯಿಕ, ಉಪಾಧ್ಯಕ್ಷ ಕಟ್ಟಿಕಾರ, ತಾ.ಪಂ. ಸದಸ್ಯೆ ಸಿದ್ದನ್ನವರ ಮುಂತಾದ ಗಣ್ಯರು ಭಾಗವಹಿಸಿದ್ದರು. ಸಮಾರಂಭದಲ್ಲಿ ಧಾನಿಗಳನ್ನು ಸತ್ಕರಿಸಲಾಯಿತು.

loading...

LEAVE A REPLY

Please enter your comment!
Please enter your name here