ಮಹಿಳೆಯರಿಗೆ ಮಹಿಳೆಯರೇ ಶತ್ರುಗಳು

0
19
loading...

ಇಳಕಲ್ಲ : ಹೆರಿಗೆಯ ಸಮಯದಲ್ಲಿ ಗಂಡು ಮಗುವಿಗೆ ಜನ್ಮ ನೀಡು ಎಂಬ ಹರಿಕೆಯನ್ನು ಮಾಡುವ ಮಹಿಳೆಯರೇ ಮಹಿಳೆಯರ ನಿಜವಾದ ಶತ್ರುಗಳು ಎಂದು ನ್ಯಾಯವಾದಿ ಸೌಂದರ್ಯ ಹಳ್ಳದ ಹೇಳಿದರು .
ಅವರು ಇಲ್ಲಿಯ ಬಸವೇಶ್ವರ ನಗರದ ಡಿಪಿಇಪಿ ಶಾಲೆಯ ಹತ್ತಿರ ನಡೆದ ವಿಶ್ವಕರ್ಮ ಮಹಿಳಾ ಸ್ವ-ಸಹಾಯ ಸಂಘದ ಎರಡನೇಯ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿ ಮಹಿಳೆಯರಿಗೆ ಕಾನೂನಿನ ಜ್ಞಾನದ ಅಗತ್ಯ ಇದ್ದು ತಮ್ಮ ತಮ್ಮ ಹಕ್ಕುಗಳನ್ನು ಮಹಿಳೆಯರು ಅರಿತುಕೊಂಡರೆ ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು .
ಅತಿಥಿಗಳಾಗಿ ನಗರಸಭೆಯ ಯೋಜನಾಧಿಕಾರಿ ಯು ಜಿ ವರದಪ್ಪನವರ ,ಕಛೇರಿಯ ವ್ಯವಸ್ಥಾಪಕ ಎನ್ ಎಂ ಕಂದಗಲ್ಲ ,ವಿಶ್ವಕರ್ಮ ಸಮಾಜದ ಪ್ರಧಾನ ಕಾರ್ಯದರ್ಶಿ ಈರಣ್ಣ ಬಡಿಗೇರ ಗೋವಾ,ವಿಜಯನಗರ ಮಹಿಳಾ ಸಂಘದ ಅಧ್ಯಕ್ಷೆ ದೇವಕ್ಕಮ್ಮ ಕುಕನೂರ,ಗುರು ಗಾಣಿಗೇರ ಆಗಮಿಸಿದ್ದರು
ಕಾರ್ಯಕ್ರಮವನ್ನು ಉದ್ಘಾಟಿಸಿದ ಬಾಗಲಕೋಟ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಗಂಗಣ್ಣ ಪತ್ತಾರ ಅವರು ಜಕಣಾಚಾರಿ ಪ್ರಶಸ್ತಿ ಪಡೆದ ಷಣ್ಮುಖಪ್ಪ ಯರಕದ, ನಗರ ಯೋಜನಾ ಪ್ರಾಧಿಕಾರದ ಸದಸ್ಯ ನಾರಾಯಣಪ್ಪ ಪತ್ತಾರ ಹುನಗುಂದ ಪುರಸಭೆ ನಾಮನಿರ್ದೇಶಿತ ಸದಸ್ಯ ರಾಜು ಬಡಿಗೇರ ಇವರನ್ನು ಸತ್ಕರಿಸಿದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೇಣುಕಾ ಬಡಿಗೇರ ವಹಿಸಿದ್ದರು ವಂದನಾ ಕಮ್ಮಾರ ಸುಜಾತಾ ಬಡಿಗೇರ ಪ್ರಾರ್ಥಿಸಿದರು ಸಂಸ್ಥೆಯ ಉಪಾಧ್ಯಕ್ಷೆ ಗೌರಮ್ಮ ಕಮ್ಮಾರ ಸ್ವಾಗತಿಸಿದರು ,ಶೋಭಾ ಬಡಿಗೇರ ವಂದಿಸಿದರು ವಿರೂಪಾಕ್ಷ ನಂದಿಕೋಲಮಠ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here