ಮಾನವನ ಭವರೊಗ ಕಳೆಯುವ ಶಕ್ತಿ ಸದ್ಗುರುವಿಗಿದೆ: ಇಂಚಲದ ಡಾ|| ಶಿವಾನಂದ ಭಾರತಿ ಶ್ರೀಗಳು

0
24
loading...

 

ಬೆಟಗೇರಿ ಸೆ 19: ಪರಮಾತ್ಮನ ನಾಮಸ್ಮರಣೆ ನಿತ್ಯ ಮಾಡಿದರೆ ಮಾನವನ ಜೀವನ ಪಾವನವಾಗುತ್ತದೆ.ಮಾನವನ ಭವರೊಗ ಕಳೆಯುವ ಶಕ್ತಿ ಸದ್ಗುರುವಿಗಿದೆ ಎಂದು ಇಂಚಲದ ಸಾಧು ಸಂಸ್ಥಾನ ಮಠದ ಸದ್ಗುರು ಶ್ರೀ ಶಿವಾನಂದ ಭಾರತಿ ಮಹಾಸ್ವಾಮೀಜಿ ಅವರು ಹೇಳಿದರು.

ಗೋಕಾಕ ತಾಲೂಕಿನ ಬೆಟಗೇರಿಗ್ರಾಮದಲ್ಲಿ ನಡೆದ 31ನೇ ಸತ್ಸಂಗ ಸಮ್ಮೇಳನ ಸಮಾರಂಭದ ಘನ ಅಧ್ಯಕ್ಷತೆ, ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಮನುಷ್ಯ ಆಧ್ಯಾತ್ಮದ ಮೊರೆ ಹೊಗುವದರಿಂದ ಮನಸ್ಸಿಗೆ ನೆಮ್ಮದಿ ದೊರಕುತ್ತದೆ ಎಂದರು.

ಹೊಸಳ್ಳಿ ಶ್ರೀ ಸಂಸ್ಥಾನ ಮಠದ ಶ್ರೀ ಅಭಿನವ ಬೂದೀಶ್ವರ ವiಹಾ ಸ್ವಾಮೀಜಿ ಮಾತನಾಡುತ್ತಾ, ಈ ನಾಡಿಗೆ ಆಧ್ಯಾತ್ಮದ ಕೂಡುಗೆ ನೀಡಿದ ಸದ್ಗುರು ಶ್ರೀ ಸಿಧ್ಧಾರೂಢರ ಹಾಗೂ ವಿಶ್ವ ಗುರು ಬಸವಣ್ಣನವರ ತತ್ವಾದರ್ಶಗಳನು ಮನುಷ್ಯ ತನ್ನ ಬದುಕಿನಲ್ಲಿ ಅಳವಡಿಸಿ ಕೂಳ್ಳಬೇಕೆಂದರು.

ಸುಣಧೋಳಿ ಶ್ರೀ ಜಡಿಸಿದ್ದೇಶ್ವರ ಮಠದ ಅಭಿನವ ಶ್ರೀ ಶಿವಾನಂದ ಮಹಾಸ್ವಾಮೀಜಿ.ಗದಗ ಮಹಿಳಾ ಆಧ್ಯಾತ್ಮ ವಿದ್ಯಾಶ್ರಮದ ಶಿವ ಶರಣೆ ನೀಲ್ಮಮಾ ತಾಯಿ(ಅಸುಂಡಿ) ಮಲ್ಲಾಪೂರ(ಕೆ ಎನ್) ಗಾಳೇಶ್ವರ ಮಠದ ಶ್ರೀ ಚಿದಾನಂದ ಸ್ವಾಮಿಜಿ, ತೊಂಡಿಕಟ್ಟಿ ಗಾಳೇಶ್ವರ ಮಠದ ಅಭಿನವ ವೆಂಕಟೇಶ್ವರ ಮಹಾರಾಜರು ಹಾಗೂ ಹುಣಶ್ಯಾಳ ಪಿ.ಜಿ ಸಿದ್ದಲಿಂಗ ಕೈವಲ್ಯ ಆಶ್ರಮ ಶ್ರೀ ನಿಜಗುಣ ದೇವರು, ಗುಡಸ ಶ್ರೀಸಿದ್ದಾರೊಢ ಆಶ್ರಮದ ಶ್ರೀ ಈಶ್ವರಾನಂದ ಸ್ವಾಮಿಜಿ, ಸಕಲ ಮಹಾತ್ಮರು, ಈ ಸತ್ಸಂಗ ಸಮ್ಮೇಳನದಲ್ಲಿ ಪ್ರವಚನ ನೀಡಿದರು.
ಈ ಸತ್ಸಂಗ ಸಮ್ಮೇಳನಕ್ಕೆ ತನು,ಮನ,ಧನ ನೀಡಿದ ದಾನಿಗಳಿಗೆ ಶ್ರೀ ಗಳಿಂದ ಸನ್ಮಾನ,ಆಶೀರ್ವಾದ ಕಾರ್ಯಕ್ರಮ ವೈಭವದಿಂದ ನಡೆಯಿತು. ಈ ಸಮ್ಮೇಳನದ ಹಿಂದಿನ ದಿನ ಸದ್ಗುರು ಶ್ರೀ ಶಿವಾನಂದ ಭಾರತಿ ಮಹಾಸ್ವಾಮೀಜಿ ಅವರ ಭಕ್ತಿಯ ತುಲಾಭಾರ, ಕೀರಿಟ ಮಹಾಪೂಜೆ ಕಾರ್ಯಕ್ರಮ ಸಡಗರ- ಸಂಭ್ರಮದಿಂದ ನಡೆಯಿತು. ನಂತರ ಲಕ್ಷ್ಮಿಬಾಯಿ ಕುಳಲಿ ಹಾಗೂ ವಿವಿಧ ಭಜನಾ ತಂಡದವರಿಂದ ಶಿವ ಭಜನಾ ಕಾರ್ಯಕ್ರಮ ನಡೆದು, ಶಿವನಾಮ ಸ್ಮರಣೆ ಜಾಗರಣೆ ನಡೆಯಿತು.
ಬಸನಗೌಡ ದೇಯಣ್ಣವರ, ಪುಂಡಲೀಕಪ್ಪ ಪಾರ್ವತೇರ,ಬಸಪ್ಪ ದೇಯಣ್ಣವರ ಮಹಾದೇವ ಹಢಪದ ಚಿಂತಪ್ಪ ಸಿದ್ನಾಳ,ಗೌಡಪ್ಪ ದೇಯಣ್ಣವರ, ಬಸಪ್ಪ ತೋಟಗಿ, ಬಸವರಾಜ ನೀಲನ್ನವರ, ಸ್ಥಳೀಯ ಹಾಗೂ ಸುತ್ತಮುತ್ತಲಿನ ವಿವಿಧಗ್ರಾಮದ ಗಣ್ಯವ್ಯಕ್ತಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು,

ಅಧ್ಯಕ್ಷರು,ಸದಸ್ಯರು, ಸ್ಥಳಿಯ ಶ್ರೀ ಈಶ್ವರ ಭಜನಾ ಮಂಡಳಿಸದಸ್ಯರು, ಪದಾಧಿಕಾರಿಗಳು,ಗ್ರಾಮಸ್ಥರು ಸಾವಿರಾರು ಜನ ಸದ್ಬಕ್ತರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಅಡಿವೆಪ್ಪ ಮುರಗೋಡ ಸ್ವಾಗತಿಸಿದರು , ಬಸವರಾಜ ಪಣದಿ ಕಾರ್ಯಕ್ರಮ ನಿರೊಪಿಸಿದರು, ಈರಪ್ಪ ದೇಯಣ್ಣವರ ಕೊನೆಗೆ ವಂದಿಸಿದರು.

loading...

LEAVE A REPLY

Please enter your comment!
Please enter your name here