ಮುಂದುವರೆದ ಮಳೆ ಅಬ್ಬರ : ಸಿಡಿಲು ಬಡಿದು ಎತ್ತು,12 ಮೇಕೆ ನೀರು ಪಾಲು

0
23
loading...

ಮುದ್ದೇಬಿಹಾಳ : ತಾಲೂಕಿನಲ್ಲಿ ಗುರುವಾರ ರಾತ್ರಿ ಹಾಗೂ ಶುಕ್ರವಾರವೂ ಮಳೆಯ ಅಬ್ಬರ ಮುಂದುವರೆದಿದ್ದು ತಾಲೂಕಿನ ವಿವಿಧೆಡೆ ಜಾನುವಾರುಗಳು ಹಾಗೂ ಮನೆಗಳಿಗೆ ಹಾನಿಯಾದ ಘಟನೆ ನಡೆದಿದೆ.
ತಾಲೂಕಿನ ರೂಢಗಿಯಲ್ಲಿ ಶುಕ್ರವಾರ ಮದ್ಯಾಹ್ನ ಸಿಡಿಲು ಬಡಿದು ಹೊಲದಲ್ಲಿ ಕಟ್ಟಿದ್ದ ಎತ್ತೊಂದು ಮೃತಪಟ್ಟಿದೆ.ರೂಢಗಿಯ ಶಿವಪ್ಪ ಮುತ್ತಪ್ಪ ಬೆಲ್ಲದ ಅವರಿಗೆ ಸೇರಿದ ಎತ್ತು ಇದಾಗಿದೆ ಎಂದು ಕಂದಾಯ ಇಲಾಖೆಯ ಮೂಲಗಳು ಸ್ಪಷ್ಟಪಡಿಸಿವೆ.
ತಾಲೂಕಿನ ಕೇಸಾಪೂರದಲ್ಲಿ ಅರಸನಾಳ-ಕೇಸಪೂರ ಗ್ರಾಮದ ಮಧ್ಯೆ ಸಂಪರ್ಕ ಕಲ್ಪಿಸುವ ಹಳ್ಳಕ್ಕೆ ಏಕಾಏಕಿ ಪ್ರವಾಹ ಬಂದು ಅದರಲ್ಲಿ 12 ಮೇಕೆಗಳು ಕೊಚ್ಚಿ ಹೋಗಿವೆ.ಅದರಲ್ಲಿ 3 ಮೇಕೆಗಳು ಪ್ರಾಣ ಕಳೆದುಕೊಂಡಿವೆ.ಈ ಮೇಕೆಗಳು ಈರಮ್ಮ ತಳವಾರ ಹಾಗೂ ಸಿದ್ದಪ್ಪ ಹಿರೇಕುರಬರ ಎಂಬುವರಿಗೆ ಸೇರಿವೆ ಎನ್ನಲಾಗಿದೆ.
ಕುರಿ ಮೇಯಿಸಲು ಹೋದ ವೇಳೆ ಸುರಿದಿದ್ದ ಭಾರೀ ಮಳೆಗೆ ಹಳ್ಳದಲ್ಲಿ ಏಕಾಏಕಿ ಪ್ರವಾಹ ಬಂದಿದೆ.ಹಳ್ಳ ದಾಟುವ ವೇಳೆ ಮೇಕೆಗಳು ಪ್ರವಾದಲ್ಲಿ ಸಿಲುಕಿಕೊಂಡಿವೆ.ಅದರಲ್ಲಿ ಮೂರು ಮೇಕೆಗಳು ಸತ್ತಿದ್ದು ಇನ್ನುಳಿದ ಮೇಕೆಗಳ ವಾರಸುದಾರರು ಹುಡುಕಾಟದಲ್ಲಿ ತೊಡಗಿದ್ದಾರೆ.
ತಾಲೂಕಿನ ಡೊಂಕಮಡು ಗ್ರಾಮದಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದ ಇಡೀ ಗ್ರಾಮದ ಪ್ರಮುಖ ರಸ್ತೆಗಳಲ್ಲಾ ಜಲಾವೃತಗೊಂಡಿವೆ.ಖಾಸಗಿ ವ್ಯಕ್ತಿಯೊಬ್ಬರು ಹೊಲದೊಳಕ್ಕೆ ಹೋಗಿ ಮುಂದೆ ಹಳ್ಳ ಸೇರುತ್ತಿದ್ದ ಮಳೆ ನೀರನ್ನು ಗ್ರಾಮದಲ್ಲಿಯೇ ನಿಲುಗಡೆ ಮಾಡಿದ್ದು ಜನ ಸಂಚಾರಕ್ಕೆ ತೊಂದರೆಯಾಗಿದೆ.ಇದನ್ನು ಸರಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಮಳೆ ನೀರು ಸರಾಗವಾಗಿ ಮುಂದೆ ಹಳ್ಳ ಸೇರುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಕೋಳೂರ ಹಾಗೂ ನಾಲತವಾಡ ಗ್ರಾಮದಲ್ಲಿ ಮನೆಯ ಗೋಡೆಯೊಂದು ಭಾಗಶಃ ಕುಸಿದಿದೆ ಎಂದು ವರದಿಯಾಗಿದೆ.
ಪಟ್ಟಣದಲ್ಲೂ ಶುಕ್ರವಾರ ಮದ್ಯಾಹ್ನ ಅರ್ಧ ಗಂಟೆಯವರೆಗೆ ಮಳೆಯಾಗಿದೆ.ಇದರಿಂದ ಚರಂಡಿಗಳು ತುಂಬಿ ರಸ್ತೆಯ ಮೇಲೆಲ್ಲಾ ಹರಿದು ಸಂಚಾರ ಅಸ್ತವ್ಯಸ್ತವಾಗಿತ್ತು.

loading...

LEAVE A REPLY

Please enter your comment!
Please enter your name here