ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ : ಸೋರಗಾಂವ ತಂಡಕ್ಕೆ ಜಯ

0
20
loading...

ವಿಜಯಪುರ : ಇಂಡಿ ತಾಲೂಕಿನ ಸುಕ್ಷೇತ್ರ ಲಚ್ಯಾಣ ಗ್ರಾಮದಲ್ಲಿ ಎಂ.ಸಿ.ಸಿ., ವಿ.ಸಿ.ಸಿ., ಎಸ್.ಸಿ.ಸಿ. ಸಂಯುಕ್ತಾಶ್ರಯದಲ್ಲಿ ಲಿಂಗೈಕ್ಯ ಸಿದ್ಧಲಿಂಗ ಮಹಾರಾಜರ 88ನೇ ಪುಣ್ಯಾರಾಧನೆ ಹಾಗೂ ಗಜಾನನೋತ್ಸವ ಅಂಗವಾಗಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಕಬ್ಬಡ್ಡಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಬಾಗಲಕೋಟ ಜಿಲ್ಲೆಯ ಸೋರಗಾಂವ ತಂಡವು ಜಯಗಳಿಸಿ ಪ್ರಥಮ ಬಹುಮಾನ ಬಾಚಿಕೊಂಡಿತು.
ವಿಜಯಪುರ ತಾಲ್ಲೂಕಿನ ಕೆಂಗಲಗುತ್ತಿ ಗ್ರಾಮದ ಕ್ರೀಡಾ ತಂಡ ದ್ವಿತೀಯ ಸ್ಥಾನ ಪಡೆದರೆ, ಸೊಲ್ಲಾಪೂರದ ಜೈ ಶ್ರೀರಾಮ ತಂಡ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಇದಕ್ಕೂ ಮುನ್ನ ಯುವ ಧುರೀಣ ಬಸವಂತರಾಯಗೌಡ ಪಾಟೀಲ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆಗಳು ಮನುಷ್ಯನ ಸರ್ವಾಗೀಣ ಪ್ರಗತಿಗೆ ಪೂರಕ. ಕಬ್ಬಡ್ಡಿ ಪಂದ್ಯದಲ್ಲಿ ಯುವಕರು ಪಾಲ್ಗೊಳ್ಳುವ ಮೂಲಕ ದೇಶಿಯ ಕ್ರೀಡೆಯನ್ನು ಉಳಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಸುಗೌಡ ಬಿರಾದಾರ ಮಾತನಾಡಿ, ಧಾರ್ಮಿಕ ಕ್ಷೇತ್ರದಿಂದ ಪ್ರಸಿದ್ಧವಾದ ಲಚ್ಯಾಣ ಗ್ರಾಮವು ಕ್ರೀಡೆ, ಕುಸ್ತಿಗೂ ಹೆಸರುವಾಸಿಯಾಗಿದೆ ಎಂದು ಬಣ್ಣಿಸಿದರು.
ಇಂಡಿ ಪುರಸಭೆ ಅಧ್ಯಕ್ಷ ಪ್ರಶಾಂತ ಕಾಳೆ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಗ್ರಾಮಸ್ಥರು ಉತ್ಸವದ ಅಂಗವಾಗಿ ದೇಶಿಯ ಕಬ್ಬಡ್ಡಿ ಪಂದ್ಯವನ್ನು ಸಂಘಟಿಸಿದ್ದು ಶ್ಲಾಘನೀಯ ಎಂದರು.
ಇಂಡಿ ಸಹಾಯಕ ಉಪ ನೊಂದಣಾಧಿಕಾರಿ ವಿಜಯಕುಮಾರ ನಾಯಕ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಅಶೋಕಗೌಡ ಪಾಟೀಲ ಕ್ರೀಡಾ ಮೈದಾನ ಪೂಜೆ ನೆರವೇರಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ರಾವೂರ ಕ್ರೀಡಾ ಜ್ಯೋತಿ ಬೆಳಗಿದರು. ಬಸಯ್ಯ ಸ್ವಾಮೀಜಿ, ಮದ್ದಾನಿ ಮಹಾರಾಜರು ಸಾನಿಧ್ಯವಹಿಸಿದ್ದರು.
ಕ್ರೀಡಾಕೂಟದಲ್ಲಿ ಮಹಾರಾಷ್ಟ್ರದ ಸೋಲಾಪುರ, ಸೊರಗಾಂವ, ಅಹೆರವಾಡಿ, ಪಾನ್ ಮಂಗಳೂರು, ಜಿಲ್ಲೆಯ ತಾಂಬಾ, ಕೆಂಗಲಗುತ್ತಿ, ಆಳೂರ ತಾಂಡಾ, ಮೈದರಗಿ ಹಾಗೂ ಸ್ಥಳಿಯ ಕ್ರೀಡಾ ಪಟುಗಳು ಭಾಗವಹಿಸಿದ್ದರು.
ವೇದಿಕೆ ಮೇಲೆ ಅಗರಖೇಡ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಠುಗೌಡ ಪಾಟೀಲ, ಗುತ್ತಿಗೆದಾರ ಶ್ರೀಶೈಲ ಪೂಜಾರಿ,ಯುವ ಧುರೀಣ ರಾಜೇಂದ್ರ ಹತ್ತಳ್ಳಿ, ಸ್ಥಳಿಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅರವಿಂದ ಬಿರಾದಾರ,ಅಪ್ಪು ನಿಂಬಾಳ ಹಾಗೂ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು, ಶಿಕ್ಷಕರು, ಗಣ್ಯರು ಉಪಸ್ಥಿತರಿದ್ದರು. ಡಿ.ಎ. ಮುಜಗೊಂಡ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here