ಲೋಕ ಅದಾಲತನಲ್ಲಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡಾಗ ಎರಡು ಪಕ್ಷಗಾರರ ನಡುವೆ ಸಾಮರಸ್ಯ ಮೂಡಲು ಸಾಧ್ಯ

0
31
loading...

ಬೈಲಹೊಂಗಲ-ಕಕ್ಷಿದಾರರು ಲೋಕ ಅದಾಲತನಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡಾಗ ಮಾತ್ರ ಎರಡು ಪಕ್ಷಗಾರರ ನಡುವೆ ಸಾಮರಸ್ಯ ಮೂಡಲು ಸಾಧ್ಯ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಬಾಲಗೋಪಾಲಕೃಷ್ಣ ಹೇಳಿದರು.
ಅವರು ಶನಿವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಬೃಹತ ಲೋಕ ಅದಾಲತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಕ್ಷಿದಾರರು ಲೋಕ ಅದಾಲತನಲ್ಲಿ ಎರಡು ಪಕ್ಷಗಾರರ ಮನವೊಲಿಸಿ ಸಂದಾನ ಮಾಡುವದರಿಂದ ತ್ವರಿಗತಿಯ ನ್ಯಾಯ ದೊರಕಿಸಿ ಕೊಡುವದರ ಜೊತೆಗೆ ನ್ಯಾಯಾಲಯದ ಸಮಯ ಹಾಗೂ ಕಕ್ಷಿದಾರರು ತಮ್ಮ ಹಣವನ್ನು ಉಳಿತಾಯ ಮಾಡಲು ಸಾಧ್ಯ ಎಂದರು.
ಬಾಕಿ ಇರುವ ರಸ್ತೆ ಅಪಘಾತ, ಚೆಕ್ ಬೌನ್ಸ, ಸಿವಿಲ್ ಪ್ರಕರಣಗಳು, ಕೌಟುಂಬಿಕ ವಿಷಯಕ್ಕೆ ಸಂಬಂಧಿಸಿದ ವ್ಯಾಜ್ಯಗಳು, ಬ್ಯಾಂಕಿನ ವ್ಯವಹಾರಕ್ಕೆ ಸಂಬಂಧಪಟ್ಟ ಪ್ರಕರಣಗಳು ಮುಂತಾದವುಗಳ ಬಗ್ಗೆ ರಾಜೀ ಸಂಧಾನದ ಮೂಲಕ ಲೋಕ ಅದಾಲತನಲ್ಲಿ ಇತ್ಯರ್ಥ ಪಡಿಸಲಾಗುವದು.
ವೇದಿಕೆಯ ಮೇಲೆ ಕಿರಿಯ ದಿವಾಣಿ ನ್ಯಾಯಧೀಶೆ ಶಿರಿನ ಅನ್ಸಾರಿ, ಅಧಿಕ ದಿವಾನಿ ನ್ಯಾಯಾಧೀಶ ಸಿ.ಎಸ್. ಶಿವನಗೌಡರ, ವಕೀಲರ ಸಂಘದ ಅಧ್ಯಕ್ಷ ಎಂ.ವೈ ಸೋಮಣ್ಣವರ, ಕಾಯದರ್ಶಿ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಸರಕಾರಿ ಅಭಿಯೋಜಕರಾದ ರಂಜನಾ ಪಾಟೀಲ, ರಮೇಶ ಕೋಲಕಾರ, ಕಿತ್ತೂರು ಸಿಪಿಐ ಸಂಗನಗೌಡ ಮುಂತಾದವರು ಇದ್ದರು.
ವಕೀಲರಾದ ಎ.ಎ ಅಥಣಿ, ಎಸ್. ಜಿ. ಬೂದಯ್ಯನವರಮಠ, ಜಿ.ಬಿ. ಈರಪ್ಪಗೋಳ, ಆರ್.ಎ. ಪಾಟೀಲ, ಎಂ.ಎಂ. ಅಬ್ಬಾಯಿ, ಐ.ಡಿ.ಒಂಟಿ, ಎಂ.ಪಿ. ಮೆಳವಂಕಿ, ಸಂತೋಷ ಆಲದಕಟ್ಟಿ ಹಾಗೂ ನೂರಾರು ಕಕ್ಷಿದಾರರು ಇದ್ದರು.
ವಕೀಲ ಎಂ.ಎಂ ಸೋಪಿನ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

loading...

LEAVE A REPLY

Please enter your comment!
Please enter your name here