ವಿಜೃಂಭಣೆಯ ದೇವರ ಪಲ್ಲಕ್ಕಿ ಉತ್ಸವ

0
17
loading...

ಇಂಡಿ : ಪ್ರತಿವರ್ಷದಂತೆ ಈ ವರ್ಷದ ಶ್ರಾವಣ ಮಾಸದ ಕೊನೆಯ ಸೋಮವಾರರಂದು ಇಲ್ಲಿಯ ವಿದ್ಯಾನಗರದ ಬಡಾವಣೆಯಲ್ಲಿ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವವು ಆಧ್ಯಾತ್ಮಿಕ ವಿಧಿವಿಧಾನಗಳೊಂದಿಗೆ ಸುಮಂಗಲೆಯರ ಕುಂಭ ಕಳಸದೊಂದಿಗೆ ಪಲ್ಲಕ್ಕಿ ಉತ್ಸವ ಭವ್ಯ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ 9 ಗಂಟೆ ಸಮಯದಲ್ಲಿ 11 ಜನ ಪುರವಂತರ ಕುಣಿತ, ಬಾಜಾ ಬಜಂತ್ರಿಯೊಂದಿಗೆ ಹೊರಟ ಮಲ್ಲಿಕಾರ್ಜುನ ಪಲ್ಲಕ್ಕಿ ಉತ್ಸವ ನಗರದ ಸದಾಶಿವ ಬಡಾವಣೆಯ ಮೂಲಕ ಸಿಂದಗಿ ರಸ್ತೆ ಯ ಶಾಂತೇಶ್ವರ ಮಂಗಲ ಕಾರ್ಯಾಲಯದ ಮುಂಭಾಗದ ಬನ್ನಿ ಮಂಟಪಕ್ಕೆ ತೆರಳಿ ಅಲ್ಲಿಯ ಲಕ್ಷ್ಮೀ ದೇವಸ್ಥಾನದಲ್ಲಿ ವಿವಿಧ ಆಧ್ಯಾತ್ಮಿಕ ಕಾರ್ಯಗಳು ಜರುಗಿ ಪಲ್ಲಕ್ಕಿ ಉತ್ಸವದಲ್ಲಿ ಭಾಗಿಯಾದ 101 ಸುಮಂಗಲೆಯರಿಗೆ ನಗರದ ಭಕ್ತಾಧಿ ಅನೀಲ ಶೇಖದಾರ ಜಂಪರ ಪೀಸ್ ಹಾಗೂ ಉಡಿಹಕ್ಕಿ ಹಾಕಿ ಹಾರೈಸಿದರು.
ಪುನಃ ಪಲ್ಲಕ್ಕಿ ಉತ್ಸವ ಬನ್ನಿ ಮಂಟಪದಿಂದ ಹೊರಟು ಸಿಂದಗಿಯ ಮುಖ್ಯ ರಸ್ತೆಯಿಂದ ಬಸವರಾಜ ಮುಂಭಾಗದಲ್ಲಿ ಹಾಯ್ದು ವಿವಿಧ ಬಡಾವಣೆಗಳ ಮೂಲಕ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಆಗಮಿಸಿದ ನಂತರ ವಿಶೇಷ ಪೂಜೆ ಸೋಮಯ್ಯ ಹಾಗೂ ಈರಯ್ಯ ಅರ್ಚಕರ ನೇತೃತ್ವದಲ್ಲಿ ಜರುಗಿತು.
ನಂತರ ಪಲ್ಲಕ್ಕಿ ಉತ್ಸವದಲ್ಲಿ ಭಾಗಿಯಾದ ಸುಮಂಗಲೆಯರಿಗೆ, ಭಕ್ತಾಧಿಗಳಿಗೆ ವಿಶೇಷ ಪ್ರಸಾದ ವಿತರಿಸಲಾಯಿತು. ಪಲ್ಲಕ್ಕಿ ಉತ್ಸವದಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಸಮಿತಿ ಅಧ್ಯಕ್ಷ ಭೀಮಾಶಂಕರ ಮುರಗುಂಡಿ, ಉಪಾಧ್ಯಕ್ಷ ಭೀಮಾಶಂಕರ ಬಿರಾದಾರ, ಉದ್ದಿಮೆದಾರ ಜಗದೀಶ ಕ್ಷತ್ರಿ, ಪ್ರೋ. ಎಸ್.ಎಸ್. ಪಾಟೀಲ, ಸೋಮನಾಥ ದಳವಾಯಿ, ಶಿವಾನಂದ ದಳವಾಯಿ, ಜಿ.ಜಿ. ಬರಡೋಲ, ಶಿವಯ್ಯ ಹಿರೇಪಟ್ಟ, ಅಶೋಕ ಮಾನೆ, ಡಿ.ಎಸ್. ಜೋಶಿ, ಎನ್.ಕೆ. ಕುಂಬಾರ, ಶರಣು ಉಪ್ಪಿನ್, ಅನೀಲ ತಡಕಲ್ಲ, ಶಿವಾನಂದ ಸಾಳುಂಕೆ, ವಿಶಾಲ ಸಿಂದಗಿ, ಮಲ್ಲನಗೌಡ ಬಿರಾದಾರ, ಮಲಕಾರಿ ಒಡೆಯರ, ಶೀಲಪ್ಪ ಒಡೆಯರ, ಚಿದಾನಂದ ಗಳೇದ, ನಿತೀಶ ಮಾನೆ, ಅನೀಲ ಗುಬ್ಬೇವಾಡ, ಮುತ್ತುರಾಜ ಅವಟಿ, ಡಿ.ಎಸ್. ದೊಡ್ಡಿ ಸೇರಿದಂತೆ ನೂರಾರು ಸುಮಂಗಲೆಯರು ಭಕ್ತಾಧಿಗಳು ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here