ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ : ಸಾರ್ವಜನಿಕರಿಗೆ ಅನ್ನ ಸಂತರ್ಪಣೆ

0
21
loading...

ಯಮಕನಮರಡಿ: ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಶ್ರೀ ದುರುದುಂಡೆಶ್ವರ ದೇವಸ್ಥಾನದ ಹತ್ತಿರ ಸ್ಥಾಪಿಸಲಾದÀ ಗಣೆಶೋತ್ಸವದ ಅಂಗವಾಗಿ 3 ದಿನಗಳ ವರೆಗೆ ಏರ್ಪಡಿಸಲಾದ ಅನ್ನಸಂತಪರ್Àಣೆ ಕಾರ್ಯಕ್ರಮವನ್ನು ದಿ 23 ರಂದು ವಿಜೃಂಭಣೆಯಿಂದ ಉದ್ಘಾಟಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸುಕ್ಷೇತ್ರ ಕಾರಿಮಠದ ಗುರುಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿ ಮಾತನಾಡುತ್ತಾ ಮನುಷ್ಯನು ದಾನ ಧರ್ಮಗಳನ್ನು ಮಾಡಿದಲ್ಲಿ ನಮ್ಮ ಧರ್ಮವೂ ರಕ್ಷಣೆ ಆಗುತ್ತದೆ ಅನ್ನ ದಾನಕ್ಕಿಂತ ಶ್ರೇಷ್ಠದಾನ ಯಾವೂದು ಇಲ,್ಲ 12 ನೇ ಶತಮಾನದಲ್ಲಿ ಆಗಿ ಹೋದ ಬಸವಾದಿ ಪ್ರಮಥರಲ್ಲಿ ಇಂತಹ ದಾಸೋಹ ಕಾರ್ಯಕ್ರಮಗಳು ಪ್ರತಿಯೊಬ್ಬ ಶರಣರ ಮನೆಯಲ್ಲಿಯೂ ಜರುಗುತ್ತಿದ್ದವೂ ಅವರು ಪ್ರತಿ ನಿತ್ಯ ತಮ್ಮ ಕಾಯಕದಲ್ಲಿದ್ದು ಜಂಗಮರಿಗೆ ದಾಸೋಹ ನಡೆಸುತ್ತಿದ್ದರು. ಇವತ್ತಿನ ಈ ಸಮಾರಂಭವನ್ನು ನೋಡಿದರೆ ನಿಜಕ್ಕೂ ನಾವು ಕಲ್ಯಾಣದಲ್ಲಿದ್ದೇವೆ ಎಂದು ನಮಗೆ ಅನಿಸುತ್ತಿದೆ 3 ದಿನಗಳವರೆಗೆ ಈ ಅನ್ನ ಸಂತರ್ಪಣೆ ಕಾರ್ಯಕ್ರಮವೂ ಜರುಗುತ್ತಿರುವದು ವಿಶೇಷವಾದುದ್ದಾಗಿದೆ ಇಂಥ ಪುಣ್ಯ ಕಾರ್ಯದಲ್ಲಿ ತೋಡಗಿಕೊಂಡಿರುವ ಯಮಕನಮರಡಿಯ ಗ್ರಾಮದ ಗಣ್ಯರಾದ ಈರಣ್ಣಾ ಶಿವಲಿಂಗಪ್ಪಾ ತುಬಚಿ ಇವರ ಘನ ಕಾರ್ಯವೂ ನಿಜಕ್ಕೂ ಶ್ಲಾಘನೀಯವಾದ್ದೂದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮತ್ತೊರ್ವ ಶ್ರೀಗಳಾದ ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಉ ಖಾನಾಪೂರ, ಗುರುಸಿದ್ದ ದೇವರು ಹುಣಸಿಕೊಳ್ಳಮಠ ಯಮಕನಮರಡಿ, ಹಾಗೂ ಕೃಪಾನಂದ ಮಹಾಸ್ವಾಮಿಗಳು ದಂಡಾಪೂರ ಇವರು ಉಪಸ್ಥಿತರಿದ್ದು ಆರ್ಶಿವಚನ ನೀಡಿದರು. ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮಗಳು ಜರುಗಿದರು ಪ್ರಾಸ್ಥಾವಿಕವಾಗಿ ಅಶೋಕ ಹುಕ್ಕೇರಿ ಮಾತನಾಡಿದರು, ಮುಖ್ಯ ಅತಿಥಿಗಳಾಗಿ ಈರಣ್ಣಾ ದುಗಾಣಿ ಆಗಮಿಸಿದ್ದರು. ಪ್ರಸಾದ ದಾನಿಗಳಾದ ಈರಣ್ಣಾ ತುಬಚಿ ಇವರನ್ನು ಶ್ರೀಗಳು ಸನ್ಮಾನಿಸಿ ಆರ್ಶೀವಸಿದರು. ಶಿಕ್ಷಕರಾದ ಶಿವಾನಂದ ಮಠಪತಿ ನಿರೂಪಿಸಿ ವಂದಿಸಿದರು.

loading...

LEAVE A REPLY

Please enter your comment!
Please enter your name here