ವಿದ್ಯುತ್ ಸಮಸ್ಯೆಗೆ ಬೇಸತ್ತ ಗ್ರಾಮಸ್ಥರು : ಟಿಸಿ ದುರಸ್ತಿಗೆ ಲಂಚದ ಬೇಡಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ : ಗ್ರಾ.ಪಂಗೆ ಬೀಗ ಜಡಿದು ಪ್ರತಿಭಟನೆ

0
15
loading...

ಮುದ್ದೇಬಿಹಾಳ : ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ಕಳೆದ 25 ದಿನಗಳಿಂದ ವಿದ್ಯುತ್ ಪರಿವರ್ತಕ ಸುಟ್ಟು ಹೋಗಿದ್ದರೂ ಅದನ್ನು ದುರಸ್ತಿ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ ಗ್ರಾಮಸ್ಥರು ಸೋಮವಾರ ಗ್ರಾ.ಪಂ ಕಛೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಪಂಚಾಯ್ತಿಗೆ ಬೆಳಗ್ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ದೊಡ್ಡನಗೌಡ ಪಾಟೀಲ,ಜಗ್ಗು ಮುರಾಳ ಮಾತನಾಡಿ, ಗ್ರಾಮದಲ್ಲಿನ ಟಿಸಿ ಸುಟ್ಟು ತಿಂಗಳಾಗುತ್ತಾ ಬಂದಿದ್ದರೂ ಅದನ್ನು ದುರಸ್ತಿ ಮಾಡುತ್ತಿಲ್ಲ.ಇದರಿಂದ ವಿದ್ಯುತ್ ಅವಲಂಬಿಸಿರುವ ಕುಡಿಯುವ ನೀರಿನ ಸಮಸ್ಯೆ,ಹಿಟ್ಟಿನ ಗಿರಣಿ ಬಂದ್ ಆಗಿರುವುದು,ತೋಟದ ಬೆಳೆಗಳು ನಾಶ ಹೊಂದುತ್ತಿವೆ.ಈ ಕುರಿತು ಹತ್ತು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಹೆಸ್ಕಾಂ ಸಿಬ್ಬಂದಿಗೆ ಟಿಸಿ ದುರಸ್ತಿ ಮಾಡಿಸಿ ಎಂದರೆ ಅವರು ಲಂಚಕ್ಕೆ ಕೈಯೊಡ್ಡುತ್ತಾರೆ.ಗ್ರಾಮೀಣ ಪ್ರದೇಶದಲ್ಲಿ ಮೊದಲೇ ಅನಿಯಮಿತವಾಗಿ ಬರಯುವ ವಿದ್ಯುತ್ ಈಗ ಕೈಕೊಟ್ಟರೆ ನಿತ್ಯದ ಬದುಕು ಹೇಗೆ ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.ಟಿಸಿ ಈಗ ಇರುವ ಸ್ಥಳ ಇಕ್ಕಟ್ಟಾಗಿದ್ದು ಅದನ್ನು ಸ್ಥಳಾಂತರಿಸಬೇಕಾಗಿದೆ.ಜಾಗೆ ತೋರಿಸಿದ್ದರೂ ಸ್ಥಳಾಂತರಕ್ಕೆ ವಿಳಂಬ ಮಾಡುತ್ತಿದ್ದಾರೆ.ಕತ್ತಲೆಯಲ್ಲಿಯೇ ಬದುಕು ಸಾಗಿಸುವುದು ಕಷ್ಟಕರವಾಗಿದ್ದು ಮನೆಯಲ್ಲಿ ಸಣ್ಣ ಮಕ್ಕಳು ಕಿರಿಕಿರಿ ಮಾಡುತ್ತಿವೆ.ಇದು ಅಧಿಕಾರಿಗಳಿಗೆ ಗೊತ್ತಿಲ್ಲದ ಸಂಗತಿಯೇನಲ್ಲ.ಕೂಡಲೇ ಟಿಸಿ ದುರಸ್ತಿ ಮಾಡಬೇಕೆ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಎಂ.ಬಿ.ಬಿರಾದಾರ,ಎಸ್.ಬಿ.ಪಾಟೀಲ,ಎಸ್.ಎಸ್.ಬಿರಾದಾರ,ಬಿ.ಎಂ.ಪಾಟೀಲ,ಬಿ.ಸಿ.ಪಾಟೀಲ,ಎ.ಎಸ್.ಬಿರಾದಾರ,ಆರ್.ಸಿ.ಮಠ,ಬಿ.ಎಸ್.ಪೂಜಾರಿ ಮತ್ತಿತರರು ಇದ್ದರು.

ಸ್ಥಳಕ್ಕೆ ಬಾರದ ಅಧಿಕಾರಿಗಳು:
ಗ್ರಾಮ ಪಂಚಾಯ್ತಿಗೆ ಬೀಗ ಜಡಿದು ಪ್ರತಿಭಟಿಸಿದರೂ ಸಂಬಂಧಿಸಿದ ಅಧಿಕಾರಿಗಳಾಗಲೀ,ಪಿಡಿಓ ಆಗಲಿ ಸ್ಥಳಕ್ಕೆ ಭೇಟಿ ನೀಡಲಿಲ್ಲ.ಗ್ರಾಮದ ಸಮಸ್ಯೆ ಆಲಿಸಲು ಹಳ್ಳಿಗೆ ಬರಬೇಕಾದ ಅಧಿಕಾರಿಗಳು ಎಲ್ಲಿ ಹೋಗಿದ್ದಾರೆ ಎಂಬ ಮಾಹಿತಿಯೂ ಸಿಗಲಿಲ್ಲ.ಇದರಿಂದ ರೋಸಿ ಹೋದ ಗ್ರಾಮಸ್ಥರು ಪಿಡಿಓ ಸೇರಿದಂತೆ ಅಧಿಕಾರಿಗಳ ಬೇಜವಾಬ್ದಾರಿಯನ್ನು ಖಂಡಿಸಿದರಲ್ಲದೇ ಮಂಗಳವಾರ ತಹಸೀಲ್ದಾರ್ ಕಛೇರಿಗೆ ಆಗಮಿಸಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here