ವ್ಯವಹಾರಗಳ ಕೇಂದ್ರ ಬಿಂದುವೇ ಗ್ರಾಹಕರು : ಅಮರಸಿಧ್ಧೇಶ್ವರ ಶ್ರೀಗಳು

0
23
loading...

 

ಗೋಕಾಕ: ಗ್ರಾಹಕರೇ ಬ್ಯಾಂಕಿನ ಮೂಲಾಧಾರ. ಬ್ಯಾಂಕಿನ ಆರ್ಥಿಕತೆಯು ಗ್ರಾಹಕರ ಸಂಖ್ಯೆ ಅವಲಂಭಿಸಿದೆ. ವ್ಯವಹಾರಗಳ ಕೇಂದ್ರ ಬಿಂದುವೇ ಗ್ರಾಹಕರು ಎಂದಾಗ ಅವರ ಬಗ್ಗೆ ಕಾಳಜಿ ಅತ್ಯವಶ್ಯ ಎಂದು ದಿವ್ಯ ಸಾನಿದ್ಯ ವಹಿಸಿದ್ದ, ಕುಂದರಗಿ ಶ್ರೀ ಅಡವಿಸಿಧ್ಧೇಶ್ವರ ಮಠದ ಶ್ರೀ ಅಮರಸಿಧ್ಧೇಶ್ವರ ಶ್ರೀಗಳು ಹೇಳಿದರು.
ಅವರು, ಸೋಮವಾರ ಇಲ್ಲಿಯ ಸಮೀಪದ ಕುಂದರಗಿಯ ಶ್ರೀ ಶಿವಸಿದ್ರಾಮೇಶ್ವರ ವಿವಿಧೋಧ್ಧೇಶಗಳ ಸಹಕಾರಿ ಸಂಘದಲ್ಲಿ ಏರ್ಪಡಿಸಿದ ಶ್ರಾವಣದ ವಿಶೇಷ ಪೂಜೆ ನೆರವೇರಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಬೆಳಗಾವಿ ನಗರ ಶಾಖೆಯಲ್ಲಿ ಪ್ರಾರಂಭಗೊಳಿಸಿದ ಇ-ಸ್ಟಾಂಪಿಂಗ್ ಬಾಂಡ್ ಪೇಪರ್ ದ ಗಣಕಯಂತ್ರಕ್ಕೆ ಚಾಲನೆ ನೀಡಿ ಉದ್ಘಾಟಿಸಿದರು.
ಸರಕಾರ ಕೊಡುವ ಎಲ್ಲ ಯೋಜನೆಗಳ ಸದ್ಬಳಕೆಯಾಗಬೇಕು. ಬಡವರ ಬಗ್ಗೆ ಬ್ಯಾಂಕುಗಳು ಸಹೃದಯತೆ ಹೊಂದಬೇಕು. ಸಕಾಲಕ್ಕೆ ಬ್ಯಾಂಕುಗಳಿಗೆ ಸಾಲ ಮರುಪಾವತಿ ಮಾಡಿ ಬಡ್ಡಿ ಕೊಡುವವರೇ ದೊಡ್ಡವರು. ಎಂದರಲ್ಲದೆ, ಕಾಯಕವುಳ್ಳವ ಎಂದೂ ಬಡವನಾಗಲಾರ. ಎಲ್ಲರೂ ಸಂಸ್ಥೆಯ ಹಿತಕ್ಕೆ ಬದ್ಧರಾದಾಗ ಸಂಸ್ಥೆ ಹೆಮ್ಮರಗೊಳ್ಳಲು ಸಾಧ್ಯ ಎಂದರು.
ಬ್ಯಾಂಕಿನ ಚೇರಮನ್ ಡಾ. ಬಾಳಪ್ಪಾ ಜರಳಿ ಸರ್ವರನ್ನು ಸ್ವಾಗತಿಸಿ ಮಾತನಾಡಿ ನಮ್ಮ ಬ್ಯಾಂಕು ಹೆಮ್ಮರಗೊಳ್ಳಲು ಶ್ರೀಗಳೇ ಕಾರಣ. ಅವರು ಸಂಸ್ಥೆಯ ಅಭ್ಯುದಯಕ್ಕೆ ಕಾರಣವಾಗುವ ಅಂಶಗಳನ್ನು ಎತ್ತಿದ್ದರಿಂದಾಗಿ ನಾವು ಎಚ್ಚತ್ತುಕೊಳ್ಳಲು ಕಾರಣವಾಗಿದೆ ಎಂದು ಶ್ರೀಗಳ ಸಹಕಾರವನ್ನು ಸ್ಮರಿಸಿದರು.
ಬ್ಯಾಂಕಿನ ಅಧ್ಯಕ್ಷರಾದ ಡಾ. ಜರಳಿ ಮತ್ತು ಉಪಾಧ್ಯಕ್ಷ ಮಹೇಶ ಪತ್ತಾರ ಶ್ರೀಗಳನ್ನು ಸನ್ಮಾನಿಸಿದರು.
ಗುಳÉೀದಗುಡ್ಡ ಶ್ರೀಗಳು ಸಾನಿದ್ಯ ವಹಿಸಿದ್ದÀರು. ವೇದಿಕೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಡಾ. ಸಂಜಯ ಹೊಸಮಠ, ಅತಿಥಿಗಳಾಗಿ ಪಾಲ್ಗೊಂಡಿದ್ದ ಎಸ್.ಎಸ್.ಖನಗಾವಿ, ನ್ಯಾಯವಾದಿಗಾದ ಬಿ.ಜಿ.ರೊಟ್ಟಿ, ಆರ್.ಪಿ.ಪಾಟೀಲ,ಎಸ್.ಎಮ್.ಬ್ಯಾಂಕ ಶಾಖಾ ಕಾರ್ಯದರ್ಶಿ ಎನ್.ಡಿ.ಮಾದರ, ರಾಜೇಂದ್ರ ಗೌಡಪ್ಪಗೋಳ, ವಿ.ಬಿ.ಈಶ್ವರಪ್ಪಗೋಳ, ಉಪಾಧ್ಯಕ್ಷ ಮಹೇಶ ಪತ್ತಾರ, ಕಾರ್ಯದರ್ಶಿ ಸಿದ್ದು ಬ್ಯಾಳಿ, ಬಿ.ಜಿ.ಕೊಳವಿ ಆಸೀನರಾಗಿದ್ದರು. ಸಿದ್ದು ಬ್ಯಾಳಿ ನಿರೂಪಿಸಿದರು. ರಾಜೇಂದ್ರ ಗೌಡಪ್ಪಗೋಳ ವಂದಿಸಿದರು.

loading...

LEAVE A REPLY

Please enter your comment!
Please enter your name here