ಶಿಕ್ಷಕರ ಪಾತ್ರ ದೊಡ್ಡದು

0
66
loading...

ಇಳಕಲ್ಲ : ಮಕ್ಕಳಿಗೆ ವಿದ್ಯಾಭ್ಯಾಸವನ್ನು ಮಾಡಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದಾಗಿದ್ದು ಅವರನ್ನು ತಿದ್ದಿ ತೀಡಿ ಸಿದ್ದಗೊಳಿಸುವ ಸಂಪೂರ್ಣ ಜವಾಬ್ದಾರಿ ಶಿಕ್ಷಕರ ಮೇಲೆ ಇರುತ್ತದೆ ಎಂದು ಚೇರಮನ್ ಶರಣಪ್ಪ ಅಕ್ಕಿ ಹೇಳಿದರು.
ಅವರು ಇಲ್ಲಿಯ ಚಿತ್ತರಗಿ ಶ್ರೀ ವಿಜಯ ಮಹಾಂತೇಶ ಎಜ್ಯುಕೇಶನ್ ಸೊಸೈಟಿಯ ಶ್ರೀ ವಿಜಯ ಮಹಾಂತೇಶ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಿಶುವಿಹಾರ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಶ್ರೇಷ್ಠ ಶಿಕ್ಷಣತಜ್ಞ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನಾಚರಣೆ ಅಂಗವಾಗಿ ಗುರುವಂದನಾ ಹಾಗೂ ಸನ್ಮಾನ ಸಮಾರಂಭ ಜರುಗಿತು.
ಸಮಾರಂಭದ ಮುಖ್ಯ ಅತಿಥಿಗಳಾದ ಇಳಕಲ್ಲ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರದ ಪ್ರಭಾರಿ ನಿವೃತ್ತ ಪ್ರಾಚಾರ್ಯ ಜೆ.ಎಸ್. ಮರೋಳ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಅವರು ಸನ್ಮಾನ ಸ್ವೀಕರಿಸಿ ಶಿಕ್ಷಕರು ಸೃಜನಶೀಲ, ವಿವೇಚನಾಶೀಲ ಜ್ಞಾನಶೀಲರಾಗಿ ಗುಣಾತ್ಮಕ ಕಲಿಕೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕೆಂದು ನುಡಿದರು.
ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಜ್ಯೋತಿ ಕಲಾದಗಿ, ಸುಜಾತಾ ಎಂ. ಬಂಡಿ, ನಾರಾಯಣ ಸಂ. ಮಾಡಬಾಳ, ಗೀತಾ ಅಗ್ನಿ, ಎಂ.ಡಿ. ಗಡೇದ, ಪಿ.ಸಿ. ಮುದಗಲ್ಲ ಶಿಕ್ಷಕರನ್ನು ಸಂಸ್ಥೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಸನ್ಮಾನಿತರ ಪರವಾಗಿ ಪಿ.ಸಿ.ಮುದಗಲ್ಲ ಹಾಗೂ ಎಮ್.ಡಿ. ಗಡೇದ ಹಾಗೂ ಗೀತಾ ಅಗ್ನಿ ಮಾತನಾಡಿದರು. ರಾಧಾಕೃಷ್ಣರನ್ನು ಕುರಿತು ಸುಪ್ರಿಯಾ ದೇವಾಂಗಮಠ ಹಾಗೂ ರಮೇಶ ಬೂದಿಹಾಳ ಮಾತನಾಡಿದರು.
ವೇದಿಕೆಯ ಮೇಲೆ ಮಂಜುನಾಥ ಹರಿಹರ, ಸಿದ್ದಣ್ಣ ಹರ್ತಿ, ಬಸವರಾಜ ಮರಟದ, ಆಶಾ ಎಸ್. ಮಠದ, ಎಸ್.ಎಮ್. ಸೊಬಗಿನ, ಡಿ.ಎಸ್. ಅಂಗಡಿ, ಎಸ್.ಎಚ್. ಚಾಮಲಾಪುರ, ರಾಜೇಶ್ವರಿ ಕಲ್ಮಠ ಉಪಸ್ಥಿತರಿದ್ದರು.
ಅಖಿಲಾ ದೇವಾಂಗಮಠ ವಚನ ಪ್ರಾರ್ಥನೆ ಮಾಡಿದಳು ಮಹೇಶ ಚಿತ್ತವಾಡಗಿ ಸ್ವಾಗತಿಸಿದನು. ಐಶ್ವರ್ಯ ತಾರಿವಾಳ ವಂದಿಸಿದರು. ವಿಂದ್ಯಾದ್ರಿ ಹಿರೇಮಠ ಹಾಗೂ ಸುಷ್ಮಿತಾ ವಸ್ತ್ರದ ಕಾರ್ಯಕ್ರಮ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here