ಸನ್ನಡತೆ: ಹಿಂಡಲಗಾ ಕೇಂದ್ರ ಕಾರಾಗೃಹ ಓರ್ವ ಕೈದಿ ಸೇರಿ ಒಟ್ಟು 253 ಕೈದಿಗಳ ಬಿಡುಗಡೆ

0
17
loading...

 

ಬೆಳಗಾವಿ.18 ರಾಜ್ಯದ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹ ಓರ್ವ ಕೈದಿ ಸೇರಿ ಒಟ್ಟು 7 ಕಾರಾಗೃಹಗಳ 253 ಕೈದಿಗಳಿಗೆ ಸನ್ನಡತೆಯ ಮೇಲೆ ಬಿಡುಗಡೆ ಭಾಗ್ಯ ಲಭಿಸಿದೆ.

ಹಿಂಡಲಗಾ ಕೇಂದ್ರ ಕಾರಾಗೃಹದ ಕೈದಿ, 1654 ಸಂಖ್ಯೆಯ ಗುರುಪುತ್ರಪ್ಪ ಶಿವಲಿಂಗಪ್ಪ ದೊಡ್ಡಗೌಡರ ಬಿಡುಗಡೆ ಭಾಗ್ಯ ಕಂಡ ವ್ಯಕ್ತಿಯಾಗಿದ್ದಾರೆ.

ಸಂಸದ ಸುರೇಶ ಅಂಗಡಿ, ಜಿಲ್ಲಾ ಸತ್ರ ನ್ಯಾಯಾಧೀಶ ಕೃಷ್ಟಭಟ್ಟ,ಜಿಲ್ಲಾಧಿಕಾರಿ ಎನ್ ಜಯರಾಮ್, ಜಿಲ್ಲಾ ಪೊಲೀಸ ವರಿಷ್ಠ ರವಿಕಾಂತೆಗೌಡಾ ಹಾಗೂ ಕಾರಾಗೃಹದ ಅಧೀಕ್ಷರ ಉಪಸ್ಥಿತಿಯಲ್ಲಿ ಬಿಡುಗಡೆ ಪತ್ರ ನೀಡಿ ಗುರುಪುತ್ರಪ್ಪ ಶಿವಲಿಂಗಪ್ಪ ದೊಡ್ಡಗೌಡರ ಅವರನ್ನು ಅಭಿನಂದಿಸಿ ನಾಗರಿಕ ಸಮಾಜದಲ್ಲಿ ಸುಂದರ ಬದುಕು ಕಾಣಲೆಂದು ಶುಭಹಾರೈಸಿ ಬೀಳ್ಕೊಡಲಾಯಿತು.

ರಾಜ್ಯದ ಬೆಂಗಳೂರು ಕಾರಾಗೃಹದ 146 ಕೈದಿಗಳು, ಬೆಳಗಾವಿ ಓರ್ವ ಕೈದಿ, ಧಾರವಾಡದ ನಾಲ್ವರು, ವಿಜಯಪುರದ 08, ಬಳ್ಳಾರಿಯ 24, ಕಲಬುರಗಿಯ 18 ಹಾಗೂ ಮೈಸೂರು ಕಾರಾಗೃಹದ 59 ಕೈದಿಗಳು ಸನ್ನಡತೆಯ ಮೇಲೆ ಬಿಡುಗಡೆ ಭಾಗ್ಯ ಕಂಡಿದ್ದಾರೆ.

loading...

LEAVE A REPLY

Please enter your comment!
Please enter your name here