ಸ್ಮಶಾನ ಭೂಮಿ ಮಂಜೂರು ಮಾಡುವಂತೆ ಒತ್ತಾಯ

0
26
loading...

 

ಬೆಳಗಾವಿ:22 ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುಲ್ಲೋಳಿಹಟ್ಟಿ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ಸ್ಮಶಾನಭೂಮಿ ಮಂಜೂರು ಮಾಡುವಂತೆ ಒತ್ತಾಯಿಸಿ ಮಂಗಳವಾರ ಗ್ರಾಮ ಪಂಚಾಯಿತಿ ಸದಸ್ಯೆ ಅನಿತಾ ಮಾಳಗೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಹುಲ್ಲೋಳಿಹಟ್ಟಿ ಗ್ರಾಮದಲ್ಲಿ ಸುಮಾರು 150 ಮನೆಗಳು ಇದ್ದು, ಅಲ್ಲಿ 600-700 ಜನ ವಾಸಿಸುತ್ತಿದ್ದಾರೆ. ಆದರೆ ದಲಿತ ಸಮುದಾಯಕ್ಕೆ ಸ್ಮಶಾನ ಭೂಮಿ ಇಲ್ಲ. ಯಾರಾದರು ಮರಣವಾದರೆ ಅವರ ಅಂತ್ಯಸಂಸ್ಕಾರ ಮಾಡಬೇಕಾದರೆ ತುಂಬ ಕಷ್ಟವಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾರೂ ಮಂಜೂರು ಮಾಡಿಕೊಟ್ಟಿಲ್ಲ. ಆದ್ದರಿಂದ ತಕ್ಷಣ ಸ್ಮಶಾನಭೂಮಿ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸದಾಶಿವ ಮಾಳಗೆ, ಮಾರುತಿ ಸಾಲಿಮನಿ, ಶಿಡ್ಲಪ್ಪ ಹುಣಸಿಗಿಡದ, ಕೆಂಪಣ್ಣಸಾ ಸಾಲಿಮನಿ, ಶಿವಾನಂದ ಸಾಲಿಮನಿ, ರಾಮಪ್ಪ ಕಾಂಬಳೆ, ಕಾಡಪ್ಪ ಸಂಕೇಶ್ವರ, ಮಾರುತಿ ಮಾಳಗೆ ಸೇರಿದಂತೆ ಇತರರು ಭಾಗವಹಿಸಿದ್ದರು.

ಸಿದ್ಧಾರ್ಥ ನಗರ ಸಮಸ್ಯೆ: ಸ್ಮಶಾನ ಭೂಮಿಯನ್ನು ಮಂಜೂರು ಮಾಡುವಂತೆ ಒತ್ತಾಯಿಸಿ ಮಂಗಳವಾರ ಸಿದ್ಧಾರ್ಥ ಸದ್ಭಾವನ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ದಲಿತ ಸಮುದಾಯದವರಿಗೆ ನಗರದಲ್ಲಿ ಸ್ಮಶಾನ ಭೂಮಿ ಇಲ್ಲ. ಆದ್ದರಿಂದ ಇಲ್ಲಿ ಜನರು ಮರಣವಾದರೆ ಹಳ್ಳಿ ಹಳ್ಳಿಗೆ ಹೋಗಿ ಹೆಣವನ್ನು ಹೂಳುಬೇಕಾಗುವ ಸ್ಥಿತಿ ಬಂದಿದೆ. ಕಾರಣ ಸ್ಮಶಾನ ಭೂಮಿಯನ್ನು ತಕ್ಷಣ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಡಿ.ಕೆ.ಚನ್ನಗೌಡ, ಎ.ಜಿ.ಕೋಲಕಾರ, ಎಚ್.ಎಸ್.ಕಾಂಬಳೆ, ಎಂ.ಡಿ.ಅಸೋದೆ, ಐ.ಬಿ.ತಳವಾರ, ಎಸ್.ಎಲ್.ದೇವರಮಣಿ, ಜೆ.ಎ.ಕಾಂಬಳೆ, ಜೆ.ಆರ್.ಕಾಂಬಳೆ ಸೇರಿದಂತೆ ಸಂಘದ ಕಾರ್ಯಕರ್ತರು ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here