ಸ್ವಚ್ಛ ಭಾರತ ಕನಸ್ಸನ್ನು ನನಸಾಗಿಸಲು ಶ್ರಮಿಸುತ್ತಿರುವ ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯ: ವಿ.ಸಿ. ಚಿನ್ನಪ್ಪಗೌಡರ

0
29
loading...

 

ಗೋಕಾಕ: ಗಾಂಧಿಜೀಯವರ ಸ್ವಚ್ಛ ಭಾರತ ಕನಸ್ಸನ್ನು ನನಸಾಗಿಸಲು ಶ್ರಮಿಸುತ್ತಿರುವ ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯವೆಂದು ನಗರಸಭೆ ಪೌರಾಯುಕ್ತ ವಿ.ಸಿ. ಚಿನ್ನಪ್ಪಗೌಡರ ಹೇಳಿದರು.
ಬುಧವಾರದಂದು ನಗರದ ಸಮುದಾಯ ಭವನದಲ್ಲಿ ನಗರಸಭೆ ಹಾಗೂ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಪೌರ ಕಾರ್ಮಿಕ ದಿನಾಚರಣೆ ಮತ್ತು ಶ್ರೇಷ್ಠ ಪೌರ ಕಾರ್ಮಿಕರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪೌರ ಕಾರ್ಮಿಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮಾಜಿ ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಪೌರ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಜಾರಿಗೆ ತಂದಿದ್ದು ಮಾದರಿಯಾಗಿದೆ. ಸರ್ಕಾರ ಪೌರ ಕಾರ್ಮಿಕರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಸದುಪಯೋಗ ಪಡಿಸಿಕೊಂಡು ನಿಷ್ಠೆಯಿಂದ ಸೇವೆ ಮಾಡಿ ನೆಮ್ಮದಿಯ ಜೀವನ ನಡೆಸುವಂತೆ ಹಾರೈಸಿದರು.
ಸಮಾರಂಭವನ್ನು ನಗರಾಧ್ಯಕ್ಷೆ ಶ್ರೀಮತಿ ಲಗಮವ್ವ ಸುಲಧಾಳ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗಣನೀಯ ಸೇವೆ ಮಾಡಿದ ಪೌರ ಕಾರ್ಮಿಕರನ್ನು ಸತ್ಕರಿಸಲಾಯಿತು. ನಗರಸಭೆ ಸದಸ್ಯ ಝಾಕೀರ ನದಾಫ ಅವರು ಕಾರ್ಮಿಕರಿಗೆ ಉಡುಗೊರೆಯನ್ನು ನೀಡಿದರು.
ವೇದಿಕೆಯಲ್ಲಿ ನಗರಸಭೆ ಸದಸ್ಯರುಗಳಾದ ಪರುಶರಾಮ ಭಗತ, ತಳದಪ್ಪ ಅಮ್ಮಣಗಿ, ಭೀಮಶಿ ಭರಮನ್ನವರ, ಜಯಾನಂದ ಹುಣಶ್ಯಾಳಿ, ಗಿರೀಶ ಖೋತ, ಭಗವಂತ ಹುಳ್ಳಿ,ಸಿದ್ದಪ್ಪ ಹುಚ್ಚರಾಯಪ್ಪಗೋಳ,ಬಸವರಾಜ ಮುಳಗುಂದ, ಮುಖಂಡರಾದ ದುರ್ಗಪ್ಪ ಶಾಸ್ತ್ರಿಗೊಲ್ಲರ, ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ವಿ. ಎಸ್. ತಡಸಲೂರ, ಪರಿಸರ ಅಭಿಯಂತ ಎಮ್.ಎಚ್. ಗಜಾಕೋಶ, ಕರ್ನಾಟಕ ರಾಜ್ಯ ಪೌರ ಸೇವಾ ಕಾರ್ಮಿಕರ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ಆರ್. ಎಸ್. ರಂಗಸುಭೆ ಇದ್ದರು.
ನಗರಸಭೆ ಕಚೇರಿ ವ್ಯವಸ್ಥಾಪಕ ಎಮ್.ಎಚ್.ಅತ್ತಾರ ಸ್ವಾಗತಿಸಿದರು. ಲೆಕ್ಕ ಅಧೀಕ್ಷಕ ಎಮ್.ಎನ್. ಸಗರೇಕರ ನಿರೂಪಿಸಿದರು. ಸಮುದಾಯ ಸಂಘಟಕ ಆರ್. ಎಮ್. ಗಣಾಚಾರಿ ವಂದಿಸಿದರು.

loading...

LEAVE A REPLY

Please enter your comment!
Please enter your name here