ಹಿಂದೂ ಮತ್ತು ಮುಸ್ಲಿಂ ಭಾವೈಕ್ಯತೆಯ ಪ್ರತೀಕ ಮುಸ್ಲಿಮ್ ಸಮುದಾಯದ ಮಹಿಬೂಬ ಶ್ರಾವಣ ಮಾಸದ ಪ್ರಯುಕ್ತ ಮೌನಾನುಷ್ಠಾನ

0
21
loading...

-ಪ್ರಕಾಶ ಎಸ್. ಸುಣಗಾರ.
ಬೀಳಗಿ: ತಾಲೂಕಿನ ಕೋವಳ್ಳಿ ಮತ್ತು ಭಾವಲತ್ತಿ ಗ್ರಾಮಗಳ ಮಧ್ಯದಲ್ಲಿರುವ ವಿಶಾಲ ಗುಡ್ಡದ ಪ್ರದೇಶದಲ್ಲಿ ಗುಡ್ಡದ ತಿಮ್ಮಪ್ಪಣ್ಣ ದೇವಾಲಯದಲ್ಲಿ ಹಿಂದೂ ಮತ್ತು ಮುಸ್ಲಿಮ್ ಭಾವೈಕ್ಯತೆಯ ಪ್ರತೀಕವಾಗಿ ತಾಲೂಕಿನ ನಾಗರಾಳ ಗ್ರಾಮದ ಮಹೆಬೂಬ ಮುಜಾವರ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳವರೆಗೆ (31 ದಿನಗಳೂ) ಲೋಕ ಕಲ್ಯಾಣಕ್ಕಾಗಿ ಮೌನಾನುಷ್ಠಾನ ಕೈಗೊಂಡಿದ್ದಾನೆ ಯಾರ ಜೊತೆಗೂ ಮಾತನಾಡುವದಿಲ್ಲಾ ಬರೆ ಕೈ ಸೊನ್ನೆ ಬಾಯ್ ಸೊನ್ನೆ ಮಾಡಿ ಹೇಳುತ್ತಾನೆ. ಇತನ ಸಹಾಯಕ್ಕಾಗಿ ರೊಳ್ಳಿ ಗ್ರಾಮದ ಮಡಿವಾಳಯ್ಯ ಹಿರೇಮಠ ಸದಾ ಹಿತನ ಸೇವೆಗೆ ನಿಂತಿದ್ದಾನೆ. ಮಹಿಬೂಬ ರುದ್ರಾಕ್ಷಿ ಜಪ ಮಾಡುತ್ತಾ ವಜ್ರಾಸನದಲ್ಲಿ ಕುಳಿತು ಅದೇ ಸ್ಥಿತಿಯಲ್ಲಿ ದಿನಕ್ಕೆ ಐದು ಘಂಟೆ ನಿದ್ದೆ ಮಾಡುತ್ತಾನೆ. ನಿತ್ಯ ಮುಂಜಾನೆ ಮತ್ತು ಸಂಜೆ ಎರಡು ಬಾರಿ ಸ್ನಾನ, ಪೂಜೆ ಮಾಡುವನು.
ಇತನು ಪ್ರತಿನಿತ್ಯ ಎರಡು ಬಾರಿ ಆಹಾರವಾಗಿ ತತ್ರಾಣಿ ಬೀಜದ ರಸ ಮತ್ತು ಒಂದು ಚಮಚೆ ಜೇನು ತುಪ್ಪ ಸೇವಿಸುತ್ತಾನೆ. ಇತನನು ನೋಡಲು ಈ ಗುಡ್ಡದ ತಿಮ್ಮಪ್ಪನಿಗೆ ನಿತ್ಯ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಇಲ್ಲಿಗೆ ಬರುವ ಭಕ್ತರಿಗೆ ಹತ್ತಿರದ ಗ್ರಾಮದ ಭಕ್ತರಿಂದ ನಿತ್ಯ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಹತ್ತಿರದ ಕೋವಳ್ಳಿ ಗ್ರಾಮದದವರಿಂದ ಪ್ರತಿದಿನ ಸಂಜೆ ಭಜನಾ ಪದಗಳು ಜರುಗುತ್ತವೆ.
ಮುಸ್ಲಿಮ್ ಸಮುದಾಯ ಸೇರಿದ ಇವನು ಕಾಶೀಲಿಂಗೇಶ್ವರನ ಪರಮಭಕ್ತ ಇತನಿಗೆ ಹಿಂದೂ ದೇವರು ಮತ್ತು ದೇವಾಲಯಗಳ ಮೇಲೆ ಅಪಾರವಾದ ಪ್ರೀತಿ, ನಂಬಿಕೆ ಇದೆ. ಮಹೆಬೂಬನು ಯುಕೆಪಿಯಲ್ಲಿ ನೌಕರನಾಗಿದ್ದಾನೆ. ತಾಲೂಕಿನ ನಾಗರಾಳ, ಕೊಂತಿಕಲ್ ಮತ್ತು ಬೀಳಗಿ ಈ ಮೂರು ಗ್ರಾಮಗಳ ಮದ್ಯದ ಸೀಮೆಯಲ್ಲಿ ಒಂದು ವಿಶಾಲ್ ದೇವಸ್ಥಾನ ನಿರ್ಮಾಣದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಮೂರು ಗ್ರಾಮದ ಹಿರಿಯರ ಸಹಾಯದಿಂದ ನಿರ್ಮಿಸಿದ್ದಾನೆ. ಈ ದೇವಸ್ಥಾನದ ಉದ್ಘಾಟನೆ ಪ್ರಯುಕ್ತ ಉತ್ತರ ಕರ್ನಾಟಕದ ಜವಾರಿ ಭೋಜನ ಮಾಡಿಸಿ ಸಾವಿರಾರು ಭಕ್ತರನ್ನು ಸೇರಿಸಿ ಭಜನಾ ಪದಗಳ ಕಲಾವಿದರನ್ನು ಸೇರಿಸಿ ಜಿಲ್ಲಾ ಮಟ್ಟದ ಭಜನಾ ಪದಗಳ ಸಮಾರಂಭ ಆಯೋಜಿಸಿ ಇಲ್ಲಿಯ ಜನರಿಂದ ಶಬ್ಭಾಶಗಿರಿ ಪಡೆದಿದ್ದರು.
ಇಂತವರ ಮನದಲ್ಲಿ ಜಾತಿ ಮತಗಳು ಅಪ್ಪಿತಪ್ಪಿ ಸುಳಿಯುವದಿಲ್ಲಾ. ಇವನಲ್ಲಿ ಭಾರತೀಯ ಸಂಸ್ಕøತಿಯ ಭಾವನೆಗಳು ಇರುವದು ಕಂಡುಬರುತ್ತದೆ. ಇತನು ಪ್ರತಿ ವರ್ಷ ದೂರದ ಹಿಂದೂ ಧಾರ್ಮಿಕ ಸ್ಥಳಗಳಿಗೆ ತೆರಳಿ ತನ್ನ ಭಕ್ತಿಯನ್ನು ಆ ದೇವರಲ್ಲಿ ಸಮರ್ಪಿಸುತ್ತಾನೆ.

loading...

LEAVE A REPLY

Please enter your comment!
Please enter your name here