ಅರಣ್ಯ ಭೂಮಿ ಅತಿಕ್ರಮಣದಾರರಿಗೆ ಶೀಘ್ರ ಪಟ್ಟಾ ನೀಡುವಂತೆ ನಾಗರಿಕ ವೇದಿಕೆ ಆಗ್ರಹ

0
25
loading...

30bkl2

ಭಟ್ಕಳ,31 : ಭಟ್ಕಳ ಸೇರಿದಂತೆ ಜಿಲ್ಲೆಯಲ್ಲಿ ಅರಣ್ಯಭೂಮಿ ಅತಿಕ್ರಮಣದಾರರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಪಟ್ಟಾ ನೀಡುವ ಕಾರ್ಯ ವಿಳಂಬವಾಗುತ್ತಿರುವುದನ್ನು ಖಂಡಿಸಿ ಶೀಘ್ರದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ನಾಗರಿಕ ವೇದಿಕೆಯ ಗೌರವಾಧ್ಯಕ್ಷ ದತ್ತಾತ್ರಯ ನಾಯ್ಕ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ಕಳೆದ ಹಲವು ವರ್ಷಗಳಿಂದ ಅತಿಕ್ರಮಣದಾರರು ಅರಣ್ಯ ಭೂಮಿಯನ್ನು ಅತಿಕ್ರಮಿಸಿ ಅದರಲ್ಲಿ ವಾಸ್ತವ್ಯ ಮನೆ, ಗಿಡಮರಗಳನ್ನು ಬೆಳೆಸಿ ಜೀವನ ಸಾಗಿಸುತ್ತಿದ್ದಾರೆ. ಈ ಅತಿಕ್ರಮಣದಾರರು ಕಳೆದ ಮೂರು ವರ್ಷಗಳ ಹಿಂದೆಯೇ ಅರಣ್ಯ ಹಕ್ಕು ಕಾಯ್ದೆಯಡಿಲ್ಲಿ ಸಕ್ರಮಕ್ಕಾಗಿ ಅರ್ಜಿ ಹಾಕಿದ್ದು, ಇನ್ನೂ ತನಕ ಸಮರ್ಪಕ ಅರ್ಜಿ ವಿಲೇವಾರಿ ಹಾಗೂ ಜಾಗದ ಜಿಪಿಎಸ್ ಸರ್ವೆ ಕಾರ್ಯ ಆಗಿಲ್ಲ. ಅರಣ್ಯ ಹಕ್ಕು ಕಾಯ್ದೆಯಲ್ಲಿರುವ ಕೆಲವು ಅಂಶಗಳಿಂದ ಅರಣ್ಯ ಅತಿಕ್ರಮಣದಾರರಿಗೆ ತೊಂದರೆಯಾಗಿದೆ.

ಇದನ್ನು ತಿದ್ದುಪಡಿ ಮಾಡಬೇಕೆಂದು ಹಾಗೂ ಅರ್ಜಿ ಸಲ್ಲಿಸಿರುವ ಅತಿಕ್ರಮಣದಾರರಿಗೆ ಪಟ್ಟಾ ನೀಡಬೇಕೆಂದು ಆಗ್ರಹಿಸಿ ನಾಗರಿಕ ವೇದಿಕೆಯಿಂದ ಸಹಾಯಕ ಕಮೀಷನರರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದ ಅವರು ಬಡ ಅತಿಕ್ರಮಣದಾರರಿಗೆ ಕೂಡಲೇ ಅರಣ್ಯ ಹಕ್ಕು ಕಾಯ್ದೆಯಡಿ ಪಟ್ಟಾ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸದ್ಯದಲ್ಲೇ ಮನವಿ ಸಲ್ಲಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ವಿದ್ಯುತ್ ಕಡಿತದ ಬಗ್ಗೆಯೂ ಪ್ರಸ್ತಾಪಿಸಿದ ಅವರು ಉತ್ತರ ಕನ್ನಡ ಜಿಲ್ಲೆ ವಿದ್ಯುತ್ ಯೋಜನೆಗಾಗಿ ತ್ಯಾಗ ಮಾಡಿದೆ. ಆದರೆ ಇಲ್ಲಿ ವಿದ್ಯುತ್ ಕಡಿತಕ್ಕೆ ವಿನಾಯತಿ ನೀಡುವುದನ್ನು ಬಿಟ್ಟು ದಿನಕ್ಕೆ 10ರಿಂದ 11 ತಾಸು ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಇದರಿಂದ ರೈತರು, ವಿದ್ಯಾರ್ಥಿಗಳು, ಉದ್ಯಮ ನಡೆಸುವವರು ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆಯೂ ಕೂಡ ನಾಗರಿಕವೇದಿಕೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದೆ ಎಂದೂ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಕುಮಾರ ನಾಯ್ಕ, ಉಪಾಧ್ಯಕ್ಷ ಈರಾ ನಾಯ್ಕ, ದೇವಯ್ಯ ನಾಯ್ಕ, ಮಂಜು ನಾಯ್ಕ ಮುಂತಾದವರಿದ್ದರು.

loading...

LEAVE A REPLY

Please enter your comment!
Please enter your name here