ಅ.29 ರಿಂದ 31ರ ವರೆಗೆ ಲೋಕಾಯುಕ್ತ ತನಿಖೆ

0
15
loading...

ಹಳಿಯಾಳ: ಅರ್ಲವಾಡ, ಮದ್ನಳ್ಳಿ, ಕೆಸರೊಳ್ಳಿ ಮೊದಲಾದ ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸದೇ ಬಿಲ್ ತೆಗೆದಿದ್ದಾರೆ ಹಾಗೂ ನಿರ್ವಹಿಸಲಾಗಿರುವ ಕಾಮಗಾರಿಗಳು ಕಳಪೆ ಮಟ್ಟದ್ದಾಗಿವೆ ಎಂದು ಮಾಡಿದ ಆಪಾದನೆಯ ದೂರಿನ ಬಗ್ಗೆ ತನಿಖೆ ನಡೆಸಲು ಲೋಕಾಯುಕ್ತ ಅಧಿಕಾರಿಯೊಬ್ಬರು ಅ. 29 ರಿಂದ ಮೂರು ದಿನಗಳ ಕಾಲ ಹಳಿಯಾಳಕ್ಕೆ ಆಗಮಿಸಲಿದ್ದಾರೆ.
ಅರ್ಲವಾಡದ ನಾರಾಯಣ ದಡ್ಡಿ ಎಂಬುವವರು ಜಿಲ್ಲಾ ಪಂಚಾಯತ ಇಂಜಿನೀಯರಿಂಗ್ ಹಳಿಯಾಳ ಉಪವಿಭಾಗದ ವತಿಯಿಂದ 2013 ರಿಂದ 2014ನೇ ಸಾಲಿನ 13ನೇ ಹಣಕಾಸು ಯೋಜನೆಯಡಿ ಕಾಮಗಾರಿಗಳಲ್ಲಿ ಅಕ್ರಮ ಎಸಗಲಾಗಿದೆ ಎಂದು ನೀಡಿದ ದೂರಿನ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಬೆಂಗಳೂರು ಮುಖ್ಯ ಅಭಿಯಂತರರ ಕಚೇರಿಯಿಂದ ತನಿಖಾಧಿಕಾರಿಯಾಗಿ ಆನಂದ ಸಿ.ಎನ್. ಆಗಮಿಸಲಿದ್ದಾರೆ. ದೂರುದಾರರಾದ ನಾರಾಯಣ ದಡ್ಡಿ ಇವರು ಆ ದಿನಗಳಂದು ಕಾಮಗಾರಿ ಸ್ಥಳಗಳಲ್ಲಿ ಹಾಜರಿದ್ದು ತನಿಖಾಧಿಕಾರಿಗಳನ್ನು ಭೇಟಿ ಮಾಡಿ ಹೆಚ್ಚಿನ ದಾಖಲೆಗಳಿದ್ದಲ್ಲಿ ಹಾಜರುಪಡಿಸಿ ಸ್ಥಳ ಪರಿಶೀಲನೆಗೆ ಸಹಕರಿಸುವಂತೆ ಲೋಕಾಯುಕ್ತ ಕಾರ್ಯಾಲಯದ ತಾಂತ್ರಿಕ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನೀಯರ್ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here