ಉಗಾರ ಹೆಸ್ಕಾಂ ಕಛೇರಿಗೆ ರೈತರ ಮುತ್ತಿಗೆ: ಅಧಿಕಾರಿಗಳನ್ನು 4 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಧರಣಿ

0
12
loading...

ಕಾಗವಾಡ,26: ಇಲ್ಲಿಯ ಬಿ.ಕೆ ಮತ್ತು ಖುರ್ದ ಗ್ರಾಮದ ರೈತರು ಅಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿದ್ದರಿಂದ ರೊಚ್ಚಿಗೆದ್ದ ರೈತರು ಉಗಾರ ಹೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ಕಛೇರಿಯಿಂದ ಹೊರಗೆ ತಳ್ಳಿ ಬಿಸಿಲಿನಲ್ಲಿ ನಿಲ್ಲಿಸಿ ಇವರಿಗೆ ಹಗಲು-ರಾತ್ರಿ ನಾಲ್ಕು ಗಂಟೆ ಕಾಲವಾಗುತ್ತಿರುವ ವಿದ್ಯುತ್ ಪೂರೈಕೆಯಲ್ಲಿ 2 ಗಂಟೆ ಸಿಂಗಲ್ ವಿದ್ಯುತ್ ಪೂರೈಕೆ ಮಾಡುವ ಅಧಿಕಾರಿಗಳಿಂದ ಒಪ್ಪಿಗೆ ಪಡೆದ ನಂತರ ಮುಸ್ಕರ ಕೈ ಬಿಟ್ಟಿರುವ ಘಟನೆ ಉಗಾರದಲ್ಲಿ ಸಂಭವಿಸಿದೆ.
ಉಗಾರ ಹೆಸ್ಕಾಂ ಕಾರ್ಯಾಲಯದ ಎದುರು ಸೋಮವಾರ ಬೆಳಿಗ್ಗೆ ಎರಡು ಗ್ರಾಮದ ರೈತರು ಅಸಮರ್ಪಕವಾಗಿ ವಾಗುತ್ತಿರುವ ವಿದ್ಯುತ್ ಪೂರೈಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ರೈತರು ನಾವು ಬದುಕುವುದೋ ಅಥವಾ ಸಾಯುವುದು ಈ ನಿರ್ಧಾರ ನಿವೇ ಅಧಿಕಾರಿಗಳು ತೆಗೆದುಕೊಳ್ಳಿರಿ ಎಂದು ಹೇಳಿ ಆಕ್ರೋಶ ವ್ಯಕ್ತ ಪಡಿಸಿದರು. ರೈತ ಮುಖಂಡರಾದ ಶೀತಲ್ ಪಾಟೀಲ್, ವಸಂತ ಖೋತ, ರಾಹುಲ್ ಶಾಹ, ಗ್ರಾಪಂ ಅಧ್ಯಕ್ಷ ಜಮಖಾನೆ, ಉಪಾಧ್ಯಕ್ಷ ಪ್ರಕಾಶ ಸಾಜನೆ, ಶ್ರೀಕಾಂತ ಪಾಟೀಲ, ಅಜೀತ ನರಸಗೌಡರ ಸೇರಿದಂತೆ ಅನೇಕ ರೈತರು ವಾದ-ವಿವಾದ ಮಾಡಿ ಎರಡು ಗಂಟೆ ವಿದ್ಯುತ್ ಪೂರೈಕೆ ಮಾಡುತ್ತಿದ್ದಿರಿ ಸುಮಾರು 5 ರಿಂದ 8 ಕಿ ಮೀ ಅಂತರದ ವರೆಗೆ ಏತ ನೀರಾವರಿ ಯೋಜನೆಗಳಿದ್ದು, ಈ ಪೈಪಗಳಲ್ಲಿ ನೀರು ಸಾಗಿಸಲು ಅರ್ಧ ಗಂಟೆ ಕಾಲ ಬೇಕು ಇದರಿಂದ ಯಾವುದೇ ವ್ಯವಸ್ಥೆ ಆಗುವುದಿಲ್ಲ, ನಮ್ಮ ಬೆಳೆಗಳು ನೀರು ಇಲ್ಲದೇ ಬತ್ತಿಹೊಗುತ್ತಿವೆ. ಕಣ್ಣುಮುಂದೆ ಬೆಳೆಗಳು ನಾಶವಾಗುವುದು ಕಂಡು ನಾವು ವಿಷ ಸೇವಿಸುವ ಅಷ್ಟೆ ಬಾಕಿ ಇದೆ. ಇಂಧನ ಸಚಿವರು 6 ಗಂಟೆಯ ಕಾಲ ವಿದ್ಯುತ್ ಪೂರೈಕೆ ಮಾಡುವ ಬಗ್ಗೆ ಹೇಳುತ್ತಿದ್ದಾರೆ. ತಾವು ಕೇವಲ ಹಗಲು 2 ರಾತ್ರಿ 2 ಗಂಟೆ ವಿದ್ಯುತ್ ಪೂರೈಸುತ್ತಿದ್ದಿರಿ ಎಂದು ಹೇಳಿ ವಾದ ಮಾಡಿದರು.
ರೈತ ಮುಖಂಡರು ಹೆಸ್ಕಾಂ ಇಲಾಖೆ ನೀವು ಪ್ರತಿದಿನ ರಾತ್ರಿ 6 ಗಂಟೆ ವಿದ್ಯುತ್ ಪೂರೈಕೆ ಮಾಡಿರಿ ಎಂದು ಪಟ್ಟ ಹಿಡಿದರು. ಆಗ ಅಥಣಿ ಕಾರ್ಯನಿರ್ವಾಹಕರಾದ ಕೆ.ಜಿ ಹಿರೆಮಠ, ಉಗಾರ ವಿಭಾಗೀಯ ಅಭೀಯಂತರಾದ ಎಸ್.ಎಮ್ ರಾಥೋಡ ಇವರು ಬೇಡಿಕೆ ಒಪ್ಪದೆ ಕುಡಚಿ 220 ಕೆವ್ಹಿ ಸಬ್‍ಸ್ಟೆಷನ್ ವ್ಯಾಪ್ತಿಯಲ್ಲಿ 110 ಕೆವ್ಹಿ ವಿಭಾಗಿಯ ಸ್ಟೇಷನ್‍ಗಳಾದ ಉಗಾರ, ಐನಾಪೂರ, ಕಾಗವಾಡದಲ್ಲಿಯ ಗ್ರಾಮಗಳಿಗೆ ವಿದ್ಯುತ್ ಪೂರೈಸಲು 60 ಮೇಗಾ ವ್ಯಾಟ ವಿದ್ಯುತ್ ಅವಶ್ಯಕತೆ ಇದೆ. ಆದರೆ ಕೇವಲ 15 ರಿಂದ 20 ಮೇಗಾ ವ್ಯಾಟ ವಿದ್ಯುತ್ ಪೂರೈಕೆವಾಗುತ್ತಿದೆ. ಈ ಕಾರಣ ಹಗಲು ಮತ್ತು ರಾತ್ರಿ ತಲಾ 2 ಗಂಟೆ ವಿದ್ಯುತ್ ಪೂರೈಸಲಾಗುತ್ತಿದೆ ಎಂದರು. ರೈತರು ಅಧಿಕಾರಿಗಳೊಂದಿಗೆ ವಾದ ವಿವಾದ ಮಾಡಿದ ನಂತರ ಪ್ರತಿದಿನ ರಾತ್ರಿ 10.00 ಗಂಟೆಯಿಂದ 4 ತಾಸು ಥ್ರೀ ಫೆಸ್ ಮತ್ತು 2 ಗಂಟೆ ಸಿಂಗಲ್ ಫೆಸ್ ಹೀಗೆ 6 ಗಂಟೆ ವಿದ್ಯುತ್ ಪೂರೈಕೆ ಮಾಡಲು ಒಪ್ಪಿಕೊಂಡರು. ಈ ವೇಳೆ ರೈತರಾದ ಅಪ್ಪಾಸಾಬ ಖುರಪೆ, ಸಚೀನ ಕುಸನಾಳೆ, ರುಕ್ಕಮೋದ್ದಿನ್ ಜಮಖಾನ, ಅಣ್ಣಾಸಾಬ ಖೋತ, ಮನೋಜ ಕುಸನಾಳೆ, ಲಕ್ಷ್ಮಣ ಜಾದವ, ಸಂದೀಪ ಕಾಟಕರ, ಪ್ರವೀಣ ಹೊಸುರೆ, ರಾಮಚಂದ್ರ ಥೋರುಸೆ, ಬಾಬು ಕಟಗೇರಿ, ಅಣ್ಣಾಸಾಬ ನಂದಗಾಂವೆ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here