ಎರಡು ಕೋಮುಗಳ ಮಧ್ಯೆ ಗುಂಪು ಘರ್ಷಣೆ

0
28
loading...

ಗೋಕಾಕ.08: ಗಣೇಶ ವಿಸರ್ಜನೆ ಸಂದರ್ಭದಲ್ಲಿ ಎರಡು ಕೋಮುಗಳ ಮಧ್ಯೆ ಗುಂಪು ಘರ್ಷಣೆಗೀಡಾಗಿ ಪ್ರಕ್ಷುಬ್ಧ ವಾತಾವರಣಕ್ಕೆ ಕಾರಣವಾಗಿದ್ದ ಕೌಜಲಗಿ ಗ್ರಾಮದ ಕೋಮು ಗಲಭೆ ಪ್ರಕರಣ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಡೆಸಿದ ಸಂಧಾನದಿಂದ ಪ್ರಕರಣ ಸುಖಾಂತ್ಯ ಕಂಡಿದೆ.
ಗುರುವಾರದಂದು ತಮ್ಮ ಗೃಹ ಕಛೇರಿ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಎರಡೂ ಕೋಮುಗಳ ಹಿರಿಯರ ಉಪಸ್ಥಿತಿಯಲ್ಲಿ ಮಧ್ಯಸ್ಥಿಕೆ ವಹಿಸಿದ ಶಾಸಕರು, ಮುಂದೆ ಇಂತಹ ಅಹಿತಕರ ಘಟನೆಗಳಿಗೆ ಎಂದೂ ಅವಕಾಶ ಮಾಡಿಕೊಡಬೇಡಿ. ಜನರ ನೆಮ್ಮದಿ ಹಾಳು ಮಾಡದೇ ಸುಖ-ಶಾಂತಿಯಿಂದ ಬದುಕುವಂತೆ ಮನವಿ ಮಾಡಿಕೊಂಡರು.
ಹಿಂದಿನ ಎಲ್ಲ ಕಹಿ ಘಟನೆಗಳನ್ನು ಇಲ್ಲಿಗೆ ಮರೆತುಬಿಡಿ. ಮುಂದೆ ಇಂತಹ ಗಲಭೆಗಳಿಗೆ ಎಂದೂ ಪ್ರಚೋದಿಸುವ ಕೆಲಸ ಹಿರಿಯರು ಮಾಡಬೇಡಿ. ಅಣ್ಣ-ತಮ್ಮಂದಿರರಂತೆ ಬದುಕಿ. ದ್ವೇಷ, ಅಸೂಯೆ ಹೊಡೆದಾಕಿ. ಪ್ರೀತಿ, ಮಮತೆ ಹಾಗೂ ಸಹೋದರತ್ವ ಭಾವನೆಯಿಂದ ಬದುಕಿ ಸಮಾಜಕ್ಕೆ ಆದರ್ಶಪ್ರಾಯರಾಗಿರಿ ಎಂದು ಎರಡೂ ಕೋಮಿನ ಮುಖಂಡರಿಗೆ ಕಿವಿಮಾತು ಹೇಳಿದರು. ಅರಭಾವಿ ಮತಕ್ಷೇತ್ರದಲ್ಲಿ ಇಂತಹ ಕೋಮು ಗಲಭೆ ಎಂದಿಗೂ ನಡೆದಿರಲಿಲ್ಲ. ಮತಕ್ಷೇತ್ರದಲ್ಲಿರುವ ಎಲ್ಲ ಸಮಾಜ ಬಾಂಧವರು ಪರಸ್ಪರ ಸಹೋದರತ್ವದಿಂದ ಬದುಕುತ್ತಿದ್ದಾರೆ. ರಾಜ್ಯಕ್ಕೆ ಅರಭಾವಿ ಮತಕ್ಷೇತ್ರ ಕೋಮು ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ. ಪರಸ್ಪರ ಭಾವೈಕ್ಯತೆಯಿಂದ ಬದುಕಿರಿ ಎಂದು ಕೌಜಲಗಿ ಗ್ರಾಮದ ಎರಡೂ ಕೋಮುಗಳ ಮುಖಂಡರಿಗೆ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಶಾಸಕರ ಮದ್ಯಸ್ಥಿಕೆಯಿಂದ ಪ್ರಕರಣ ಸುಖಾಂತ್ಯ ನಂತರ ಎರಡೂ ಕೋಮಿನವರು ಪರಸ್ಪರ ಹಸ್ತಲಾಘವ ಮಾಡಿದರು. ಉಭಯ ಕೋಮಿನ ಮುಖಂಡರು ಶಾಸಕರನ್ನು ಅಭಿನಂದಿಸಿ, ಕೃತಜ್ಞತೆ ಸಲ್ಲಿಸಿದರು.
ಮಹಾದೇವಪ್ಪ ಭೋವಿ, ಅಮೀರಸಾಬ ಮುಲ್ತಾನಿ, ರಾಜೇಂದ್ರ ಸಣ್ಣಕ್ಕಿ, ನಸರುದ್ಧೀನ ಮುಲ್ತಾನಿ, ಅಶೋಕ ಪರುಶೆಟ್ಟಿ, ಜಕೀರ ಜಮಾದಾರ, ಪರಮೇಶ್ವರ ಹೊಸಮನಿ, ಲಾಡಸಾಬ ಮುಲ್ತಾನಿ, ಸಣ್ಣಪ್ಪ ಭೋವಿ, ಬಾಬುಸಾಬ ಬಳಿಗಾರ, ಮಹೇಶ ಪಟ್ಟಣಶೆಟ್ಟಿ, ನಿಜಾಮಸಾಬ ಜಮಾದಾರ, ಬಸವರಾಜ ಲೋಕನ್ನವರ, ಮಲೀಕ ಹುಣಶ್ಯಾಳ, ಅಡಿವೆಪ್ಪ ದಳವಾಯಿ, ಮೀರಾಸಾಬ ಮುಲ್ಲಾ, ಅಶೋಕ ಉದ್ದಪ್ಪನವರ, ಶಿವಾನಂದ ಲೋಕನ್ನವರ, ಅಲ್ಲಾಭಕ್ಷ ಹುನ್ನೂರ, ಸುಭಾಷ ಕೌಜಲಗಿ, ದಸ್ತಗೀರಸಾಬ ಮುಲ್ತಾನಿ, ಲಾಲಸಾಬ ಬಿಜಾಪೂರ ಸೇರಿದಂತೆ ಎರಡೂ ಕೋಮಿನ ಮುಖಂಡರುಗಳು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here