ಎಸ್.ಜೆ.ಜಿ.ಎಂ.ಐ.ಟಿ.ಐ.ದಲ್ಲಿ “ಎನ್.ಎಸ್.ಎಸ್.ದಿನಾಚರಣೆ

0
23
loading...

ಇಳಕಲ್ಲ : ಇಲ್ಲಿಯ ಶ್ರೀ ಜಗದ್ಗುರು ಗಂಗಾಧರ ಮೂರುಸಾವಿರಮಠ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಎನ್.ಎಸ್.ಎಸ್.ಪ್ರತಿಜ್ಞಾವಿಧಿಯನ್ನು ಸಂಸ್ಥೆಯ ಚೇರಮನ್ನ ಅರುಣಕುಮಾರ ಬಿಜ್ಜಲ ಬೋದಿಸಿದರು.
ದೇಶ ಹಾಗೂ ಸಂವಿಧಾನ ಕುರಿತು ಮಾತನಾಡಿದ ಅವರು ಎನ್,ಎಸ್,ಎಸ್, ಅಧಿಕಾರಿಗಳು ತಮ್ಮ ಜೀವನವನ್ನೇ ಆದರ್ಶವನ್ನಾಗಿ ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಎಸ್.ವ್ಹಿ.ಎಂ. ಮಹಾವಿದ್ಯಾಲಯದ ಉಪನ್ಯಾಸಕ ಎಸ್.ವ್ಹಿ.ಕಂಬಿ ಮಾತನಾಡಿ ಎನ್.ಎಸ್.ಎಸ್. ಹುಟ್ಟು ಅದರ ಬೆಳವಣಿಗೆ ಮತ್ತು ಸಮಾಜದಲ್ಲಿ ಅದರ ಮಹತ್ವ ಕುರಿತು ವಿವರವಾಗಿ ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯ ಕೆ.ಎನ್.ಮಧುರಕರ್ ಮಾತನಾಡಿ ತರಬೇತಾರ್ಥಿಗಳಲ್ಲಿ ಸೇವಾ ಮನೋಬಾವನೆಯನ್ನು ರೂಡಿಸಿಕೊಳ್ಳಲು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಅಧಿಕಾರಿ ಎಂ.ವ್ಹಿ.ಕಂದಕೂರ, ತರಬೇತಿ ಅಧಿಕಾರಿ ಡಬ್ಲು.ಎಚ್.ಢಾಲಾಯತ್. ಹಾಜರಿದ್ದರು.ಆರ್.ಎಚ್.ಹಡಗಲಿ. ಪ್ರಾರ್ಥಿಸಿದರು, ಬಿ.ವ್ಹಿ.ಅಂಗಡಿ. ಸ್ವಾಗತಿಸಿದರು, ಎನ್.ಆರ್.ಹಡಗಲಿ ವಂದಿಸಿದರು.ಬೋಧಕರಾದ ಎಸ್.ಬಿ.ಹಿರೇಮಠ. ಕಾರ್ಯಕ್ರಮವನ್ನು ನಿರೂಪಿಸಿದರು,

loading...

LEAVE A REPLY

Please enter your comment!
Please enter your name here