ಕನ್ನಡಿಗರೆಲ್ಲರೂ ಕನ್ನಡದ ಬಗ್ಗೆ ಸ್ವಾಭಿಮಾನ ಹೊಂದಬೇಕು : ಗೋಪಾಲಕೃಷ್ಣ ಬೇಕಲ್

0
20
loading...

29ylpjpg1
ಯಲ್ಲಾಪುರ,30:ಕನ್ನಡಿಗರೆಲ್ಲರೂ ಕನ್ನಡದ ಬಗ್ಗೆ ಸ್ವಾಭಿಮಾನ ಹೊಂದಬೇಕು.ನಮ್ಮ ಮನೆ,ಪರಿಸರದಲ್ಲಿ ಕನ್ನಡದಲ್ಲಿ ಮತನಾಡಬೇಕು.ಕನ್ನಡ ಗೊತ್ತಿದ್ದೂ ಕನ್ನಡದಲ್ಲಿ ಮಾತನಾಡಲು ಹಿಂಜರಿದರೆ ತಾಯ್ನಾಡಿಗೆ ದ್ರೋಹ ಬಗೆದಂತೆ,ಈ ನಡುವೆ ಕನ್ನಡವನ್ನು ಉಳಿಸುವ ಕೆಲಸ ಆಗಬೇಕೆಂದು ಜಿಲ್ಲಾ ಜಂಟಿ ಕೈಗಾರಿಕಾ ನಿರ್ದೇಶಕ ಗೋಪಾಲಕೃಷ್ಣ ಬೇಕಲ್ ಹೇಳಿದರು.
ತೇಲಂಗಾರದಲ್ಲಿ ಕಸಾಪ ಜಿಲ್ಲಾ ಘಟಕ,ತಾಲೂಕು ಘಟಕ ,ಮೈತ್ರಿ ಕಲಾ ಬಳಗ ಏರ್ಪಡಿಸಿದ್ದ ಕನ್ನಡ ವರ್ಷಾಚರಣೆ ಕಾರ್ಯಕ್ರಮದ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡುತ್ತದ್ದರು. ಪರಭಾಷಾ ಹಾವಳಿಯ ನಡುವೆ ಕನ್ನಡವನ್ನು ಅಲಕ್ಷಿಸಲಾಗುತ್ತಿದೆ. ಎನ್ನುವ ಆರೋಪ ಕೇಳಿ ಬರುತ್ತಿದ್ದುಕನ್ನಡದ ಉದ್ಧಾರ ಹೇಗೆ ಸಾಧ್ಯ ಎಂಬ.ಚಿಂತನೆ ನಡೆಯಬೇಕು.ಪರಭಾಷೆಯ ವ್ಯಾಮೋಹದ ನಮ್ಮ ಅಂತಃಸ್ಸತ್ವ ಎಲ್ಲವನ್ನೂ ನುಂಗಿ ಹಾಕುತ್ತಿದೆ.ಇಂಗ್ಲೀಷ್‍ನ ಅತಿಯಾದ ಬಳಕೆ ಕನ್ನಡಕ್ಕೆ ಮಾರಕವಾಗುತ್ತಿದೆ.ಎಂದರು.
ಕಸಾಪ ಅಧ್ಯಕ್ಷ ಶ್ರೀಂಗ ಕಟ್ಟಿ ಅಧ್ಯಕ್ಷತೆ ವಹಿಸಿ ಭಾಷಾವಾರು ಪ್ರಾಂತ್ಯ ರಚನೆ ಆದಾಗಿನಿಂದಲೂ ಕನ್ನಡದ ಅವಗಣನೆ ಆಗುತ್ತಿದೆ.ಕನ್ನಡ ಭಾಷೆ ,ನಾಡು -ನುಡಿ ನಮ್ಮ ಅವಿಭಾಜ್ಯ ಅಂಗವಾಗಬೇಕು.ಅದೆಲ್ಲ ಬಿಟ್ಟು ಬೇರೆ ಭಾಷೆಯೇ ಶ್ರೇಷ್ಠ ಎಂದು ಹೊರಟರೆ ಕನ್ನಡವನ್ನು ಮರೆತ ಹಾಗೆ.ಮಾತೃಭಾಷೆಯಲ್ಲಿ ಕಲಿಕೆ ಮಕ್ಕಳ ಗ್ರಹಿಕೆ ಹೆಚ್ಚುತ್ತದೆ.ಕನ್ನಡತನ ಬಿಟ್ಟು ಬೇರೆ ಭಾಷೆಯ ಬೆನ್ನು ಹತ್ತವುದು ಕನ್ನಡಕ್ಕೆ ಅಪಾಯ.ಸಾಹಿತ್ಯದ ಮೂಲಕ ಮನಸ್ಸನ್ನು ಕಟ್ಟುವ ಕೆಲಸ ಆಗಬೇಕು, ಮನಸ್ಸನ್ನು ಕೆಡಿಸುವ ಕೆಲಸ ಆಗಬಾರದು.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರವಾಗಬಾರದು.ನಮ್ಮ ಸ್ವಾತಂತ್ರ್ಯದ ಜೊತೆಗೆ ಬೇರೆಯವರ ಸ್ವಾತಂತ್ರ್ಯದ ಹರಣ ಆಗಬಾರದು. ಭಾಷೆ ಮನಸ್ಸನ್ನು ಬೆಸೆಯುತ್ತದೆ ಮೇಲು ,ಕೀಳೆಂಬ ಅಂತರ ಕಡಿಮೆ ಮಾಡುತ್ತದೆ ಎಂದರು.
ರಂಗ ಸಹ್ಯಾದ್ರಿ ಅಧ್ಯಕ್ಷ ಡಿ.ಎನ್.ಗಾಂವ್ಕರ,ಇಡಗುಂದಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರೇಮಾನಂದ ನಾಯ್ಕ,ಗ್ರಾ.ಪಂ ಸದಸ್ಯ ಜಿ.ಆರ್.ಭಾಗ್ವತ ಇದ್ದರು.ಮೈತ್ರಿ ಕಲಾ ಬಳಗದ ಅಧ್ಯಕ್ಷ ಗಣಪತಿ ಕಂಚಿಪಾಲ ನೊರೂಪಿಸಿರು.ತಿಮ್ಮಣ್ಣ ಭಟ್ಟ ವಂದಿಸಿದರು.

loading...

LEAVE A REPLY

Please enter your comment!
Please enter your name here