ಕಪ್ಪಲಗುದ್ದಿ ಗ್ರಾಮ ಪಂಚಾಯತ, ಸಿಂಪಾಲು ಮಹಿಳೆಯರು, ಮಹಿಳಾ ಸದಸ್ಯರ ಕಾರೂ! ಬಾರೂ..

0
70
loading...

ಶಿವಾಜಿ ಮೇತ್ರಿ
ಪಾಲಭಾಂವಿ.08: ರಾಯಬಾಗ ತಾಲೂಕಿನಲ್ಲಿಯೇ ಅಂಡಮಾನ ನಿಕೋಬಾರ ನಂತಿರುವ ಕುಗ್ರಾಮವೇ? ಕಪ್ಪಲಗುದ್ದಿ ಗ್ರಾಮ. ತಾಲೂಕಿನಿಂದ ಪೂರ್ವಭಾಗಕ್ಕೆ ಈ ಗ್ರಾಮವು 35 ಕೀ.ಮಿ ಅಂತರವಿರುವದು. ಈ ಗ್ರಾಮಕ್ಕೆ ಬಹುತೆಕ ಸರಕಾರದ ಅನೇಕ ಸೌಲಭ್ಯಗಳಿಂದ ವಂಚಿತವಾಗಿದೆಂದು ಗ್ರಾಮಸ್ತರು ಬೇಸರದ ಮನಸ್ಸಿನಿಂತ ಮಾತನಾಡುತ್ತಾರೆ.
ಗ್ರಾ.ಪಂ ಮಹಿಳೆಯರದೆ  ಕಾರೂ ಬಾರು: ರಾಯಬಾಗ ತಾ.ಪಂ ಅಧ್ಯಕ್ಷೆ ನೀಲವ್ವ ಕಾಂಬಳೆ, ತಾ.ಪಂ.ಉಪಾಧ್ಯಕ್ಷೆ ಲಕ್ಷ್ಮೀಬಾಯಿ ತುಪ್ಪದ, ಮುಗಳಖೋಡ ಮತಕ್ಷೆತ್ರದ ಜಿ.ಪಂ.ಸದಸ್ಯೆ ನೀಲವ್ವ ಮರಡಿ, ಕಪ್ಪಲಗುದ್ದಿ ಗ್ರಾಮ ಪಂಚಾಯತ ನೂತನ ಅಧಕ್ಷೆ ಗಂಗವ್ವ ಮೇತ್ರಿ ಎಲ್ಲರೂ ಮಹಿಳಿಯರೆ!! ಇದು ಕಾಕತಾಳಿಯಾಗಿದೆÉ.
ನೂತನ ಗ್ರಾ.ಪಂ ಮಹಿಳಾ ಸದಸ್ಯರಾದ:- ಶ್ರೀಮತಿ ಗಂಗವ್ವ ಮೇತ್ರಿ (ಗ್ರಾ.ಪಂ ಅಧಸ್ಯಕ್ಷರು) ನಿಂಗವ್ವ ಅಂಗಡಿ, ಕಮಲಾ ಕುರನಿಂಗ, ಸುಸೀಲಾ ನಾಯಿಕ, ಶಾಂತಾ ಅಂಗಡಿ, ಲಕ್ಷ್ಮೀಬಾಯಿ ಕೈನಕಟ್ಟಿ, ಪಾರ್ವತಿ ನಾಯಿಕ, ಸುಂದರವ್ವ ಕಲಾರ, ಬೌರವ್ವ ಬಂಗಿ, ಶಾಂತವ್ವ ಚೌಗಲಾ, ಗೌರವ್ವ ಹಾದಿಮನಿ, ಹಾಗೂ ರತ್ನವ್ವ ಮಾದರ.
ಕಪ್ಪಲಗುದ್ದಿ ಗ್ರಾಮ ಪಂಚಾಯತವು, ಉಪಗ್ರಾಮಗಳಾದ ಸುಲ್ತಾನಪೂರ, ಮರಾಕೂಡಿ ಈ ಮೂರು ಗ್ರಾಮಗಳು ಸೇರಿ 21 ಸದಸ್ಯರನ್ನೋಳಗೋಂಡಿದೆ. 21 ಜನ ಸದಸ್ಯರಲ್ಲಿ 12ಜನ ಸದಸ್ಯರು ಮಹಿಳ ಸದಸ್ಯರೆ  ಇರುವದರಿಂದ ಮತ್ತು ಅಧ್ಯಕ್ಷರು ಪಂ/ಜಾ.ಮಹಿಳಿಯೆ  ಇರುವದರಿಂದ ಕಪ್ಪಲಗುದ್ದಿ ಗ್ರಾಮ ಪಂಚಾಯತವು ಮಹಿಳಾ ಪ್ರಧಾನ ಪಂಚಾಯತವಾಗಿದೆ.
ಮೂಲಭೂತ ಸೌಲಭ್ಯಗಳ ವಂಚಿತವಾದ ಕುಗ್ರಾಮ:-ಗ್ರಾಮಕ್ಕೆ ಬಸ್ ಸೌಕರ್ಯವಿಲ್ಲಾ, ಓಬೇರಾಯನ ಕಾಲದ ಸಮೂದಾಯ ಭವನದಲ್ಲಿ 1.ನಂ.ಅಂಗನವಾಡಿ ಕೇಂದ್ರದ ಮಕ್ಕಳ ಆಟ-ಪಾಠ, ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರಾಲಯಗಳಿಲ್ಲಾ, ಪಶು ಆಸ್ಪತ್ರೆಯಿಲ್ಲದೆ ದನ-ಕರುಗಳಿ ಆರೋಗ್ಯ ಕೆಟ್ಟರೆ ದೂರದ ಊರಿನಿಂದ ಪಶು ವೈಧ್ಯರನ್ನು ತರೆತರಬೇಕು, ಗಬ್ಬೇಂದು ನಾರುವ ಚರಂಡಿಗಳು, ನೀರಿಲ್ಲದೆ ನಿಂತಿರುವ ಜಲಕುಂಭಗಳು, ಕಟ್ಟಡ ಪೂರ್ಣಗೋಳ್ಳದೆ ಅರ್ಧಕ್ಕೆ ನಿಂತಿರುವ ಸಮೂದಾಯ ಭವನ, ಪೂರ್ಣಗೋಳ್ಳದ ರಂಗಮಂದಿರ, ಬಟ್ಟೆ ತೋಳೆಯುವ(ದೋಭಿ ಘಾಟ) ಪಾರ್ತೆನಿಯಂ ಕಸದಿಂದ ತುಂಭಿಹೋಗಿದೆ, ತೋಟದ ರಸ್ತೆಗಳು ತಗ್ಗು, ಗುಂಡಿಯಿಂದ ಕುಡಿದ್ದು ಚಕ್ಕಡಿ ಹಾಗೂ ವಾಹನ ಸಂಚಾರಕ್ಕೆ ತುಂಬಾತೋಂದರೆ ಯಾಗಿದ್ದು, ಗ್ರಾಮ ಪಂಚಾಯತಿಗೆ ನೂತನವಾಗಿ ಆಯ್ಕೆಯಾಗಿ ಬಂದ ಸದಸ್ಯರು ಗ್ರಾಮದ ಅಭಿವೃದ್ಧಿಯತ್ತ ಗಮನಹರಿಸುವರೆ ಕಾದು ನೋಡೊಣ.

loading...

LEAVE A REPLY

Please enter your comment!
Please enter your name here